ನ್ಯೂಸ್ ನಾಟೌಟ್: ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಅಂಗವಾಗಿ ೧೦ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆಯನ್ನು ಅದ್ದೂರಿಯಾಗಿ ಆಚರಿಸುವುದಕ್ಕೆ ನಿರ್ಧರಿಸಲಾಗಿದೆ.
ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸುಳ್ಯ ತಾಲೂಕು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥ ಕುಮಾರ್ ಕುಂಚಡ್ಕ, ’16/9/2023 ರಂದು ಕಾರ್ಯಕ್ರಮ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾ ಯಾತ್ರೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಪ್ರೋತ್ಸಾಹ ಬೇಕು. ಸಮಸ್ತ ಹಿಂದೂ ಬಾಂಧವರು ಜಾತಿ ಭೇದ ಮರೆತು ಒಂದಾಗಿ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ಮುಂದುವರಿದು ಮಾತನಾಡಿದ ಅವರು, ನಮ್ಮ ಶೋಭಾ ಯಾತ್ರೆಯು ಚೆನ್ನಕೇಶವ ದೇವಸ್ಥಾನದಿಂದ ಮೊದಲಾಗಿ ಆರಂಭವಾಗಲಿದೆ. ಎ.ಪಿ.ಎಂ.ಸಿ. ಕುರುಂಜಿಭಾಗ್ ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜು ರಸ್ತೆ, ಮುಳಿಯ ಮೈದಾನ, ಶಾಸ್ತ್ರಿ ವೃತ್ತ, ವಿಶ್ವ ಸೆಂಟ್ರಲ್ ಶ್ರೀ ರಾಮಪೇಟೆ ಸುಳ್ಯ, ಶ್ರೀಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಪಂಚಾಯತ್ ಬಸ್ ನಿಲ್ದಾಣ, ನಾಯಕ್ ಕಾಂಪ್ಲೆಕ್ಸ್, ಗಾಂಧಿನಗರ, ಐಡಿಯಲ್ ಆಟೋ ವರ್ಕ್, ಭಗವತಿ ಹಾರ್ಡ್ ಚೆನ್ನಕೇಶವ ದೇವಸ್ಥಾನದ ಮೈದಾನದ ಬಳಿ ಬಂದು ವಿಶೇಷ ಆಕರ್ಷಣೆ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ. ಅಲ್ಲಿ ಗೆದ್ದವರಿಗೆ ಪ್ರಥಮ ರೂ. 15,000 ಮತ್ತು ಶಾಶ್ವತ ಫಲಕ, ದ್ವಿತೀಯ ರೂ. 10,000 ಮತ್ತು ಶಾಶ್ವತ ಫಲಕ, ತೃತೀಯ ರೂ.7,000 ಮತ್ತು ಶಾಶ್ವತ ಫಲಕ ನೀಡಲಾಗುತ್ತದೆ ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ಮೊಸರು ಕುಡಿಕೆ ಉತ್ಸವ ಸಮಿತಿ ಉಪಾಧ್ಯಕ್ಷ ರಜತ್ ಅಡ್ಕಾರ್, ಮೊಸರು ಕುಡಿಕೆ ಉತ್ಸವ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಯಾದವ್, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ, ಕಾರ್ಯದರ್ಶಿ ಸಂದೀಪ್ ವಳಲಂಬೆ , ಕೋಶಾಧಿಕಾರಿ ನವೀನ್ ಎಲಿಮಲೆ, ವ್ಯವಸ್ಥಾ ಪ್ರಮುಖ ಭಾನು ಪ್ರಕಾಶ್ ಪೆಲ್ತಡ್ಕ , ಸುಳ್ಯ ಭಜರಂಗ ದಳ ಸಂಯೋಜಕ ಹರಿಪ್ರಸಾದ್, ವರ್ಷಿತ್ ಚೊಕ್ಕಾಡಿ , ಭಾನು ಪ್ರಕಾಶ್ ಪೆರ್ಮುoಡ ಉಪಸ್ಥಿತರಿದ್ದರು.