ನ್ಯೂಸ್ ನಾಟೌಟ್: ಆಗಸ್ಟ್ 1, 2023ರಂದು ಬಾಲಿವುಡ್ ನಟಿ ಇಲಿಯಾನಾ ಡಿ’ಕ್ರೂಜ್ ಮತ್ತು ಪಾರ್ಟ್ನರ್ ಮೈಕೆಲ್ ಡೋಲನ್ ಗಂಡು ಮಗುವಿಗೆ ಪೋಷಕರಾಗಿದ್ದಾರೆ. ತಮ್ಮ ಮಗುವಿಗೆ ಕೋವಾ ಫೀನಿಕ್ಸ್ ಡೋಲನ್ ಎಂದು ನಾಮಕರಣ ಮಾಡಿದ ಜೋಡಿ, ಆಗಾಗ್ಗೆ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಕ್ಟೋಬರ್ 1 ರಂದು ಕೋವಾಗೆ 2 ತಿಂಗಳು ತುಂಬಿದೆ.
ನಟಿ ಇಲಿಯಾನಾ ತಮ್ಮ ಇನ್ ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಮಗುವಿನೊಂದಿಗೆ ಇರುವ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು, ಆಗಸ್ಟ್ 5, 2023 ರಂದು ಇಲಿಯಾನಾ ಮಗುವಿನ ಮೊದಲ ಚಿತ್ರವನ್ನು ಹಂಚಿಕೊಂಡಿದ್ದರು. ಈ ಫೋಟೋದ ಜೊತೆ ತಮ್ಮ ಮಗುವಿನ ಹೆಸರನ್ನು ಇಲಿಯಾನ ಬಹಿರಂಗಪಡಿಸಿದ್ದರು.
“ನಮ್ಮ ಮುದ್ದಾದ ಗಂಡು ಮಗುವನ್ನು ಜಗತ್ತಿಗೆ ಸ್ವಾಗತಿಸಲು ಸಂತೋಷಪಡುತ್ತೇವೆ ಎಂಬುದನ್ನು ಪದಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಹೃದಯ ತುಂಬಿದೆ ಬರುತ್ತಿದೆ” ಎಂದು ಬರೆದುಕೊಂಡಿದ್ದರು.
ಇನ್ನು ಇಲಿಯಾನ ಮದುವೆ ಮುನ್ನ ಗರ್ಭಿಣಿಯಾಗಿದ್ದರು ಎಂಬ ಊಹಾಪೋಹ ಇಂದಿಗೂ ಹರಿದಾಡುತ್ತಿದೆ. ಪ್ರೆಗ್ನೆನ್ಸಿ ಅನೌನ್ಸ್ ಮಾಡುತ್ತಿದ್ದಂತೆ, ಅನೇಕ ನೆಟ್ಟಿಗರು ಮದುವೆ ಯಾವಾಗ ಆಯ್ತು? ಮಗುವಿನ ತಂದೆ ಯಾರು? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದರು.
ಆದರೆ ಇಲಿಯಾನಾ ತಮ್ಮ ಗೆಳೆಯ ಮೈಕೆಲ್ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು. ಆದರೆ ಆ ಬಳಿಕ ಅಂದರೆ ಜುಲೈ 17, 2023 ರಂದು ಮೊದಲ ಬಾರಿಗೆ ತನ್ನ ಗೆಳೆಯನೊಂದಿಗೆ ಕಳೆದ ಕೆಲವು ಸುಂದರವಾದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದರು ಎನ್ನಲಾಗಿದೆ.