ನ್ಯೂಸ್ ನಾಟೌಟ್: ಆಂಟಿ ಎಂದು ಕರೆದರು ಎಂಬ ಕಾರಣಕ್ಕೆ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನ ಮೇಲೆ ಹ* ಲ್ಲೆ ಮಾಡಿ ಅವ್ಯಾಚ್ಯವಾಗಿ ನಿಂದಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಟಿಎಂ ಕೇಂದ್ರದ ಬಾಗಿಲ ಬಳಿ ‘ಆಂಟಿ ಪಕ್ಕಕ್ಕೆ ಸರಿಯಿರಿ’ ಎಂದ ಸೆಕ್ಯೂರಿ ಗಾರ್ಡ್ಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರ ಕೃಷ್ಣಯ್ಯ ರಾಜಾಜಿನಗರದ ಪೊಲೈಟ್ ಸೆಕ್ಯೂರಿ ಏಜೆನ್ಸಿಯಲ್ಲಿ ಸೆಕ್ಯೂರಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಏಜೆನ್ಸಿಯು ವಿವಿಧ ಬ್ಯಾಂಕ್ಗಳ ಎಟಿಎಂಗೆ ಹಣ ತುಂಬುವ ಕೆಲಸ ಮಾಡುತ್ತಿದೆ. ಎಟಿಎಂ ಕೇಂದ್ರಗಳಲ್ಲಿ ಎಟಿಎಂ ಯಂತ್ರಗಳಿಗೆ ತುಂಬುವಾಗ ಕೃಷ್ಣಯ್ಯ ಹೊರಗೆ ಭದ್ರತೆ ನೀಡುವ ಕೆಲಸ ಮಾಡುತ್ತಾರೆ. ಅದರಂತೆ, ಕೃಷ್ಣಯ್ಯ ಅವರು ಸೆ.19 ರಂದು ರಾತ್ರಿ 7.30ರ ಸುಮಾರಿಗೆ ಮಲ್ಲೇಶ್ವರದ ಗಣೇಶ ದೇವಸ್ಥಾನದ ರಸ್ತೆಯ ಐಸಿಐಸಿಐ ಬ್ಯಾಂಕ್ ಎಟಿಎಂ ಯಂತ್ರಕ್ಕೆ ಹಣ ತುಂಬಲು ಬಂದಿದ್ದಾರೆ.
ಈ ವೇಳೆ ಸಿಬ್ಬಂದಿ ಎಟಿಎಂ ಕೇಂದ್ರದ ಒಳಗೆ ಹಣ ತುಂಬುವಾಗ ಕೃಷ್ಣಯ್ಯ ಎಟಿಎಂ ಹೊರಗೆ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮಹಿಳೆ ಎಟಿಎಂ ಕೇಂದ್ರದ ಬಾಗಿಲಿಗೆ ಅಡ್ಡಲಾಗಿ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಕೃಷ್ಣಯ್ಯ ಅವರು ‘ಆಂಟಿ ಪಕ್ಕಕ್ಕೆ ಸರಿಯಿರಿ’ ಎಂದಿದ್ದಾರೆ.
ಅಷ್ಟಕ್ಕೆ ಅಷ್ಟಕ್ಕೆ ಕೋಪಗೊಂಡ ಮಹಿಳೆ ನನ್ನನ್ನೇ ” ಆಂಟಿ ಅನ್ನುವೆಯಾ ” ಎಂದು ಅವಾಚ್ಯಶಬ್ಧಗಳಿಂದ ನಿಂದಿಸಿ ಏಕಾಏಕಿ ಚಪ್ಪಲಿ ತೆಗೆದು ಕೃಷ್ಣಯ್ಯ ಮುಖಕ್ಕೆ ಹ* ಲ್ಲೆ ಮಾಡಿದ್ದಾರೆ. ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಮಹಿಳೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರಾಜಾಜಿನಗರದ ಪೊಲೈಟ್ ಸೆಕ್ಯೂರಿ ಏಜೆನ್ಸಿಯ ಸೆಕ್ಯೂರಿ ಗಾರ್ಡ್ ಕೃಷ್ಣಯ್ಯ(64) ಎಂಬುವವರು ನೀಡಿದ ದೂರಿನ ಮೇರೆಗೆ ಅಶ್ವಿನಿ ಎಂಬ ಮಹಿಳೆ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.