ನ್ಯೂಸ್ ನಾಟೌಟ್ : ಗಣೇಶೋತ್ಸವ ಸಂಭ್ರಮದಲ್ಲಿ ತೇಲಾಡಿದ್ದ ಭಕ್ತರ ಮುಂದೆಯೇ ವೇದಿಯಲ್ಲಿ ಯುವತಿಯೊಬ್ಬಳು ತುಂಡುಡುಗೆ ತೊಟ್ಟು ಡಾನ್ಸ್ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.ಇದರಿಂದ ಗರಂ ಆದ ಕೆಲ ಜನರು ಈ ಡಾನ್ಸ್ ಗಳಿಗೆಲ್ಲ ಹೇಗೆ ಪರ್ಮಿಶನ್ ಕೊಟ್ರು ಅನ್ನೋದರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ಈ ಘಟನೆ ನಡೆದಿದ್ದು ಕೊಪ್ಪಳ ಜಿಲ್ಲೆಯಲ್ಲಿ. ಭಾರಿ ಹೆಸರು ಪಡೆದಿರುವ ಹಾಗೂ ಹಿಂದು ಮಹಾಸಭಾ (Koppala Hindu Mahasabha) ಆಯೋಜಿಸಿರುವ ಕೊಪ್ಪಳ ಗಣೇಶೋತ್ಸವದಲ್ಲಿ (Koppala Ganeshothsava) ಯುವತಿಯೊಬ್ಬಳು ತುಂಡು ಬಟ್ಟೆ ತೊಟ್ಟು ಡ್ಯಾನ್ಸ್ (Young lady dance in Half dress) ಮಾಡಿದ್ದಾಳೆ. ಇದು ಈಗ ಸದ್ಯಕ್ಕೆ ಭಾರಿ ಚರ್ಚೆಗೆ ಕಾರಣವಾಗಿರುವ ವಿಷಯವಾಗಿದೆ. ಸಂಸ್ಕೃತಿ ಬಗ್ಗೆ ಉದ್ದುದ್ದ ಭಾಷಣ ಮಾಡುವವರು ಧಾರ್ಮಿಕ ಕಾರ್ಯಕ್ರಮದಲ್ಲಿ ಈ ಹುಡುಗಿಗೆ ತುಂಡು ಬಟ್ಟೆ ತೊಟ್ಟು ಡ್ಯಾನ್ಸ್ (Obscene dance) ಮಾಡೋದಕ್ಕೆ ಅನುಮತಿ ಕೊಟ್ಟವರ್ಯಾರು? ಇಂತಹ ಡಾನ್ಸ್ ಗಳಿಗೆಲ್ಲ ಬೇರೆನೇ ವೇದಿಕೆ ಇದೆ. ಅಲ್ಲಿ ಹೋಗಿ ಕುಣಿಯಲಿ.ಆದರೆ ಇದು ಪವಿತ್ರವಾದ ಹಬ್ಬ ಹಾಗೂ ಗಣೇಶೋತ್ಸವ ಕಾರ್ಯಕ್ರಮ ಇಂತಹ ವೇದಿಯಲ್ಲಿ ಈ ರೀತಿ ಬಟ್ಟೆಯುಟ್ಟು ಹೆಜ್ಜೆ ಹಾಕೋದು ನಿಜಕ್ಕೂ ಖಂಡನೀಯ ಎಂದು ಕೆಲವರ ವಾದ.
ಅಂದ ಹಾಗೆ ಕೊಪ್ಪಳದ ಕಾವ್ಯಾನಂದ ಪಾರ್ಕಿನಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಉತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಸೇರಿದ್ದರು. ಈ ವೇಳೆ ಸಾರ್ವಜನಿಕರಿಗಾಗಿ ಮನೋರಂಜನೆ ಕಾರ್ಯಕ್ರಮ (Entertainment Programme) ಕೂಡ ಆಯೋಜನೆ ಮಾಡಲಾಗಿತ್ತು.ಇದೇ ಸಂದರ್ಭದಲ್ಲಿ ಸ್ಟೇಜ್ ಹತ್ತಿ ಬಂದ ಯುವತಿ ತುಂಡು ಬಟ್ಟೆ ತೊಟ್ಟು ಹಿಂದಿ ಹಾಡಿಗೆ ಪ್ರಚೋದಕವಾಗಿ ಕುಣಿದೇ ಬಿಟ್ಟಳು(Provocative dance).ಇದನ್ನು ಕಂಡು ಕೆಲವರು ಭಾರಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಇಲ್ಲಿ ಯುವತಿಗೇನು ಗೊತ್ತಿಲ್ಲ. ಆಕೆ ತಿಳಿಯದೇ ಬಂದು ಡಾನ್ಸ್ ಮಾಡಿದ್ದಾಳೆ ಇದನ್ನ ಜವಾಬ್ದಾರಿಯನ್ನು ಆಯೋಜಕರೇ ಹೊತ್ತಿದ್ದಾರೆ.ಈ ರೀತಿಯ ನೃತ್ಯಗಳು ಈಗ ಎಲ್ಲ ಕಡೆ ಸಾಮಾನ್ಯವಾಗಿದೆ. ಮಕ್ಕಳು ಇವುಗಳನ್ನು ಪ್ರದರ್ಶಿಸುತ್ತಾರೆ. ಆದರೆ, ಇದನ್ನು ಗಣೇಶೋತ್ಸವದ ವೇದಿಕೆಯಲ್ಲಿ ನಡೆಸಲು ಆಯೋಜಕರು ಹೇಗೆ ಪರ್ಮಿಷನ್ ಕೊಟ್ಟರು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಕೆಲವರು ಆಯೋಜಕರಿಗೆ ಸಾಮಾನ್ಯ ಜ್ಞಾನದ ಕೊರತೆಯಿದೆ. ಯಾವ ರೀತಿಯ ನೃತ್ಯ ಎನ್ನುವ ಬಗ್ಗೆ ಆರಂಭದಲ್ಲಿ ಮಾಹಿತಿ ಇರುವುದಿಲ್ಲ, ನೃತ್ಯ ಮಾಡುವವರು ವೇದಿಕೆ, ಸಮಯ, ಸಂದರ್ಭ ನೋಡಿಕೊಂಡು ತಮ್ಮ ಕಲೆಯನ್ನು ಪ್ರದರ್ಶನ ಮಾಡಬೇಕು ಎಂಬ ವಾದವನ್ನೂ ಮಂಡಿಸಿದ್ದಾರೆ.ಇದೇ ವೇಳೆ ಕೆಲವರು ಬಿಡಿಪಾ.. ಇದನ್ನೇ ದೊಡ್ಡ ವಿಷಯ ಮಾಡ್ಬೇಡಿ.. ಇದರಲ್ಲಿ ತಲೆ ಹೋಗುವಂತದ್ದು ಏನೂ ಇಲ್ಲ. ನಮ್ಮ ಮಕ್ಕಳೇ ಅಲ್ಲವೇ ಡ್ಯಾನ್ಸ್ ಮಾಡಿದ್ದು ಅವರಿಗೂ ಪ್ರೋತ್ಸಾಹ ನೀಡಿ ಎಂದು ಸಮಾಧಾನ ಹೇಳಿದ್ದಾರೆ. ಒಟ್ಟಿನಲ್ಲಿ ಗಣೇಶನ ವೇದಿಕೆಯ ಮುಂದಿನ ಪ್ರಚೋದಕ ಡ್ಯಾನ್ಸ್ ಸುದ್ದಿ ಭಾರಿ ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ.