ನ್ಯೂಸ್ ನಾಟೌಟ್ :ಅ.3 ರಂದು ಸುಳ್ಯದಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಗಾಂಧಿ ಸ್ಮೃತಿ ಮತ್ತು ಜನಜಾಗೃತಿ ವೇದಿಕೆಯ ಜಿಲ್ಲಾ ಮಟ್ಟದ ಸಮಾವೇಶದ ಕುರಿತು ಪೂರ್ವ ಸಿದ್ಧತಾ ಸಭೆ ಇಂದು ನಡೆಯಿತು.ಸುಳ್ಯ ಯೋಜನಾಧಿಕಾರಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆದು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಸಮಾವೇಶದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರ ಉಪಸ್ಥಿತಿ ಇರಲಿದ್ದು,ಹೀಗಾಗಿ ಸಮಾವೇಶದ ಸಮಾರಂಭದ ಆಯೋಜನೆಯ ಕುರಿತು ಸಂವಾದ ನಡೆಯಿತು. ಮೆರವಣಿಗೆಯ ಜವಾಬ್ದಾರಿ ಮತ್ತು ಊಟೋಪಚಾರ ವ್ಯವಸ್ಥೆ , ಸಾಂಸ್ಕೃತಿಕ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆಯೂ ಚರ್ಚಿಸಲಾಯಿತು.
ವಿವಿಧ ಉಪ ಸಮಿತಿಯ ಸಂಚಾಲಕರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.ಅಚ್ಚು ಕಟ್ಟಾದ ವ್ಯವಸ್ಥೆಗೆ ಪೂರ್ವ ತಯಾರಿಯ ಬಗ್ಗೆ ಪ್ರಾದೇಶಿಕ ನಿರ್ದೇಶಕರು ಸಲಹೆ ಸೂಚನೆ ನೀಡಿದರು.ಸಭೆಯು ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಲೋಕನಾಥ್ ಅಮೆಚೂರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ, ಯೋಜನೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ, ಜಿಲ್ಲಾಪ್ರಾದೇಶಿಕ ನಿರ್ದೇಶಕ ಪ್ರವೀಣ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಮಹೇಶ್ ರೈ ಮೇನಾಲ, ನ್ಯಾಯವಾದಿ ಎಂ.ವೆಂಕಪ್ಪಗೌಡ, ಯೋಜನಾಧಿಕಾರಿ ನಾಗೇಶ್ ಪಿ.ಭಜನಾ ಪರಿಷತ್ ನಿರ್ದೇಶಕ ಬೂಡು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ,ವಿ.ಹೆಚ್.ಪಿ.ಅಧ್ಯಕ್ಷ ರಾಧಾಕೃಷ್ಣ ರೈ, ಸೋಮಶೇಖರ ಪೈಕ,ಗುತ್ತಿಗಾರು ವಲಯ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಶೌರ್ಯ ವಿಪತ್ತು ಘಟಕದ ಮಾಸ್ಟರ್ ಪಿ .ಜಿ.ಜಯರಾಮ, ಕ್ಯಾಪ್ಟನ್ ಸತೀಶ್ ನಾಲ್ಕೂರು, ಜಗಮ್ಮೋಹನ ರೈ ಮರ್ಕಂಜ, ಆನಂದ ಗೌಡ,ಚಂದ್ರಶೇಖರ ನೆಡ್ಡಿಲು, ಭಾಸ್ಕರ ಅಡ್ಯಾರ್, ಹೂವಯ್ಯ, ಜಗನ್ನಾಥ, ವೇದ ಶೆಟ್ಟಿ, ರವಿ, ಪಿ.ಆನಂದ, ಗೋಪಾಲಕೃಷ್ಣ, ಜಯಶ್ರೀ, ಸುರೇಶ್ ಅರಂಬೂರು, ಶ್ರೀಧರ ಸುಳ್ಯ, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ಮೇಲ್ವಿಚಾರಕಿ ಮಮತಾ ಸ್ವಾಗತಿಸಿ, ವಲಯ ಮೇಲ್ವಿಚಾರಕ ಕೃಷ್ಣಪ್ಪ ವಂದಿಸಿದರು.