ನ್ಯೂಸ್ ನಾಟೌಟ್: ನಾಯಕ ರೋಹಿತ್ ಶರ್ಮಾ ಅವರು ತಮ್ಮದೇ ಒಂದು ತಪ್ಪಿನಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಹೌದು, ರೋಹಿತ್ ಕಳೆದ 3ನೇ ಆಸೀಸ್ ವಿರುದ್ಧದ ಪಂದ್ಯದ ವೇಳೆ ತಮ್ಮ ಮೊಬೈಲ್ ಪೋನನ್ನು ಕಳೆದುಕೊಂಡಿದ್ದಾರೆ.
ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಹಿಟ್ಮ್ಯಾನ್ ರೋಹಿತ್ ಶರ್ಮಾ ಫೋನ್ ಕಾಣೆಯಾಗಿದೆ ಎಂದು ವರದಿ ತಿಳಿಸಿದೆ. ರೋಹಿತ್ ವಸ್ತುಗಳನ್ನು ಮರೆತು ಬರುವುದು ಅಥವಾ ಕಳೆದುಕೊಳ್ಳುವುದು ಹೊಸದಲ್ಲ ಎಂಬುದು ಗೊತ್ತಿದೆ ಇತ್ತೀಚೆಗಷ್ಟೇ ಏಷ್ಯಾಕಪ್ 2023 ಮುಗಿಸಿ ರೋಹಿತ್ ಲಂಕಾದಿಂದ ಭಾರತಕ್ಕೆ ಹಿಂತಿರುಗುವಾಗ ತನ್ನ ಪಾಸ್ಪೋರ್ಟ್ ಅನ್ನು ಮರೆತಿದ್ದರು. ಕೊಲಂಬೊದಿಂದ ಭಾರತಕ್ಕೆ ಹೊರಡಲು ಪಾಸ್ಪೋರ್ಟ್ ಇಲ್ಲದೆ ಎರ್ ಪೋರ್ಟ್ ಟೀಮ್ ಬಸ್ ಹತ್ತಿದ್ದರು.
ಆದರೆ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ತಮ್ಮ ಐಫೋನ್ ಕಳುವಾಗಿರುವುದು ರೋಹಿತ್ ಗಮನಕ್ಕೆ ಬಂದಿದೆಯಂತೆ. ಆದರೆ ಈ ವಿಚಾರವಾಗಿ ಅವರು ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ. ಆದರೆ ಸ್ಥಳೀಯ ಪೊಲೀಸರು ನಾಯಕನ ರೋಹಿತ್ ಫೋನ್ ಹುಡುಕಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದಾದ ನಂತರ ಬಸ್ ಹೋಟೆಲ್ನ ಹೊರಗೆ ನಿಂತಿದ್ದ ವೇಳೆ ಸಹಾಯಕ ಸಿಬ್ಬಂದಿ ರೋಹಿತ್ ಅವರ ಪಾಸ್ಪೋರ್ಟ್ ಅನ್ನು ಹೋಟೆಲ್ ಕೊಠಡಿಯಿಂದ ತಂದು ಅವರಿಗೆ ಕೊಟ್ಟಿದ್ದಾರೆ. ಈ ರೀತಿ ಆಗುತ್ತಿರುವುದು ಇದೇ ಮೊದಲ್ಲ. ಈ ಹಿಂದೆಯೂ ರೋಹಿತ್ ಶರ್ಮಾ ಈ ರೀತಿ ಅನೇಕ ಬಾರಿ ನಡೆದುಕೊಂಡಿದ್ದಾರೆ.
ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ಸ್ ಶೋನಲ್ಲಿ ವಿರಾಟ್ ಈ ಕುರಿತು ಮಾತನಾಡಿದ್ದರು. ರೋಹಿತ್ ತುಂಬಾ ಮರೆವಿನ ಸ್ವಭಾವದವ ಮತ್ತು ಯಾವುದನ್ನಾದರೂ ಮರೆತುಬಿಡುತ್ತಾನೆ. ಈ ಸಂದರ್ಶನದಲ್ಲಿ ರೋಹಿತ್ ತನ್ನ ಮೊಬೈಲ್, ಐಪ್ಯಾಡ್ ಮತ್ತು ಪಾಸ್ಪೋರ್ಟ್ ಅನ್ನು ಮರೆತುಬಿಡುತ್ತಾನೆ ಎಂದು ಹೇಳಿದ್ದರು.
ಆದರೆ, ಈಗ ಈಫೋನ್ ಕಳವಾಗಿದ್ದು, ಈ ಬಗ್ಗೆ ದೂರು ನೀಡಿದ್ದಾರೆ ಎಂದು ವರದಿ ತಿಳಿಸಿದೆ.