ನ್ಯೂಸ್ ನಾಟೌಟ್: ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸುಳ್ಯದಲ್ಲಿ ಪ್ರಕರಣ ದಾಖಲಾಗಿದೆ.
ಸನಾತನ ಧರ್ಮವನ್ನು ಡೆಂಘೀ ಮತ್ತು ಮಲೇರಿಯಕ್ಕೆ ಹೋಲಿಸಿ ಅದನ್ನು ನಾಶ ಮಾಡುವಂತೆ ಬಹಿರಂಗ ಹೇಳಿಕೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಮಗ ಮತ್ತು ಸಚಿವ ಉದಯನಿಧಿ ವಿರುದ್ಧ ಸುಳ್ಯ ಠಾಣೆಯಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕರಾದ ಮಹೇಶ್ ಉಗ್ರಾಣಿಮನೆ ಪ್ರಕರಣ ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಹ ಸಂಯೋಜಕ್ ಶರತ್ ಅಡ್ಯಡ್ಕ, ಹಿಂದು ಯುವ ವಾಹಿನಿ ಸಂಯೋಜಕ್ ಅಭಿಷೇಕ್ ತೊಡಿಕಾನ ಹಾಗೂ ತಾಲೂಕು ಪ್ರಮುಖರಾದ ಕೌಶಲ್, ವಿಜೇತ್ ಅಡ್ಯಡ್ಕ, ಕೀರ್ತನ್ ಪೆರುಮುಂಡ, ಸತೀಶ್ ಕಟೂರು, ಕೆ.ಪಿ.ಶೆಟ್ಟಿ, ಉಪಸ್ಥಿತರಿದ್ದರು.