ನ್ಯೂಸ್ ನಾಟೌಟ್: ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ಮತ್ತೆ ಮತ್ತೆ ಸಾಭೀತಾದಂತಿದೆ. ಅತ್ಯಂತ ಕಡಿಮೆ ವಯಸ್ಸಿನ ಹುಡುಗಿ ಅಥವಾ ಹುಡುಗ ತಮ್ಮ ಅಪ್ಪನ ವಯಸ್ಸಿಗಿಂತಲೂ ಹಿರಿಯ ಸಂಗಾತಿಯಾಗಿ ಪಡೆಯುತ್ತಿದ್ದಾರೆ. ಇಂತಹದ್ದೇ ಘಟನೆಯೊಂದು ವೈರಲ್ ಆಗುತ್ತಿದ್ದು ಎಲ್ಲೆಡೆ ಸುದ್ದಿ ಮಾಡುತ್ತಿದೆ.
ತನಗಿಂತ 42 ವರ್ಷ ಕಡಿಮೆ ವಯಸ್ಸಿನ ಹುಡುಗಿಯನ್ನು ವೃದ್ಧರೊಬ್ಬರು ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಈ ಜೋಡಿ ಆಗಾಗ ಟ್ರೋಲ್ ಆಗುತ್ತಲೇ ಇದ್ದಾರೆ.
ಈ ಸ್ಟೋರಿಯಲ್ಲಿ 70 ವರ್ಷ ವಯಸ್ಸಿನ ಡೇವ್ ಹಿರೋ ಆದ್ರೆ 28 ವರ್ಷದ ಜಾಕಿ ಹಿರೋಯಿನ್. ಇವರಿಬ್ಬರು ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇವರಿಬ್ಬರ ಭೇಟಿ ೭ ವರ್ಷಗಳ ಹಿಂದೆ ಡೇಟಿಂಗ್ ಅಪ್ಲಿಕೇಶನ್ನಲ್ಲಿ ಆಗಿತ್ತು ಎನ್ನಲಾಗಿದೆ. ಇದರ ನಂತರ ಡೇವ್, ಜಾಕಿಯನ್ನು ಭೇಟಿಯಾಗಲು ಅವಳ ದೇಶ ಫಿಲಿಪೈನ್ಸ್ (Philippines) ಗೆ ಬಂದಿದ್ದ. ಭೇಟಿ ನಂತ್ರ ಇಬ್ಬರು ಡೇಟಿಂಗ್ ಶುರು ಮಾಡಿದ್ದರು.
ನನ್ನ ಪತಿ ಡೇವ್ ರನ್ನು ಜನರು ನನ್ನ ಅಜ್ಜನೆಂದು ಹೇಳ್ತಾರೆ. ಆದ್ರೆ ನಮ್ಮಿಬ್ಬರ ಮಧ್ಯೆ ನಿಜವಾದ ಪ್ರೀತಿ ಇದೆ. ಜನರು, ನಾನು ಡೇವ್ ಹಣಕ್ಕಾಗಿ ಪ್ರೀತಿ ನಾಟಕವಾಡ್ತಿದ್ದೇನೆಂದು ಹೇಳುತ್ತಾರೆ. ಆದ್ರೆ ನಾನು ಡೇವ್ ರನ್ನು ಹಣಕ್ಕಾಗಿ ಪ್ರೀತಿ ಮಾಡಿಲ್ಲ ಎಂದು ಜಾಕ್ ಹೇಳಿದ್ದಾಳೆ.
ಸಾಮಾಜಿಕ ಜಾಲತಾಣ ಟಿಕ್ ಟಾಕ್ ನಲ್ಲಿ ಈ ಜೋಡಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. @dave_jackie2818 ಹೆಸರಿನ ಟಿಕ್ ಟಾಕ್ ಖಾತೆಯನ್ನು ಇವರು ಹೊಂದಿದ್ದಾರೆ. ಇದ್ರಲ್ಲಿ ನಾನಾ ವಿಡಿಯೋಗಳನ್ನು ಇವರು ಪೋಸ್ಟ್ ಮಾಡ್ತಿರುತ್ತಾರೆ.
ನಮ್ಮಿಬ್ಬರ ವಯಸ್ಸಿನ ಮಧ್ಯೆ 42 ವರ್ಷಗಳ ಅಂತರವಿದೆ. ಆದ್ರೆ ಇದ್ರಿಂದ ನಮಗೆ ತೊಂದರೆ ಏನೂ ಆಗಿಲ್ಲ ಎನ್ನುತ್ತಾಳೆ ಹುಡುಗಿ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಕಮೆಂಟ್ ಗೆ ಉತ್ತರ ಉತ್ತರ ನೀಡಿರುವ ಜಾಕಿ, ಡೇವ್ ಅಜ್ಜನಲ್ಲ. ಆತನಿಗೆ ಯಾವುದೇ ಮಕ್ಕಳಿಲ್ಲ. ನಾನು ನಿಮಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಬದಲು ಸುಮ್ಮನಿರೋದು ಒಳ್ಳೆಯದು. ಯಾಕೆಂದ್ರೆ ನಾವು ನೀವೆಲ್ಲ ವೃದ್ಧರಾಗ್ತೇವೆ. ಬೇರೆಯವರಿಗೆ ಒಳ್ಳೆಯದು ಮಾಡಲು ಸಾಧ್ಯವಾಗಿಲ್ಲವೆಂದ್ರೆ ಸುಮ್ಮನಿರಿ ಎಂದು ಜಾಕಿ ಹೇಳಿದ್ದಾಳೆ.