ನ್ಯೂಸ್ ನಾಟೌಟ್ :ರೈಲ್ವೆ ನಿಲ್ದಾಣದಲ್ಲಿ ದುರಂತವೊಂದು ಸಂಭವಿಸಿದ್ದು,ಶಿಕ್ಷಕರೊಬ್ಬರು ಗೂಡ್ಸ್ ರೈಲಿನಡಿ ಸಿಲುಕಿ ಪ್ರಾಣ ಉಳಿಸಿಕೊಂಡಿರುವ ಘಟನೆ ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಬಿ.ದುರ್ಗದಲ್ಲಿ ಮುಖ್ಯಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ರೈಲಿನ ಮೂಲಕ ಶಾಲೆಗೆ ತೆರಳಲು ದಾವಣಗೆರೆ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಶಿಕ್ಷಕ ಶಿವಕುಮಾರ್ ರವರು ನಿಲ್ದಾಣದ ಪ್ಲಾಟ್ ಫಾರಂ 1 ರಿಂದ ಪ್ಲಾಟ್ ಫಾರಂ 2 ಕ್ಕೆ ಹೋಗಲು ಫ್ಲೈ ಓವರ್ ಮೂಲಕ ಕ್ರಮಿಸಿದ್ದರು ಈ ವೇಳೆ ಹಳಿ ದಾಟುವ ಬದಲು ರೈಲ್ವೆ ಹಳಿ ದಾಟುವ ಸಾಹಸಕ್ಕೆ ಮುಂದಾಗಿದ್ದರು.
ಇದೇ ಸಂದರ್ಭದಲ್ಲಿ ವೇಗವಾಗಿ ಗೂಡ್ಸ್ ರೈಲು ಬರುವುದನ್ನು ಶಿಕ್ಷಕ ಗಮನಿಸಿಲ್ಲವಾದ್ದರಿಂದ ಶಿಕ್ಷಕ ಶಿವಕುಮಾರ್ ರವರು ಹಳಿ ದಾಟುವಾಗ ಏಕಾಏಕಿ ಗೂಡ್ಸ್ ರೈಲು ಹಳಿ ಮೇಲೆ ಬಂದಿದೆ.ಈ ಸಂದರ್ಭದಲ್ಲಿ ಏನು ಆಗ್ತಿದೆ ಅಂತ ದಿಕ್ಕೆ ತೋಚದಂತಾದ ಶಿಕ್ಷಕ ಅದೇ ಗೂಡ್ಸ್ ರೈಲು ಸಾಗ್ತಿದ್ದಾ ಹಳಿಯ ನಡುವೆ ಮಲಗಿಕೊಂಡು ಜೀವ ಉಳಿಸಿಕೊಂಡಿದ್ದಾರೆ.
ಶಿಕ್ಷಕ ರೈಲಿನಡಿ ಇದ್ದಿದ್ದನ್ನು ಗಮನಿಸಿದ ರೈಲ್ವೆ ಇಲಾಖೆ ಸಿಬ್ಬಂದಿ ಅಲರ್ಟ್ ಆಗಿ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಶಿಕ್ಷಕರಿಗೆ ಹೋದ ಜೀವ ಬಂದಂತಾಗಿದೆ. ಬಳಿಕ ಗೂಡ್ಸ್ ರೈಲಿನ ಕೆಳಗೆ ಸಿಲುಕಿದ ಶಿಕ್ಷಕನನ್ನು ಆರ್ಪಿಎಫ್ ಪೊಲೀಸರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.ಸದ್ಯ ಶಿಕ್ಷಕ ಶಿವಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನೇನು ಜೀವ ಹೋಯಿತು ಎಂದು ಭಾವಿಸಿದ ಶಿಕ್ಷಕ ಪವಾಡ ಸದೃಶ ರೀತಿಯಲ್ಲಿ ಜೀವ ಉಳಿಸಿಕೊಂಡು ಪಾರಾಗಿದ್ದು ಮರು ಜೀವ ಬಂದಂತಾಗಿದೆ.