ನ್ಯೂಸ್ ನಾಟೌಟ್ :ಒಂದು ಕಡೆ ಕಿಚ್ಚ ಸುದೀಪ್ ಅವರ ಬರ್ತ್ ಡೇಯನ್ನು ಅಭಿಮಾನಿಗಳು ಆಚರಿಸಿ ಸಂಭ್ರಮ ಪಡ್ತಾ ಇದ್ರೆ, ಇತ್ತ ಸುದೀಪ್ ಅವರು ತನ್ನ ಕುಚುಕು ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಇಬ್ಬರು ದಿಗ್ಗಜ ನಟರ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಬಾರಿ ಚರ್ಚೆಗಳು ನಡೆಯುತ್ತಿವೆ.
ಮೊನ್ನೆ ಮೊನ್ನೆಯಷ್ಟೇ ಸಂಸದೆ ಸುಮಲತಾ ಅವರ ಬರ್ತ್ ಡೇಯಲ್ಲಿಯೂ ಕೂಡ ಇಬ್ಬರು ಸ್ಟಾರ್ಗಳು ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು.ಅಭಿಮಾನಿಗಳು ಕೂಡ ಅವರಿಬ್ಬರೂ ಒಂದಾಗಲೆಂದೇ ಹಾರೈಸುತ್ತಿದ್ದರು.ಬಾರಿ ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದ ಇವರನ್ನು ನೋಡಿ ಅಭಿಮಾನಿಗಳಿಗೆ ಮನತುಂಬಿ ಬಂತು.ಇಷ್ಟೆಲ್ಲ ಬೆಳವಣಿಗೆಯ ಮಧ್ಯೆಯೂ ಸುದೀಪ್ ಅವರು ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ಹುಟ್ಟುಹಬ್ಬದ ಜೊತೆಗೆ ನಟ ಸುದೀಪ್ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ನಟ ದರ್ಶನ್ ಅವರನ್ನು ಹಾಡಿ ಹೊಗಳಿದ್ದಾರೆ.ಕೆಲವು ನಡೆಯುತ್ತವೆ. ಕೆಲವೊಂದು ಗೊತ್ತಿಲ್ಲದೇ ನಡೆದು ಹೋಗುತ್ತವೆ. ದರ್ಶನ್ ಈಸ್ ಎ ಬಿಗ್ ನೇಮ್, ಬಿಗ್ ಆ್ಯಕ್ಟರ್, ಬಿಗ್ ಸ್ಟಾರ್. ಎಲ್ಲವೂ ಸರಿ ಇರಬೇಕು. ಸಿನಿಮಾ ಸೋಲು ಗೆಲುವಿನ ಮೇಲೆ ಮಾತ್ರ ನಿಂತಿರಬೇಕು. ಇಂತಹವುಗಳು ನಡೆಯಬಾರದು ಎಂದು ಸುದೀಪ್ ಹೇಳಿದ್ದಾರೆ.
ನೀವೆಲ್ಲ ಯಾವುದೋ ಕಾರ್ಯಕ್ರಮದಲ್ಲಿ ಕುಳಿತುಕೊಂಡ ತಕ್ಷಣ ಎಲ್ಲ ಸರಿ ಹೋಗುತ್ತೆ ಅಂತಾ ಅನ್ಕೋಂತಿರಲ್ಲ. ಇಟ್ಸ್ ನಾಟ್ ಲೈಕ್ ದಟ್. ಅವರಲ್ಲಿ ಕೆಲವು ಪ್ರಶ್ನೆಗಳು ಇರುತ್ತವೆ. ನನ್ನಲ್ಲೂ ಕೆಲ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗಲೇ ಕೆಲವು ಸರಿ ಹೋಗೋದು. ಅದಕ್ಕೆ ನೀವೆಲ್ಲರೂ ಕಾಲಾವಕಾಶ ಕೊಡಬೇಕು ಎಂದು ಸುದೀಪ್ ಹೇಳಿದರು.
ಸುಮಲತಾ ಅವರ ಬರ್ತ್ ಡೇ ಕಾರ್ಯಕ್ರಮದಲ್ಲಿ ತುಂಬಾ ಕಂಫರ್ಟ್ ಜೋನ್ ಇತ್ತು. ಹಾಗಂತ ಯಾರೂ ಮುಖ ತಿರುಗಿಸಿಕೊಂಡಿಲ್ಲ. ಎಲ್ಲ ಚೆನ್ನಾಗಿದ್ದೇವೆ. ಎಷ್ಟೋ ವರ್ಷದ ನಂತರ ಮನೆ ಬಿಟ್ಟು ಪಾರ್ಟಿಗೆ ಹೋಗಿರೋದು. ನನಗೆ ಮುಂಚನೇ ಗೊತ್ತಿತ್ತು ಅಲ್ಲಿ ದರ್ಶನ್ ಇರುತ್ತಾರಂತ ಎಂದು ಸುದೀಪ್ ಸ್ಮೈಲ್ ಮಾಡುತ್ತಾ ಹೇಳಿದರು. ಬೇರೆ ಬೇರೆ ಇದ್ದರೂ ಒಬ್ಬರಿಗೊಬ್ಬರು ರೆಸ್ಪೆಕ್ಟ್ ಕೊಡುತ್ತಿದ್ದೇವೆ ಎಂದು ಹೇಳಿದರು.
ನನಗೂ ಸಂತೋಷವಾಯಿತು. 6-7 ವರ್ಷಗಳ ನಂತರ ಇಬ್ಬರು ಒಬ್ಬರಿಗೊಬ್ಬರನ್ನು ನೋಡಿದ್ವಿ. ಸೋಷಿಯಲ್ ಮೀಡಿಯಾದಲ್ಲಿ ಯಾರೇ ಪೋಸ್ಟ್ ಹಾಕಿದ್ರೂ ನಾನು ನೋಡೋಕೆ ಹೋಗಲ್ಲ. ಇನ್ನೊಬ್ಬರ ಆಧಾರದ ಮೇಲೆ ನಾನು ಜೀವನ ನಡೆಸೋದಿಲ್ಲ. ನನ್ನ ಬಳಿ ಒಬ್ಬ ವ್ಯಕ್ತಿ ಬಂದು ಬಿಟ್ಟು ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಅದನ್ನು ನಾನು ನಂಬುತ್ತೇನೆ. ಎಂದು ಸುದೀಪ್ ಹೇಳಿದ್ದಾರೆ.