ನ್ಯೂಸ್ ನಾಟೌಟ್: ಸ್ಯಾಂಡಲ್ವುಡ್ ನಟ, ನವರಸ ನಾಯಕ ಜಗ್ಗೇಶ್ ಕೆಲ ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ದೆಹಲಿಯಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಕಾವೇರಿ ಹೋರಾಟದ ವೇಳೆ ಬರಲಾಗಲಿಲ್ಲ ಎಂದು ಅವರನ್ನು ಹಲವರು ಟೀಕಿಸಿದ್ದರು. ಈಗ ಯತಿರಾಜ್ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಟ ಜಗ್ಗೇಶ್ ಸುದೀರ್ಘ ಪ್ರವಾಸದ ಹಿನ್ನೆಲೆಯಲ್ಲಿ ಬೆನ್ನುನೋವು ಕಾಣಿಸಿಕೊಂಡಿದೆ ಎಂದೂ ಹೇಳಿಕೊಂಡು, ಚಿಕಿತ್ಸೆಯ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಜಗ್ಗೇಶ್ ಕಿರಿ ಪುತ್ರ ಯತಿರಾಜ್ ಅನಾರೋಗ್ಯಕ್ಕೆ ಈಡಾಗಿದ್ದಾರೆ.
ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಿರು ವಿಡಿಯೋ ಪೋಸ್ಟ್ ಮಾಡಿರುವ ಯತಿ, ತಮಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಎಲ್ಲರೂ ಈ ಜ್ವರದಿಂದ ಸುರಕ್ಷಿತವಾಗಿರಿ ಎಂದೂ ಮನವಿ ಮಾಡಿದ್ದಾರೆ.
ಯತಿರಾಜ್ ಅವರ ಪೋಸ್ಟ್ ನೋಡಿದ ನೆಟ್ಟಿಗರು, ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಬ್ರದರ್ ಎಂದು ಹರಸುತ್ತಿದ್ದಾರೆ. ಶೀಘ್ರ ಹುಷಾರಾಗಿ ಎಂದೂ ಸಾಕಷ್ಟು ಮಂದಿ ಕಾಮೆಂಟ್ ಮೂಲಕವೇ ಶುಭ ಕೋರುತ್ತಿದ್ದಾರೆ.
ಈ ಹಿಂದೆ ಅಪ್ಪ ಜಗ್ಗೇಶ್ ಜತೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಯತಿರಾಜ್, ಇತ್ತೀಚಿನ ದಿನಗಳಲ್ಲಿ ನಟನೆ ಬದಿಗಿರಿಸಿ, ತಾಂತ್ರಿಕವಾಗಿ ಹೊಸ ಹೊಸ ಕಾರ್ಯಗಳತ್ತ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.