ನ್ಯೂಸ್ ನಾಟೌಟ್ : ಮೀನು ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ಮೀನು ತಿಂದ ಬಳಿಕ ಅನಾರೋಗ್ಯಕ್ಕೊಳಗಾಗಿದ್ದಾರೆ. ಮಾತ್ರವಲ್ಲ ತನ್ನ ದೇಹದ ನಾಲ್ಕು ಅಂಗಾಂಗವನ್ನೇ ಕಳೆದುಕೊಂಡ ವಿಚಿತ್ರ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ ಬೆಳಕಿಗೆ ಬಂದಿದೆ.
ಕ್ಯಾಲಿಫೋರ್ನಿಯಾದ ಲಾರಾ ಬರಾಜಾಸ್(40) ಎಂಬ ಮಹಿಳೆಯೇ ಅಂಗಾಂಗ ಕಳೆದುಕೊಂಡಿರುವ ನತದೃಷ್ಟ ಮಹಿಳೆ.ಹೌದು,ಈಕೆ ತಿಳಿದೋ ತಿಳಿಯದೆಯೋ ಮಾರಣಾಂತಿಕ ಬ್ಯಾಕ್ಟೀರಿಯಾವಿರುವ ಮೀನುಗಳನ್ನು ತಿಂದ ಬಳಿಕ ಈ ಸ್ಥಿತಿಗೆ ಬಂದು ತಲುಪಿದ್ದಾರೆ.
ಮೀನು ತಿಂದ ಬಳಿಕ ವಿಪರೀತ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಏನೂ ಪ್ರಯೋಜನವಾಗದೇ ಮಹಿಳೆ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇವರು ಕೆಲ ತಿಂಗಳುಗಳ ಹಿಂದೆಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಅಂಗಾಂಗಗಳು ವೈಫಲ್ಯವಾಗಿವೆ. ಮಹಿಳೆಯ ಮಹಿಳೆಯ ಜೀವ ರಕ್ಷಣೆಗಾಗಿ ಎರಡು ಕೈಗಳು ಹಾಗೂ ಎರಡು ಕಾಲುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದಾರೆ ಎನ್ನಲಾಗಿದೆ.
ಲಾರಾ ಅವರ ಸ್ನೇಹಿತರು ಟ್ವೀಟ್ ಮಾಡಿ ಬ್ಯಾಕ್ಟೀರಿಯಾದ ಮಾರಣಾಂತಿಕ ಸ್ಟ್ರೈನ್ ನಿಮದ ಕಲುಷಿತಗೊಂಡಿರುವ ಕಡಿಮೆ ಬೇಯಿಸಿದ ತಿಲಾಪಿಯಾ ಮೀನಿನ ಸೇವನೆಯಿಂದ ಈ ಸಮಸ್ಯೆ ತಲೆದೋರಿದೆ ಎಂದಿದ್ದಾರೆ.ಸ್ಯಾನ್ ಜೋಸ್ನ ಸ್ಥಳೀಯ ಮಾರುಕಟ್ಟೆಯಲ್ಲಿ ಲಾರಾ ತಿಲಾಪಿಯಾ ಮೀನನ್ನು ಖರೀದಿಸಿದ್ದರು ಎಂದು ಆಕೆಯ ಸ್ನೇಹಿತೆ ಟ್ವೀಟ್ ಮಾಡಿದ್ದಾರೆ.
ಬರೋಬ್ಬರಿ ಎರಡು ತಿಂಗಳುಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಜೀವ ಉಳಿಸುವ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.ಮೀನಿನಲ್ಲಿದ್ದ ವಿಬ್ರಿಯೊ ವಲ್ನಿಫಿಕಸ್ ಎಂಬ ಮಾರಣಾಂತಿಕ ಬ್ಯಾಕ್ಟೀರಿಯಾವು ಮಹಿಳೆಯ ದೇಹ ಸೇರಿ ಅರೋಗ್ಯ ಸಮಸ್ಯೆ ತಲೆದೂರಿದೆ ಅಲ್ಲದೆ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.ಇದೀಗ ಕೋಮಾದಲ್ಲಿರುವ ಮಹಿಳೆಯ ದೇಹದ ಭಾಗಗಳು ಕಪ್ಪು ಬಣ್ಣಕ್ಕೆ ತಿರುಗಿದ್ದು ಮೂತ್ರಪಿಂಡಗಳೂ ವೈಫಲ್ಯವಾಗಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ.
ತಿಲಾಪಿಯಾ ಮೀನುಗಳ ಬಗ್ಗೆ ಜನ ಎಚ್ಚರಿಕೆ ವಹಿಸುವ ಅಗತ್ಯವಿದೆ.ಸಮುದ್ರದ ಆಹಾರ, ಮೀನು, ಮಾಂಸವನ್ನು ತಿನ್ನುವಾಗ ಸರಿಯಾಗಿ ಬೇಯಿಸಿಕೊಂಡು ತಿನ್ನುವ ಅಗತ್ಯವನ್ನು ಇಂತಹ ಘಟನೆಗಳು ಒತ್ತಿ ಹೇಳುತ್ತದೆ. ಅದರಲ್ಲೂ ಶೀತಲೀಕರಿಸಿದ ಆಹಾರ ತಿನ್ನುವಾಗ ಇನ್ನೂ ಎಚ್ಚರ ಅಗತ್ಯವಿದೆ ಎಂದು ಜನ ಮನವಿ ಮಾಡಿದ್ದಾರೆ.