ನ್ಯೂಸ್ ನಾಟೌಟ್ : ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿಯಲ್ಲಿದ್ದ ವಿದ್ಯಾರ್ಥಿನಿ ದುರಂತ ಅಂತ್ಯವನ್ನೇ ಕಂಡಿದ್ದಾಳೆ.ಈಕೆ ಉಡುಪಿಯ ಶಿರ್ವ ಮೂಲದ ವಿದ್ಯಾರ್ಥಿನಿಯಾಗಿದ್ದು,ನೃತ್ಯಪಟುವಾಗಿ ಜನರ ಮನಸ್ಸನ್ನೇ ಕದ್ದಿದ್ದಳು.
20 ವರ್ಷದ ರಿಯಾನ್ನಾ ಜೀನ್ ಡಿಸೋಜಾ ಉಸಿರು ಚೆಲ್ಲಿದ ಯುವತಿ.ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಬಿಕಾಂ ಮುಗಿಸಿ ಮಣಿಪಾಲದಲ್ಲಿ ಎಂಕಾಂ ವಿದ್ಯಾಭ್ಯಾಸಕ್ಕೆ ರಿಯಾನ್ನಾ ಸೇರ್ಪಡೆಯಾಗುವುದರಲ್ಲಿದ್ದರು.ಆದರೆ, ಯಮರೂಪದಲ್ಲಿ ಬಂದ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗಿ ಕ್ರಮೇಣ ಅವರ ಪ್ರಾಣವನ್ನೇ ಕಸಿದುಕೊಂಡಿತ್ತು.
ಹಲವು ಸಮಯಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದ ರಿಯಾನ್ನಾ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ರಿಯಾನ್ನಾ ಜೀನ್ ಡಿಸೋಜಾ ಬೆಂಗಳೂರಲ್ಲಿ ಬಾರದ ಲೋಕಕ್ಕೆ ಹೋಗಿದ್ದಾರೆ ಅನ್ನೋದು ದುರಂತದ ವಿಷಯ.ಈ ಸುದ್ದಿ ಕೇಳಿ ಮನೆಯವರ ರೋಧನ ಮುಗಿಲು ಮುಟ್ಟಿದೆ.ಅನೇಕ ಸ್ನೇಹಿತವರ್ಗವನ್ನೇ ಸಂಪಾದಿಸಿದ್ದ ಇವರು ಎಲ್ಲರೊಂದಿಗೂ ನಗುನಗುತ್ತಾ ಮಾತನಾಡಿಸುವ ಗುಣದವರಾಗಿದ್ದರು.ಗೆಳತಿಯರಿಗೂ ಇವರ ಅಗಲುವಿಕೆ ಬಾರಿ ನೋವನ್ನುಂಟು ಮಾಡಿದೆ.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರಿಯಾನ್ನಾ ಅವರಿಗೆ ಕಳೆದ ವರ್ಷ ಕ್ಯಾನ್ಸರ್ ರೋಗ ಕಾಣಿಸಿಕೊಂಡಿತ್ತು. ಮಣಿಪಾಲ ಮತ್ತು ಬೆಂಗಳೂರಿನ ಆಸ್ಪತ್ರೆಗಳಲ್ಲಿ ರಿಯಾನ್ನಾ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬಾಲ್ಯದಲ್ಲಿಯೇ ನೃತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು.ನೃತ್ಯವಲ್ಲದೇ ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡ ಮಂಚೂಣಿಯಲ್ಲಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ ರಿಯಾನ್ನಾ ಎಲ್ಲರನ್ನು ಅಗಲಿ ದೂರವಾಗಿದ್ದಾರೆ.ಅತ್ಯುತ್ತಮ ನೃತ್ಯಪಟುವಾಗಿದ್ದ ರಿಯಾನ್ನಾ ಅವರು ಚಿಕ್ಕ ವಯಸ್ಸಿಗೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿರೋದು ಕಣ್ಣೀರು ತರಿಸುವಂತಿದೆ.