ನ್ಯೂಸ್ ನಾಟೌಟ್ :ಮದುವೆ ಅಂದ ಕೂಡಲೇ ಹೆಣ್ಣು ಮಕ್ಕಳಿಗೆ ಚಿಂತೆ ಕಾಡುತ್ತೆ.ಚಿನ್ನ ಬೇಕು.ಹಣ ಬೇಕು ಹೀಗೆ..ಅದರಲ್ಲೂ ಬಡ ಕುಟುಂಬಕ್ಕೆ ಇದು ಇನ್ನೂ ಸವಾಲಾಗಿರುತ್ತದೆ.ಶ್ರೀಮಂತ ಕುಟುಂಬದವರು ಧಾರಾಳ ಖರ್ಚು ಮಾಡಿ ಮದುವೆ ಮಾಡಿ ಮುಗಿಸುತ್ತಾರೆ. ಅಳಿಯಂದಿರಿಗೆ ಗಿಫ್ಟ್ ಕೂಡ ಕೊಡುತ್ತಾರೆ. ಆದರೆ ಬಡವರಿಗೆ ಇದು ಅಸಾಧ್ಯ.ಆದರೆ ಇಲ್ಲೊಂದು ಗ್ರಾಮದಲ್ಲಿ ಹೆಣ್ಣು ಮಕ್ಕಳನ್ನು ಮದುವೆಯಾದರೆ ಅಳಿಯನಿಗೆ ಬಂಪರ್ ಗಿಫ್ಟ್ ಸಿಗುತ್ತೆ ಗೊತ್ತಾ..?ಮನೆಯ ಆಸ್ತಿಪಾಸ್ತಿಯನ್ನೇ ನೀಡಲಾಗುತ್ತೆ..ಅಂದ ಹಾಗೇ ಯಾವುದದು ‘ಲಕ್ಕಿ ಅಳಿಯಂದಿರ’ ಆ ಊರು? ಇಲ್ಲಿದೆ ಮಾಹಿತಿ..
ಉತ್ತರ ಪ್ರದೇಶದ ಅಕ್ಬರ್ಪುರದ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಮೀ ದೂರದಲ್ಲಿರುವ ‘ದಮದನ್ ಪೂರ್ವʼ (‘ಅಳಿಯಂದಿರ ಗ್ರಾಮʼ) ದಲ್ಲಿ ಇಂಥದ್ದೊಂದು ಅಳಿಯಂದಿರ ಗ್ರಾಮವೊಂದಿದೆ.ಇಲ್ಲಿ ಮದುವೆಯಾದ ಅಳಿಯಂದಿರು ಬಹಳ ಪುಣ್ಯವಂತರು.ಆ ಊರಿನಲ್ಲಿ ಯಾವ ಹೆಣ್ಣು ಮಕ್ಕಳನ್ನೇ ಮದುವೆಯಾಗಲಿ ಅವರಿಗೆ ಆಸ್ತಿ ಪಾಸ್ತಿ ಸಿಗೋದು ಖಚಿತ. ಈ ಗ್ರಾಮವನ್ನು ಮೊದಲು ಸರಿಯಾಪುರ ಎಂದು ಕರೆಯಲಾಗುತ್ತಿತ್ತು. 10 ವರ್ಷದ ಹಿಂದೆ ‘ದಮದನ್ ಪೂರ್ವ’ಎಂದು ಹೆಸರು ಇಡಲಾಗಿದೆ.ಇಲ್ಲಿ 500 ಕ್ಕಿಂತ ಹೆಚ್ಚು ಜನಸಂಖ್ಯೆ ಮತ್ತು 250 ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಪುಟ್ಟ ಊರಿದು.
ಹಾಗಾದರೆ ಈ ಊರಲ್ಲೇ ಯಾಕೆ ಈ ಪದ್ಧತಿ ಅನ್ನುವ ಪ್ರಶ್ನೆ ನಿಮ್ಮನ್ನು ಕಾಡದಿರದು.ಹೌದು ಅದೊಂದು ಟೈಮ್ನಲ್ಲಿ ಆರ್ಥಿಕ ಸಂಕಷ್ಟ ಹಿನ್ನಲೆಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.70ರ ದಶಕದಲ್ಲಿ ಈ ಪದ್ಧತಿಗೆ ನಾಂದಿ ಹಾಡಲಾಯಿತು.ಗ್ರಾಮದ ಕೆಲವು ಕುಟುಂಬಗಳು ತಮ್ಮ ಹೆಣ್ಣುಮಕ್ಕಳು ಮದುವೆ ಆದ ಬಳಿಕ ಅವರ ಗಂಡದಿರ ಜೊತೆ ಪತ್ನಿ ಮನೆಯಲ್ಲೇ ವಾಸಿಸಲು ಅನುಮತಿ ನೀಡಿತ್ತು. ಯಾಕೆಂದರೆ ಗಂಡದಿರ ಆರ್ಥಿಕ ಸ್ಥಿತಿ ಹದಗೆಟ್ಟಿರೋದ್ರಿಂದ ಕುಟುಂಬಗಳು ಈ ಅನುಮತಿಯನ್ನು ನೀಡಿದ್ದವು.
ಹಣ ಕೊರತೆ ಹಿನ್ನಲೆಯಲ್ಲಿ ಅಳಿಯಂದಿರಿಗೆ ಸಹಾಯವಾಗಲೆಂದು ಪತ್ನಿಯ ಕುಟುಂಬದವರು ಅಳಿಯನಿಗೆ ಮನೆ, ಜಮೀನು ಅವರ ಹೆಸರಿಗೆ ನೀಡಿದ್ದರು.ಅಂದಿನಿಂದ ಈ ಸಂಪ್ರದಾಯ ಮುಂದುವರಿಸಿಕೊಂಡು ಬರಲಾಗುತ್ತಿದೆ. ಯಾರೇ ಮದುವೆಯಾದರೂ ಅಳಿಯಂದಿರು ಮಾತ್ರ ಪತ್ನಿ ಮನೆಯಲ್ಲೇ ಇರುತ್ತಾರೆ ಮಾತ್ರವಲ್ಲ ಅವರಿಗೆ ಜಮೀನು, ಮನೆ ಇತ್ಯಾದಿ ಸೌಲಭ್ಯವನ್ನು ಪತ್ನಿ ಮನೆಯವರು ನೀಡುತ್ತಾ ಬಂದಿದ್ದಾರೆ.
ಇದೀಗ ಇಂತಹ ಪದ್ಧತಿಗೆ ಮೂರು ತಲೆಮಾರು ದಾಟಿದೆ.ಅಲ್ಲಿಂದ ಇವತ್ತಿನವರೆಗೂ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.ಈ ಗ್ರಾಮ ಇದೀಗ ಅಳಿಯಂದಿರ ಗ್ರಾಮವಾಗಿಯೇ ಉಳಿದಿದೆ ಎಂದು ಊರಿನ ಹಿರಿಯರು ಹೇಳುತ್ತಾರೆ.ಒಟ್ಟಿನಲ್ಲಿ ಇಂತಹ ನಿಯಮಗಳಿಂದ ಅಳಿಯಂದಿರು ಫುಲ್ ಖುಷ್ ಆಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಯುವಕರು ಸ್ವಯಂ ಪ್ರೇರಿತ ಮುಂದೆ ಬಂದು ಈ ಗ್ರಾಮದ ಯುವತಿಯರನ್ನು ಮದುವೆ ಆಗಲು ಇಚ್ಛಿಸುತ್ತಾರೆ. ಮದುವೆಯಾಗಿ ಸುಖ ಸಂಸಾರ ನಡೆಸುತ್ತಾರೆ.