ನ್ಯೂಸ್ ನಾಟೌಟ್ : ಶಾಲಾ ಮಕ್ಕಳು ಇದೀಗ ದಸರಾ ರಜೆಯ ಗಮ್ಮತ್ತಿನಲ್ಲಿದ್ದಾರೆ.ರಜೆ ಹಿನ್ನೆಲೆ ದೂರದೂರಿಗೆ ಕುಟುಂಬ ಸಮೇತ ಪ್ರವಾಸ ಹೋಗೋದು ಸಾಮಾನ್ಯ. ಇದೀಗ ಪ್ರಯಾಣಿಕರಿಗಾಗಿಯೇ ಖಾಸಗಿ ಸಂಸ್ಥೆಯೊಂದು ಭರ್ಜರಿ ಆಫರ್ ನೀಡಿದೆ.
ಹೌದು, ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನವರಾತ್ರಿ ಅಥವಾ ದಸರಾ, ದೀಪಾವಳಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಹಬ್ಬಗಳನ್ನು ಆಚರಿಸಲು ಹೆಚ್ಚಿನ ಸಂಖ್ಯೆಯ ಜನರು ತಮ್ಮ ಊರುಗಳಿಗೆ ಹೋಗುತ್ತಾರೆ. ಈ ವೇಳೆ ರೈಲುಗಳ ಟಿಕೆಟ್ ರಶ್ ಇರೋದ್ರಿಂದ ರೈಲು ಟಿಕೆಟ್ ಖರೀದಿಸುವುದು ತುಂಬಾ ಕಷ್ಟ. ಹೀಗಾಗಿ ಖಾಸಗಿ ಬಸ್ ಸಂಸ್ಥೆಯೊಂದು ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡಿದೆ. ಗ್ರಾಹಕರು ತಮ್ಮಿಚ್ಛೆಯ ಸ್ಥಳಗಳಿಗೆ ತೆರಳಬಹುದು.
ಖಾಸಗಿ ಸಂಸ್ಥೆಯ Abhi Busನಲ್ಲಿ ಕೇವಲ 1 ರೂ.ಗೆ ಬಸ್ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ. ಬಸ್ ಬುಕಿಂಗ್ ಅಪ್ಲಿಕೇಶನ್ AbhiBus ಅಕ್ಟೋಬರ್ 19 ರಿಂದ ಅಕ್ಟೋಬರ್ 25ರ ವರೆಗಿನ ನಡುವಿನ ಪ್ರಯಾಣಕ್ಕೆ ಮಾತ್ರ ಈ ಆಫರ್ ನೀಡಿದೆ. ಈ ಆಫರ್ ಪಡೆಯಲು ಪ್ರಯಾಣಿಕರು “LUCKY1” ರಿಯಾಯಿತಿ ಕೋಡ್ಅನ್ನು ಬಳಸಬೇಕಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಭಿಬಸ್ ಒಂದು ಪ್ರಮುಖ ಆನ್ಲೈನ್ ಬಸ್-ಟಿಕೆಟಿಂಗ್ ಪ್ಲಾಟ್ಫಾರ್ಮ್ ಆಗಿದೆ. ಇದು 2,500 ಖಾಸಗಿ ಬಸ್ ನಿರ್ವಾಹಕರು ಮತ್ತು ಎಲ್ಲಾ ಪ್ರಮುಖ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು (“SRTCs”) ಒಟ್ಟುಗೂಡಿಸುತ್ತದೆ. ಇದು ದೇಶಾದ್ಯಂತ 1,00,000 ಕ್ಕೂ ಹೆಚ್ಚು ಮಾರ್ಗಗಳನ್ನು ಒಳಗೊಂಡಿದೆ. ಇ-ಟಿಕೆಟಿಂಗ್ ವೇದಿಕೆಯ ಹೊರತಾಗಿ, ಅಭಿಬಸ್ 350 ಕ್ಕೂ ಹೆಚ್ಚು ಖಾಸಗಿ ಬಸ್ ನಿರ್ವಾಹಕರು ಮತ್ತು ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಸೇರಿದಂತೆ ಭಾರತದಲ್ಲಿನ 5 SRTC ಗಳಿಗೆ ಅತ್ಯಾಧುನಿಕ ಆನ್ಲೈನ್ ಪ್ರಯಾಣಿಕ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಒದಗಿಸುತ್ತದೆ.