ನ್ಯೂಸ್ ನಾಟೌಟ್: ಹಾವು ಎಂದಾಕ್ಷಣ ಒಮ್ಮೆಲೇ ದಂಗಾಗಿಬಿಡ್ತೇವೆ. ಅದರಲ್ಲೂ ಕಾಳಿಂಗ ಸರ್ಪ ಎಂಬ ಹೆಸರು ಕೇಳಿದಾಗ ಮೈ ಜುಮ್ ಎಂದೆನಿಸುತ್ತದೆ. ಆದರೆ ಇಂಥ ಅಪಾಯಕಾರಿ, ವಿಷಯುಕ್ತ ಹಾವಿನ ಜತೆ ಮನುಷ್ಯ ಆತ್ಮೀಯತೆಯಿಂದ ವರ್ತಿಸಲು ಸಾಧ್ಯವೇ..? ಆದರೆ ಇಲ್ಲೊಬ್ಬ ವ್ಯಕ್ತಿ ಇದು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾನೆ. ಸದ್ಯ ಈತನ ವಿಡಿಯೋ ಇದೀಗ ಸಾಮಾಜಿ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಯುವಕನೊಬ್ಬ ಮಗುವನ್ನು ಸ್ನಾನ ಮಾಡಿಸುವಂತೆ ಅಪಾಯಕಾರಿ ಕಾಳಿಂಗ ಸರ್ಪವನ್ನು ಸ್ನಾನ ಮಾಡಿಸುವ 19 ಸೆಕೆಂಡ್ಗಳ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಯಾವುದೇ ಹೆದರಿಕೆಯಿಲ್ಲದೆ ಬಕೆಟ್ನಿಂದ ನೀರು ತೆಗೆದು ಕಾಳಿಂಗ ಸರ್ಪದ ತಲೆಗೆ ಹಾಕಿ ಸ್ನಾನ ಮಾಡಿಸುತ್ತಾನೆ. ಅಲ್ಲದೇ ತನ್ಮಯತೆಯಿಂದ ಹಾವಿನ ತಲೆಯನ್ನು ಸವರುತ್ತಾನೆ. ಹಾವು ಕೂಡ ಯುವಕನಿಗೆ ತಕ್ಕ ರೀತಿಯಲ್ಲಿ ಸಹಕರಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸ್ನಾನ ಮಾಡಿಸುವ ಯುವಕನ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಯುವಕನ ಕಾರ್ಯವನ್ನು ಶ್ಲಾಘನೆ ವ್ಯಕ್ತವಾದರೂ ಕೆಲವರು ಹುಚ್ಚು ಸಾಹಸ ಎಂದು ಬಣ್ಣಿಸಿದ್ದಾರೆ.
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದಾ ಈ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಕಾಳಿಂಗ ಸರ್ಪಕ್ಕೆ ಸ್ನಾನ. ಹಾವುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಸ್ವಚ್ಛವಾಗಿಟ್ಟುಕೊಳ್ಳಲು ನಿಯಮಿತವಾಗಿ ಪೊರೆ ಕಳಚುವುದು ಸಹಜ. ಆದರೂ ಬೆಂಕಿಯೊಡನೆ ಸರಸವಾಡುವ ಪ್ರಯತ್ನಅಗತ್ಯವಿದೆವೇ..? ಎಂದು ಅವರು ಬರೆದುಕೊಂಡಿದ್ದಾರೆ.ಯುವಕ ಕಾಳಿಂಗ ಸರ್ಪವನ್ನು ಸ್ನಾನ ಮಾಡಿಸುವ ವಿಡಿಯೋವನ್ನು 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.