ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಮನೆಯಲ್ಲಿ ಒಂದೆರಡು ಇಲಿಗಳು ಕಂಡು ಬಂದ್ರೆ ಅಯ್ಯೋ ದೇವ್ರೆ ಇಲಿಗಳ ಕಾಟ ಜಾಸ್ತಿಯಾಗಿದೆಯಲ್ಲಪ್ಪ..ಇದನ್ನ ಕಂಟ್ರೋಲ್ ಮಾಡೋದು ಹೇಗೆ ಅನ್ನುವಂತಹ ಯೋಚನೆ ಬಂದು ಬಿಡುತ್ತೆ..ಆದರೆ ಇಲ್ಲೊಂದು ಕಡೆ ೨೦,೦೦೦ದಷ್ಟು ಇಲಿಗಳನ್ನು ಒಂದೇ ಕಡೆ ಕಾಣಬಹುದಾಗಿದೆ.ಇಲ್ಲಿಇಲಿಗಳಿಗೆ ವಿಶೇಷ ಸ್ಥಾನಮಾನವನ್ನೇ ನೀಡಲಾಗಿದೆ ಅಂದ್ರೆ ನೀವು ಅಚ್ಚರಿ ಪಡ್ತೀರಾ…
ಇಡೀ ದೇಶದಲ್ಲಿರುವ ಪ್ರತಿಯೊಂದು ದೇವಾಸ್ಥಾನ ಕೂಡ ತನ್ನದೇ ಆದ ಇತಿಹಾಸ ಹಾಗೂ ಕಥೆ,ನಂಬಿಕೆಯನ್ನು ಹೊಂದಿರುತ್ತೆ.ಪುರಾಣ ಕಥೆಗಳನ್ನು ಹೊಂದಿರುವ ಹಲವಾರು ದೇಗುಲಗಳಿಗೆ ನೀವು ಭೇಟಿಯಾಗಿರುತ್ತೀರಿ.. ಆದರೆ ರಾಜಸ್ಥಾನದ ಬಿಕಾನೇರ್ನಲ್ಲಿ ಕರ್ಣಿ ಮಾತಾ ದೇವಾಲಯವು ವಿಶೇಷವೆಂಬಂತಿದೆ ..ಈ ದೇವಸ್ಥಾನದಲ್ಲಿ ದೇವರ ಮುಂದೆ ಇಲಿಗಳಿಗೆ ನೈವೇದ್ಯ ಅರ್ಪಿಸುತ್ತಾರೆ. ಇಲಿಗಳು ತಿನ್ನುವಾಗ, ಉಳಿದ ಆಹಾರವನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ..!
ಹೆಚ್ಚಿನವರು ಪ್ರಾಣಿಗಳು ತಿಂದ ಆಹಾರವನ್ನು ಮನುಷ್ಯ ಸ್ವೀಕರಿಸೋದೇ ಕಡಿಮೆ.. ಅಂಥದ್ರಲ್ಲಿ ರಾಜಸ್ಥಾನದ ಬಿಕಾನೇರ್ನಲ್ಲಿರುವ ಕರ್ಣಿ ಮಾತಾ ದೇವಾಲಯದಲ್ಲಿ ಇಂತಹ ವಿಚಿತ್ರ ಆಚರಣೆಯನ್ನು ಹೊಂದಿದೆ.ಮಾತ್ರವಲ್ಲ ಈ ದೇವಾಲಯವು ಇಲಿಗಳಿಂದಾಗಿಯೇ ದೇಶದಾದ್ಯಂತ ಬಹಳ ಜನಪ್ರಿಯವಾಗಿದೆ.
ಕರ್ಣಿ ಮಾತಾ ದೇವಾಲಯವನ್ನು 20 ನೇ ಶತಮಾನದಲ್ಲಿ ಬಿಕಾನೇರ್ನ ಮಹಾರಾಜ ಗಂಗಾ ಸಿಂಗ್ ನಿರ್ಮಿಸಿದ. ಕರ್ಣಿ ಮಾತಾ ಮಂದಿರವನ್ನು ಬಿಕಾನೇರ್ನ ರಾಯಲ್ಟಿ ಕುಲದೇವಿ ಎಂದು ಕರೆಯಲಾಗುತ್ತದೆ. ರಾಜಸ್ಥಾನದ ಬಿಕಾನೇರ್ ನಿಂದ ಸುಮಾರು 30 ಕಿ.ಮೀ. ದೇಶ್ನೋಕ್ನಲ್ಲಿರುವ ಈ ದೇವಾಲಯವಿದೆ. ಇಲಿಗಳನ್ನು ಕಾಬಾ ಎಂದು ಕರೆಯಲಾಗುತ್ತದೆ.ಇಲಿಗಳೇ ಈ ದೇವಾಲಯದ ಕೇಂದ್ರ ಬಿಂದುವಾಗಿದೆ.
ದೇವಾಲಯದ ಮುಖ್ಯ ದ್ವಾರ ಬೆಳ್ಳಿಯಿಂದ ಮಾಡಲ್ಪಟ್ಟರೆ, ಕರ್ಣಿ ಮಾತೆಗೆ ಚಿನ್ನದ ಗೋಪುರವನ್ನು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ. ದಿನ ನಿತ್ಯವೂ ಇ್ಲಲಿಗೆ ಸಾವಿರಾರು ಜನರು ಆಗಮಿಸುತ್ತಾರೆ.ಬರುವ ಭಕ್ತಾದಿಗಳೆಲ್ಲ ಇಲಿಗಳಿಗಾಗಿಯೇ ವಿಶೇಷ ಆಹಾರಗಳನ್ನು ತಂದು ಹಾಕುತ್ತಾರೆ. ಹೀಗಾಗಿ ಇಲ್ಲಿ ಇಲಿಗಳ ಸಂಖ್ಯೆಯು ಜಾಸ್ತಿಯಾಗಿದೆ.ಒಂದು ಅಂದಾಜಿನ ಪ್ರಕಾರ ಸುಮಾರು 20 ಸಾವಿರಕ್ಕೂ ಹೆಚ್ಚು ಇಲಿಗಳು ಇಲ್ಲಿ ಓಡಾಡುತ್ತವೆ.
ಇಲ್ಲಿ ಎರಡು ಬಣ್ಣಗಳ ಇಲಿ ಕಂಡು ಬರುತ್ತಿದ್ದು,ಕಪ್ಪು ಬಣ್ಣದದ್ದಾರೆ ಮತ್ತೊಂದು ಕೆಲವು ಬಿಳಿ ಇಲಿಗಳು ಸಹ ಇಲ್ಲಿ ಕಂಡುಬರುತ್ತವೆ.ದೇವಾಲಯದಲ್ಲಿ ಈ ಇಲಿಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.ಈ ದೇವಾಲಯದಲ್ಲಿ ವಾಸಿಸುವ ಬಿಳಿ ಇಲಿಗಳನ್ನು ಮಾತೃ ವಾಹನ ಎಂದು ಪರಿಗಣಿಸಲಾಗುತ್ತದೆ.ಇಲ್ಲಿಗೆ ಬರುವ ಭಕ್ತನು ಅಸುನೀಗಿದರೆ ಅವನು ಕರ್ಣಿ ಮಾತಾ ದೇವಸ್ಥಾನದಲ್ಲಿ ಮರುಜನ್ಮ ಪಡೆಯುತ್ತಾನೆ ಎಂದು ನಂಬಲಾಗಿದೆ.