ನ್ಯೂಸ್ ನಾಟೌಟ್ : ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹಲವು ರಾಜಕೀಯ ಪಕ್ಷಗಳು ಕೆಸೆರೆರಚಾಟದಲ್ಲಿ ದೊಡಗಿರುವಾಗ ತೆಲಂಗಾಣದಲ್ಲಿ ಒಂದು ಘಟನೆ ಹಲವರ ಟೀಕೆಗೆ ಗುರಿಯಾಗಿದೆ. ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಸಾಲು ಸಾಲು ರ್ಯಾಲಿಗಳು, ಸಮಾವೇಶಗಳ ಮೂಲಕ ಜನರ ಮತ ಸೆಳೆಯಲು ಸಿದ್ಧತೆ ನಡೆಸುತ್ತಿದೆ.
ಇದೇ ಕಾರಣಕ್ಕಾಗಿಯೇ ಜನರಿಗೆ ಆರು ‘ಉಚಿತ ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿದೆ. ಇದರ ಬೆನ್ನಲ್ಲೇ, ತೆಲಂಗಾಣದಲ್ಲಿ ಕಾಂಗ್ರೆಸ್ ರ್ಯಾಲಿಯ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭಾರತ ಮಾತೆಯಂತೆ ಬಿಂಬಿಸಿದ ಹೋರ್ಡಿಂಗ್ಸ್ ಅಳವಡಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಹೌದು, ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ಸೆಪ್ಟೆಂಬರ್ 17ರಂದು ಪಕ್ಷದ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಬೃಹತ್ ಕಟೌಟ್ ಗಳನ್ನು ಮಾಡಿಸಿದ್ದಾರೆ. ಒಂದು ಕಟೌಟ್ನಲ್ಲಿ ಸೋನಿಯಾ ಗಾಂಧಿಯನ್ನು ಭಾರತ ಮಾತೆಯಂತೆ ಚಿತ್ರಿಸಲಾಗಿದೆ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ, ಪ್ರತಿ ಮನೆಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಸೇರಿ ಹಲವು ಘೋಷಣೆಗಳನ್ನು ಮಾಡಿದೆ. ಕಾಂಗ್ರೆಸ್ ಕಾರ್ಯಕಾರಿ ಸಭೆಯನ್ನೂ ತೆಲಂಗಾಣದಲ್ಲೇ ಆಯೋಜಿಸಿದೆ.
ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಸೇರಿ ಹಲವರ ಕಟೌಟ್ಗಳ ಮಧ್ಯೆ, ಸೋನಿಯಾ ಗಾಂಧಿ ಅವರ ಹೋರ್ಡಿಂಗ್ಸ್ ಇದೆ. ಇದು ಈಗ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.ಕರ್ನಾಟಕದಲ್ಲಿ ಉಚಿತ ಗ್ಯಾರಂಟಿ ಘೋಷಣೆಗಳು ಯಶಸ್ಸು ಕಂಡ ಹಿನ್ನೆಲೆಯಲ್ಲಿ ತೆಲಂಗಾಣದಲ್ಲೂ ಕಾಂಗ್ರೆಸ್ ಆರು ಉಚಿತ ಕೊಡುಗೆಗಳ ಭರವಸೆ ನೀಡಿದೆ. ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಘೋಷಣೆ ಮಾಡಿದೆ.