ನ್ಯೂಸ್ ನಾಟೌಟ್ : ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Kempegowda International Airport) ಚಿನ್ನವನ್ನು ಕಣ್ತಪ್ಪಿಸಿ ತರಲು ಜನರು ಮಾಡುವ ಹೊಸ ಹೊಸ ಉಪಾಯಗಳಲ್ಲಿ ಇದು ಕೂಡ ಒಂದು.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಎರಡು ದಿನದ ಹಿಂದೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಸೀಜ್ ಮಾಡಿದ್ದಾರೆ. ದುಬೈ ಹಾಗೂ ಕೊಲೊಂಬೊದಿಂದ ಬಂದ ನಾಲ್ವರು ಪ್ರಯಾಣಿಕರ ತೀವ್ರ ತಪಾಸಣೆ ವೇಳೆ ಅವರಲ್ಲಿ ಮೂರು ಕೆಜಿ ಚಿನ್ನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಅದರಲ್ಲಿ ಒಬ್ಬ ಗುದದ್ವಾರದಲ್ಲಿ (Gold Found in anus). ಇನ್ನೊಬ್ಬ ಕಾಲಿನ ಮಂಡಿಯಲ್ಲಿ ಆಪರೇಟ್ ಮಾಡಿ ಚಿನ್ನ ಇಟ್ಟುಕೊಂಡು ಬಂದಿದ್ದ.
ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಲ್ಲಿ ನಾಲ್ವರು ಪ್ರಯಾಣಿಕರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಒಟ್ಟು 1 ಕೋಟಿ 77 ಲಕ್ಷ ಮೌಲ್ಯದ ಮೂರು ಕೆಜಿ ಚಿನ್ನದ ಬಿಸ್ಕೆಟ್ಗಳು ಸಿಕ್ಕಿವೆ. ನಾಲ್ವರೂ ಪ್ರಯಾಣಿಕರು ಈಗ ಪೊಲೀಸರ ವಶದಲ್ಲಿದ್ದು, ಈ ಸಾಗಾಟದ ಹಿಂದಿರುವ ಜಾಲವನ್ನು ಭೇದಿಸಲು ಪ್ರಯತ್ನಿಸಲಾಗುತ್ತಿದೆ.