ನ್ಯೂಸ್ ನಾಟೌಟ್ :ರಾತ್ರಿ ವೇಳೆ ಕಂಠಪೂರ್ತಿ ಕುಡಿದು ಫುಲ್ ಟೈಟಾಗಿ ಇಬ್ಬರು ಅಮೆರಿಕನ್ನರು ಐಫೆಲ್ ಟವರ್ ಏರಿ ಮಲಗಿರುವ ಘಟನೆ ವರದಿಯಾಗಿದೆ.ಐಫೆಲ್ ಟವರ್ಗೆ ಅಷ್ಟೊಂದು ಭದ್ರತೆ ಇದ್ದರೂ ಈ ಘಟನೆ ನಡೆದಿರೋದಕ್ಕೆ ಭಾರಿ ಗೊಂದಲ ಸೃಷ್ಟಿಯಾಗಿದೆ.
ಅಲ್ಲಿನ ಭದ್ರತಾ ಸಿಬ್ಬಂದಿಗಳಿಂದಲೂ ತಪ್ಪಿಸಿಕೊಂಡು ಐಫೆಲ್ ಟವರ್ ಏರಿದ್ದು,ಬೆಳಗ್ಗೆ 9 ಗಂಟೆ ಸುಮಾರಿಗೆ ಐಫೆಲ್ ಟವರ್ ಬಾಗಿಲು ತೆರೆಯುವ ಮುಂಚಿತವಾಗಿಯೇ ಇಬ್ಬರು ಟವರ್ ಮೇಲೆ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ.ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಎಲ್ಲಿಗೆ ಹೋಗಿದ್ದೇವೆ ಅನ್ನೋ ಪರಿಜ್ಞಾನನೂ ಇಲ್ಲದೇ ಇರೋದಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ವಿಶೆಷವೇನೆಂದರೆ ಕುಡಿದ ಅಮೆರಿಕನ್ನರು ಇಡೀ ರಾತ್ರಿ ಈ ಎರಡು ಗೋಪುರಗಳ ನಡುವೆ ಕಳೆದಿದ್ದಾರೆ.ಆದರೆ ಯಾವುದೇ ರೀತಿಯ ಗಲಾಟೆಯನ್ನು ಅವರು ಮಾಡಲಿಲ್ಲ ಎಂದು ತಿಳಿದು ಬಂದಿದೆ.ಆದರೂ ಕುಡಿದ ಮತ್ತಿನಲ್ಲಿ ಅಷ್ಟು ಎತ್ತರವೇರಿದ್ದೂ ಅಪಾಯಕಾರಿ ಅಂಶವೇ ಆಗಿದೆ.
ಪ್ರವಾಸಿಗರಿಬ್ಬರೂ ಕಳೆದ ಭಾನುವಾರ ರಾತ್ರಿ 10:40 ರ ಸುಮಾರಿಗೆ ಪ್ರವೇಶ ಟಿಕೆಟ್ಗಳನ್ನು ಖರೀದಿಸಿದ್ದರು ಎಂಬ ಮಾಹಿತಿಯಿದೆ. ಆದರೆ ಅವರು ಭದ್ರತಾ ಸಿಬ್ಬಂದಿಯನ್ನು ತಪ್ಪಿಸಿ ಟವರ್ ಏರಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ,ಅಷ್ಟು ಎತ್ತರವೇರಿ ಅಪಾಯಕಾರಿ ಸ್ಥಳದಲ್ಲಿ ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಯ ವಿಶೇಷ ತಂಡವನ್ನು ಕಳುಹಿಸಲಾಗಿದೆ.ಇವರಿಬ್ಬರನ್ನೂ ಪ್ಯಾರಿಸ್ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದ್ದು, ಕ್ರಿಮಿನಲ್ ದೂರು ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.