ನ್ಯೂಸ್ ನಾಟೌಟ್ :ಬಿಗ್ ಬಾಸ್, ಹೆಚ್ಚಿನ ಜನರು ಇಷ್ಟ ಪಟ್ಟು ನೋಡುವ ಕಾರ್ಯಕ್ರಮಗಳಲ್ಲಿ ಒಂದು.ಬಿಗ್ ಬಾಸ್ ಆರಂಭವಾದಾಗಿನಿಂದ ಇದರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಬಹಳ ಸಮಯದಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ರಿಯಾಲಿಟಿ ಶೋ ಇದಾಗಿದೆ.
ಇದೀಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುವತ್ತ ಬಿಗ್ ಬಾಸ್ ಮುಂದಾಗಿದೆ.ಸ್ಪರ್ಧಿಗಳು ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರಹಾಕಲು ಕಾತುರದಿಂದ ಕಾಯುತ್ತಿದ್ದಾರೆ.ಅಂತೆಯೇ ಈ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಭಾರೀ ಮೊತ್ತವನ್ನು ಪಾವತಿ ಮಾಡಲಾಗುತ್ತದೆ ಎಂಬ ವಿಚಾರ ನಿಮ್ಗೆ ಗೊತ್ತೆ ಇದೆ. ಇದೀಗ ಬಿಗ್ ಬಾಸ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯ ಹೆಸರು ಇದೀಗ ಹೊರ ಬಿದ್ದಿದೆ. ಈ ಸ್ಪರ್ಧಿ ಕೇವಲ 3 ದಿನಕ್ಕೆ ಪಡೆದಿರುವ ಸಂಭಾವನೆ 2 ಕೋಟಿ ರೂಪಾಯಿ..! ಅಂದರೆ ನೀವು ಅಚ್ಚರಿಗೊಳಗಾಗುತ್ತೀರಾ..
ಹೌದು, ಖ್ಯಾತ ನಟ, ನಟಿಯರ ಸಂಭಾವನೆ ಸಾಮಾನ್ಯವಾಗಿ ಜಾಸ್ತಿಯಾಗಿಯೇ ಇರುತ್ತದೆ. ಮಾರುಕಟ್ಟೆಯಲ್ಲಿ ಅವರಿಗಿರುವ ಬೇಡಿಕೆಗೆ ಅನುಸಾರವಾಗಿ ಅವರ ಸಂಭಾವನೆ ನಿಗದಿಯಾಗುತ್ತದೆ. ಅದರಂತೆ ಬಿಗ್ ಬಾಸ್ ಸೀಸನ್ ೪ರಲ್ಲಿ ಕಾಣಿಸಿಕೊಂಡಿದ್ದ ಸ್ಪರ್ಧಿ ಇದುವರೆಗೆ ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎನ್ನಲಾಗಿದೆ. ಇವರು ಬಿಗ್ ಬಾಸ್ ಮನೆಯಲ್ಲಿ ಕಾಣಸಿಕೊಂಡಿದ್ದು, ಕೇವಲ 3 ದಿನಗಳವರೆಗೆ ಮಾತ್ರ. ಆ ಮೂರು ದಿನಕ್ಕೆ ಪಡೆದ ಸಂಭಾವನೆ ಬರೋಬ್ಬರಿ ಎರಡು ಕೋಟಿ..!
ನಟಿ ಪಮೇಲಾ ಆಂಡರ್ಸನ್ ಈ ಸಂಭಾವನೆಗೆ ಒಳಗಾದವರು.ಕೇವಲ ಮೂರು ದಿನಕ್ಕೆ ಅಷ್ಟೊಂದು ಸಂಭಾವನೆ ಪಡೆದಿದ್ದರೆ ಅವರು ಇನ್ನು ಹೆಚ್ಚು ದಿನ ಬಿಗ್ ಬಾಸ್ನಲ್ಲಿರುತ್ತಿದ್ದರೆ ಇನ್ನೆಷ್ಟು ಪೇಮೆಂಟ್ ಬರುತ್ತಿತ್ತೋ..ಎಂಬ ಯೋಚನೆ ಎಲ್ಲರನ್ನು ಕಾಡುತ್ತಿರಬಹುದು.ಅಂದ ಹಾಗೆ ಪಮೇಲಾ ಆಂಡರ್ಸನ್ ಕೆನಡಿಯನ್ -ಅಮೇರಿಕನ್ ನಟಿ ಮತ್ತು ರೂಪದರ್ಶಿ. ಪ್ಲೇಬಾಯ್ ಮ್ಯಾಗಜೀನ್ನಲ್ಲಿ ಮಾಡೆಲಿಂಗ್ ಕೆಲಸಕ್ಕಾಗಿ ಮತ್ತು ದೂರದರ್ಶನ ಸರಣಿ ಬೇವಾಚ್ನಲ್ಲಿ ಸಿಜೆ ಪಾರ್ಕರ್ ಪಾತ್ರದಿಂದಲೇ ಇವರು ಹೆಸರುವಾಸಿ.
ಇವರು ಹಿಂದಿ ಬಿಗ್ ಬಾಸ್ ನ ಸೀಸನ್ 4ರಲ್ಲಿ ಕಾಣಿಸಿಕೊಂಡಿದ್ದರು. ಈ ನಟಿ ಬಾಲ್ಯದಲ್ಲಿಯೇ ಕಿರುಕುಳವನ್ನು ಅನುಭವಿಸಿದ್ದರು ಎನ್ನಲಾಗಿದೆ. ಇನ್ನು ತನ್ನ 6 ರಿಂದ 10 ವರ್ಷ ವಯಸ್ಸಿನವರೆಗೆ ಬೇಬಿ ಸೀಟರ್ ನಿಂದಲೇ ಕಿರುಕುಳ ಅನುಭವಿಸಿದ್ದ ಬಗ್ಗೆ 2014 ರಲ್ಲಿ ಇವರು ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದರು. ಅಲ್ಲದೆ 12 ವರ್ಷದವಳಿದ್ದಾಗ 25 ವರ್ಷದ ಯುವಕನ ಕಾಮಕ್ಕೆ ಗುರಿಯಾಗಿರುವ ಬಗ್ಗೆಯೂ ಹೇಳಿಕೊಂಡಿದ್ದರು. ಇನ್ನು ತಾನು 14 ವರ್ಷದವಳಿದ್ದಾಗ ತನ್ನ ಬಾಯ್ ಫ್ರೆಂಡ್ ಮತ್ತು ಆತನ ಆರು ಜನ ಸ್ನೇಹಿತರಿಂದ ಸಾಮೂಹಿಕ ಬಲತ್ಕಾರಕ್ಕೆ ಒಳಗಾದ ಬಗ್ಗೆಯೂ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಪಮೇಲಾ ಆಂಡರ್ಸನ್ ಹಿಂದಿ ಬಿಗ್ ಬಾಸ್ ನ ಸೀಸನ್ 4 ರಲ್ಲಿ ಬಿಗ್ ಬಾಸ್ ಮನೆಯೊಳಗೆ ಕಾಣಿಸಿಕೊಂಡಿದ್ದರು. ಈ ನಟಿ 3 ದಿನಗಳ ಕಾಲ ಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದರು. ಈ ಮೂರು ದಿನಗಳಿಗಾಗಿ ಇವರು ಪಡೆದಿದ್ದು 2 ಕೋಟಿ ರೂಪಾಯಿ ಎನ್ನುವ ಮಾಹಿತಿ ಇದೀಗ ಕೇಳಿ ಬಂದಿದೆ.