ನ್ಯೂಸ್ ನಾಟೌಟ್: ಕಳ್ಳತನವೆಂದರೆ ಚಿನ್ನ – ಬೆಳ್ಳಿ – ಹಣ ಎಂಬ ಯೋಚನೆಗಳೇ ಹೆಚ್ಚಾಗಿ ಬರುತ್ತವೆ, ಆದರೆ, ತರಕಾರಿಗಳ ಬೆಲೆ ಏರಿಕೆಯಾದ ಬಳಿಕ ಚಿನ್ನದಂತೆ ಕಾಪಾಡಿಕೊಳ್ಳುವ ಅವಶ್ಯಕತೆ ಬಂದೊದಗಿದೆ. ಉಪ್ಪಿನಂಗಡಿಯ ಸುಶೀಲ-ಲಕ್ಷ್ಮಣ್ ಕಾಂಪ್ಲೆಕ್ಸ್ ನಲ್ಲಿ ಇಟ್ಟಿದ್ದ ತರಕಾರಿಗಳ ಮೂಟೆಯನ್ನು ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಸುಧಾಕರ ನಾಯಕ್ ಎಂಬವರ ಮಾಲಕತ್ವದ ತರಕಾರಿ ಅಂಗಡಿಗೆ ಕಳ್ಳರು ನುಗ್ಗಿದ್ದು, ಸೌತೆಕಾಯಿ, ಬಟಾಟೆ ಮೂಟೆಯನ್ನು ಕದ್ದೊಯ್ದಿದ್ದಾರೆ ಎಂದು ವರದಿ ತಿಳಿಸಿದೆ.
ಟೊಮೆಟೋ ಬೆಲೆ ಗಗನಕ್ಕೇರಿದ್ದಾಗ ಕಳ್ಳತನ, ಬೆಳೆ ನಾಶದಂತಹ ಕೃತ್ಯಗಳು ನಡೆಯುತ್ತಿದ್ದವು ಆದರೆ ಈಗ ಎಲ್ಲಾ ಬಗೆಯ ತರಕಾರಿಗಳ ಮೇಲೂ ನಿಗಾ ಇಡುವ ಪರಿಸ್ಥಿತಿ ಎದುರಾಗಿದೆ.