ನ್ಯೂಸ್ ನಾಟೌಟ್: ಇಂಡಿಯಾ ಎನ್ನುವ ಹೆಸರನ್ನು “ಭಾರತ” ಎಂದು ಬದಲಾಯಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ ವಜಾ ಮಾಡಿತ್ತು. ಆದರೆ ಇದೇ ವಿಚಾರವನ್ನು ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳ ಮುಂದೆ ಪ್ರಸ್ತಾವಿಸಿ ಪ್ರಾತಿನಿಧ್ಯ ಎಂದು ಪರಿಗಣಿಸಲು ಅವಕಾಶ ಮಾಡಿಕೊಟ್ಟಿತ್ತು ಎನ್ನಲಾಗಿದೆ.
ಇದೀಗ ಈ ವಿಷಯ ಮತ್ತೆ ಚರ್ಚೆಗೆ ಬಂದಿದ್ದು, ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಮಾಡಿದ ಟ್ವೀಟ್ ಎಕ್ಸ್ ಭಾರಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಇಂಡಿಯಾವನ್ನು “ಭಾರತ” ಎಂದು ಸಹ ಕರೆಯಲಾಗುತ್ತದೆ ಎಂದು ಸಂವಿಧಾನವೇ ಹೇಳುತ್ತಿರುವುದರಿಂದ ಮತ್ತೆ ಈ ವಿಚಾರವನ್ನು ನ್ಯಾಯಾಲಯದ ಮುಂದೆ ತರುವ ಅಗತ್ಯವೇನಿತ್ತು? ಎಂದು ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ಹೃಷಿಕೇಶ ರಾಯ್ ಅವರನ್ನೊಳಗೊಂಡ ಪೀಠ ಪ್ರಶ್ನೆ ಮಾಡಿತ್ತು.
ಆದರೆ, ವಿದೇಶಿಯರು ಮತ್ತು ದೇಶದಿಂದ ಕಲೆ, ಕ್ರೀಡೆ ಮುಂತಾದ ಕ್ಷೇತ್ರದಲ್ಲಿ ಅನ್ಯ ದೇಶಗಳಲ್ಲಿ ಪ್ರತಿನಿಧಿಸುವಾಗ ಇಂಡಿಯಾ ಎಂದು ಉಲ್ಲೇಖಿಸಲಾಗಿತ್ತು.
ಇಂಗ್ಲಿಷ್ ನಲ್ಲಿ ಭಾರತವನ್ನು ಇಂಡಿಯಾ ಎಂದು ಕರೆಯುವ ವಾಡಿಕೆ ಇದ್ದುದರಿಂದ ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಭಾರತವನ್ನು ಇಂಡಿಯಾ ಎಂದು ಕರೆಯಲಾಗುತ್ತಿರುವುದು ನಮಗೆಲ್ಲಾ ಗೊತ್ತಿರುವ ವಿಚಾರ. ಆದರೆ ಬಿಜೆಪಿಯು ಮತ್ತೆ ಕೇಂದ್ರದ ಮೂಲಕ ಮತ್ತೆ ಹೆಸರು ಬದಲಾವಣೆಯ ಪ್ರಯತ್ನಕ್ಕಿಳಿದಿರುವ ಸೂಚನೆ ಸಿಕ್ಕಿದ್ದು, ಅದಕ್ಕೆ ಅಸ್ಸಾಂ ಸಿಎಂ ಟ್ವೀಟ್ ಮತ್ತಷ್ಟು ಪುಷ್ಠಿ ನೀಡಿದೆ.
“REPUBLIC OF BHARAT – happy and proud that our civilisation is marching ahead boldly towards AMRIT KAAL” ತಮ್ಮ ಈ ಟ್ವೀಟ್ ನಲ್ಲಿ ರಿಪಬ್ಲಿಕ್ ಆಫ್ ಭಾರತ ಎಂದು ಉಲ್ಲೇಖಿಸಿರುವುದು ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ಅರ್ಜಿದಾರರ ಪರ ವಕೀಲಅಸ್ವಿನ್ ವೈಶ್, ‘ಇಂಡಿಯಾ’ ಎಂಬ ಹೆಸರು ಗ್ರೀಕ್ ಪದ “ಇಂಡಿಕಾ” ದಿಂದ ಬಂದಿದೆ ಎಂದು ವಾದಿಸಿದ್ದರು ಮತ್ತು ಆ ಹೆಸರಿನ ಬದಲು “ಭಾರತ” ಎಂದು ಕರೆಯಬೇಕು ಆ ಮೂಲಕ ಪರದೇಶೀಯರ ಗುಲಾಮಗಿರಿಯ ನೆರಳೈನಿಂದ ತಪ್ಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಆದರೆ ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ ಇಂತಹಾ ಅರ್ಜಿಯನ್ನು ಮನರಂಜನೆಗಾಗಿ ನ್ಯಾಯಾಲಯದ ಮುಂದೆ ತರುವುದು ಸಲ್ಲದು ಎಂದಿದ್ದು ಅರ್ಜಿ ವಜಾ ಮಾಡಿದೆ. ಆದರೆ ಅರ್ಜಿಯನ್ನು ಸಂಬಂಧಪಟ್ಟ ಸಚಿವಾಲಯದ ಮುಂದೆ ಪ್ರಾತಿನಿಧ್ಯದಡಿಯಲ್ಲಿ ಪರಿಗಣಿಸಲು ನ್ಯಾಯಾಲಯವು ಅನುಮತಿ ನೀಡಿತ್ತು ಎನ್ನಲಾಗಿದೆ.
ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಇಂಡಿಯಾ ಎಂಬ ಹೆಸರನ್ನು ಭಾರತ ಅಥವಾ ಹಿಂದೂಸ್ಥಾನ ಎಂದು ಬದಲಾಯಿಸುವಂತೆ ನಮಃ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ ಮುಘಲ್ ದೊರೆಗಳ ಆಡಳಿತದಲ್ಲಿ ಹಿಂದೂಸ್ಥಾನವಾಗಿದ್ದ ನಮ್ಮ ದೇಶವು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಂಡಿಯಾ ಆಗಿ ಬದಲಾಗಿದೆ. ಬ್ರಿಟಿಷರು ಇಟ್ಟ ಹೆಸರು ನಮಗೆ ಬೇಡ. ಹೀಗಾಗಿ ಭಾರತ ಅಥವಾ ಹಿಂದೂಸ್ಥಾನವಾಗಿ ಬದಲಿಸುವಂತೆ ಕೋರಿದ್ದರು ಈಗ ಅದೇ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದೆ ಈ ಕುರಿತಾಗಿ ಕೇಂದ್ರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.