ನ್ಯೂಸ್ ನಾಟೌಟ್ :‘ನಟಿ ರಮ್ಯಾ ಹೃದಯಾಘಾತದಿಂದ ದುರಂತ ಅಂತ್ಯ ಕಂಡಿದ್ದಾರೆ’ ಎಂದು ಇಂದು ಬೆಳಗ್ಗಿನ ವೇಳೆ ತಮಿಳು ಮಾಧ್ಯಮಗಳು ಸೋಶಿಯಲ್ ಮೀಡಿಯಾದಲ್ಲಿ ವರದಿ ಮಾಡಿದ್ದವು. ಇದು ಒಂದು ಕ್ಷಣದಲ್ಲೇ ಲಕ್ಷಾಂತರ ಜನರನ್ನು ತಲುಪಿತ್ತು.ಆದರೆ ಈ ಸುದ್ದಿ ಸುಳ್ಳು ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.ಅಷ್ಟಕ್ಕೂ ಈ ಸುದ್ದಿ ಹುಟ್ಟಿಕೊಂಡಿದ್ದೇಕೆ?
ರಮ್ಯಾ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು.ಆದರೆ ಯಾವಾಗ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟರೋ ಅಲ್ಲಿಂದ ಅವರು ಸಿನಿಮಾ ರಂಗದಿಂದ ದೂರವೇ ಉಳಿದುಕೊಂಡರು. ಅದಾದ ಬಳಿಕ ರಾಜಕೀಯವನ್ನೂ ತೊರೆದರು.ಇದಾದ ನಂತರ ಅವರು ಯಾರ ಕಣ್ಣಿಗೂ ಕಾಣದಾದರು. ಕಲ ಸಮಯಗಳಿಂದ ಅವರೀಗ ಅಲ್ಲೋ ಇಲ್ಲೋ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗಕ್ಕೂ ಮರಳಿದ್ದು ಅವರ ಅಭಿಮಾನಿಗಳಿಗೆ ಭಾರಿ ಸಂತಸವನ್ನುಂಟು ಮಾಡಿದೆ.
ಇದೀಗ ಇಂದು ಬೆಳಗ್ಗೆ ರಮ್ಯಾ ಅವರಿಗೆ ಹೃದಯಾಘಾತ ಆಗಿದೆ ಎನ್ನುವ ಸುದ್ದಿ ಹರಿದಾಡಿತ್ತು.ಅಸಲಿಗೆ ರಮ್ಯ ಹೆಸರಿನ ತಮಿಳು ಕಿರುತೆರೆ ನಟಿ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ. ಈ ವಿಚಾರ ಹೇಳುವಾಗ ತಮಿಳುನಾಡಿನ ಕೆಲವರು ರಮ್ಯಾ ದಿವ್ಯಾ ಸ್ಪಂದನಾ ಫೋಟೋ ಹಂಚಿಕೊಂಡಿದ್ದಾರೆ.
ರಮ್ಯಾ ಅಭಿಮಾನಿಗಳು ಇದರಿಂದ ಶಾಕ್ ಗೊಳಗಾದರು.ನಿನ್ನೆ ಮೊನ್ನೆಯಷ್ಟೆ ಆರಾಮವಾಗಿದ್ದ ರಮ್ಯಾ ಅವರಿಗೆ ಏನಾಯ್ತು? ಎಂದು ಚಿಂತಾಕ್ರಾಂತರಾದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.ಆದರೆ ಇದು ಬೇರೆ ರಮ್ಯಾ ಎಂಬ ವಿಷಯ ಗೊತ್ತಾಯಿತು. ಈಗ ರಮ್ಯಾ ಅವರು ಆರಾಮಾಗಿದ್ದಾರೆ ಎನ್ನುವ ಸುದ್ದಿ ತಿಳಿದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಸದ್ಯ ಯೂರೋಪ್ ಪ್ರವಾಸದಲ್ಲಿರುವ ರಮ್ಯಾ , ಅಲ್ಲಿ ಹಲವರನ್ನು ಭೇಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಹಲವು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.