ನ್ಯೂಸ್ ನಾಟೌಟ್ : ಬೈಂದೂರಿನ ಬಿಜೆಪಿ ಟಿಕೆಟ್ಗಾಗಿ (Bynduru BJP ticket) ಐದು ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ (Five crore Fraud case) ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಕ್ಷಣ ಕ್ಷಣಕ್ಕೂ ಹೊಸ ವಿಚಾರಗಳು ಬಯಲಾಗುತ್ತಲೇ ಇದೆ. ಇದರ ಮಧ್ಯೆ ದೊಡ್ಡ ಪ್ರಶ್ನೆಯೊಂದು ಕಾಡಲಾರಂಭಿಸಿದೆ.
ಹೌದು, ಈ ಕೇಸ್ ನಲ್ಲಿ ವಂಚನೆಗೊಳಗಾಗಿದ್ದು ಉದ್ಯಮಿ ಗೋವಿಂದ ಪೂಜಾರಿ (Govinda Poojari).ಹೇಳಿ ಕೇಳಿ ಅವರೊಬ್ಬ ಮಾಮೂಲಿ ಉದ್ಯಮಿಯಲ್ಲ.ಕೋಟ್ಯಂತರ ರೂ. ವ್ಯವಹಾರ ಹೊಂದಿರುವ ದೊಡ್ಡ ಉದ್ಯಮಿ.ಇಷ್ಟಾಗಿಯೂ ಕೂಡ ಇಂತಹ ಪ್ರಕರಣದಲ್ಲಿ ಯಾಕೆ ವಂಚನೆಗಳಗಾದ್ರೂ ಎನ್ನುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.ಯಾಕೆಂದರೆ ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಬಿಜೆಪಿಯ ಘಟಾನುಘಟಿ ನಾಯಕರ ಜತೆ ದೊಡ್ಡ ಮಟ್ಟದ ಸಂಪರ್ಕವೇ ಇತ್ತು.ಮನಸ್ಸು ಮಾಡಿದಿದ್ದರೆ ನೇರವಾಗಿ ಬಿಜೆಪಿಯ ಉನ್ನತ ನಾಯಕರ ಜತೆ ಸಂಪರ್ಕ ಸಾಧಿಸುವಷ್ಟು ಶಕ್ತಿ ಗೋವಿಂದ ಪೂಜಾರಿ ಅವರಿಗಿತ್ತು. ಆದರೆ ಅದೆಲ್ಲವನ್ನೂ ಬಿಟ್ಟು ಟಿಕೆಟ್ ಗಾಗಿ ಈ ಚೈತ್ರಾ ಕುಂದಾಪುರ ಬೆನ್ನು ಬಿದ್ದಿರೋದರ ಕಾರಣವಾದರೂ ಏನು? ಆಕೆ ಕೇಳಿದಂತೆ ಹಣ ಕೊಟ್ಟಿದ್ದು ಯಾಕೆ ಎನ್ನುವುದನ್ನು ಬೆನ್ನಟ್ಟಿ ಹೋದಾಗ ಗೋವಿಂದ ಪೂಜಾರಿ ಅವರ ನಡೆಗಳ ಮೇಲೆಯೇ ಸಿಸಿಬಿಗೆ ಅನುಮಾನ ಮೂಡಲು ಶುರುವಾಗಿದೆ.
ಸದ್ಯ ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.ಸಿಸಿಬಿ ಕೂಡಾ ಈ ಪ್ರಶ್ನೆಯನ್ನು ಇಟ್ಟುಕೊಂಡೇ ಗೋವಿಂದ ಪೂಜಾರಿಯನ್ನು ಜಾಲಾಡಲು ಸಿದ್ಧವಾಗುತ್ತಿದೆ.ನಾನೊಬ್ಬ ಉದ್ಯಮಿಯಾಗಿದ್ದು,ನನಗೆ ರಾಜಕೀಯದವರ ಪರಿಚಯವಿಲ್ಲ ಎನ್ನುತ್ತಿದ್ದ ಗೋವಿಂದ ಪೂಜಾರಿಯವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ರಾಜಕಾರಣಿಗಳ ಜತೆ ಒಡನಾಟ ಇದೆ ಎಂಬುದರ ಬಗ್ಗೆ ಕೆಲವು ಫೋಟೋ ಸಾಕ್ಷಿಗಳು ಸಿಕ್ಕಿವೆ. ಗೋವಿಂದ ಪೂಜಾರಿ ಅವರು ಬಿಜೆಪಿಯ ಸ್ಥಳೀಯ ನಾಯಕರಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೆ ಉತ್ತಮ ಒಡನಾಟ ಹೊಂದಿದ್ದರು ಎಂಬುದಕ್ಕೆ ಆ ಫೋಟೋಗಳೇ ಸಾಕ್ಷಿ ನುಡಿದಿವೆ. ಮಾತ್ರವಲ್ಲ ಪಕ್ಷದಲ್ಲಿಯೂ ಕೆಲಸ ಮಾಡಿದ್ದರು.ಸಂಘ ಪರಿವಾರ ಮತ್ತು ಬಿಜೆಪಿಯಲ್ಲಿ ದಾನಿಯಾಗಿ ಆಗಲೇ ಗುರುತಿಸಿಕೊಂಡಿದ್ದರು.ಈ ಎಲ್ಲಾ ಹಿನ್ನಲೆಯಲ್ಲಿ ಅವರಿಗೆ ಟಿಕೆಟ್ ಬಗ್ಗೆ ದೊಡ್ಡ ನಾಯಕರ ಜತೆಗೆನೇ ಚರ್ಚಿಸಬಹುದಾಗಿತ್ತು.
ಹಾಗೆ ನೋಡೋದಕ್ಕೆ ಹೋದರೆ ಗೋವಿಂದ ಬಾಬು ಪೂಜಾರಿಯವರಿಗೆ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರದ್ದೇ ಪರಿಚಯವಿತ್ತು. ಇನ್ನುಳಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ,ಮಾಜಿ ಸಚಿವ ಸುನೀಲ್ ಕುಮಾರ್, ಕೆ.ಎಸ್ ಈಶ್ವರಪ್ಪ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪರಿಚಯವೂ ಅವರಿಗಿತ್ತು.ಇತ್ತ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕ ಸಿ.ಟಿ.ರವಿ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಕಲ್ಲಡ್ಕ ಪ್ರಭಾಕರ್ ಭಟ್, ಶಾಸಕರಾದ ವೇದವ್ಯಾಸ್ ಕಾಮತ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ ಅವರ ಜತೆಗೆ ಸಂಪರ್ಕವಿತ್ತು. ವಿನಯ್ ಗುರೂಜಿ ಜೊತೆಯೂಗೋವಿಂದ ಬಾಬು ಪೂಜಾರಿ ಗುರುತಿಸಿಕೊಂಡಿದ್ದಾರೆ.
ಇನ್ನು ಗೋವಿಂದ ಪೂಜಾರಿ ಅವರು ಕೊಟ್ಟ ಹಣವನ್ನು ನಗದು ರೂಪದಲ್ಲೇ ನೀಡಿದ್ದಾರೆ.ಈ ಬಗ್ಗೆ ಫೋನ್ ಕಾಲ್ಗಳು, ಕೆಲವೊಂದು ಫೋಟೋ ಹೊರತುಪಡಿಸಿದಂತೆ ಬೇರಾವುದೇ ದಾಖಲೆಗಳೂ ಇಲ್ಲ.ಆದರೆ ಚೈತ್ರಾ ಹೇಳಿದ್ದೆಲ್ಲವನ್ನು ಗೋವಿಂದ ಪೂಜಾರಿಯವರು ನಂಬಿದ್ದಾರೆ ಎಂದರೆ ಆಕೆ ನಂಬುವಂತೆ ಮಾಡಿರುವ ಆ ಅಂಶ ಯಾವುದು ಎನ್ನುವ ಪ್ರಶ್ನೆಯು ಕೂಡ ಎದ್ದಿದ್ದು, ಸಿಸಿಬಿ ವಿಚಾರಣೆಗೆ ರೆಡಿಯಾಗಿದೆ.
ಬಿಜೆಪಿಯ ಘಟಾನುಘಟಿ ನಾಯಕರ ಜತೆ ಹೈಲೆವೆಲ್ ಕಾಂಟ್ಯಾಕ್ಟ್ ಇದ್ರೂ ಗೋವಿಂದ ಬಾಬು ಪೂಜಾರಿ ಟಿಕೆಟ್ ಗಾಗಿ ಹಿಂದೆ ಬೀಳುವ ಅವಶ್ಯಕತೆ ಏನಿತ್ತು? ಸದ್ಯ ತನಿಖೆ ವೇಳೆ ಗೋವಿಂದ ಬಾಬು ಪೂಜಾರಿ ಅವರು ಚೈತ್ರಾ ತನಗೆ ಮೋಸ ಮಾಡಿದ್ದಾಳೆ ಎಂದು ಎಲ್ಲಾ ದಾಖಲೆ ಒದಗಿಸಿದ್ದಾರೆ. ಸಲ್ಲಿಸಿರುವ ಎಲ್ಲಾ ದಾಖಲೆಗಳು ಚೈತ್ರ ಅಂಡ್ ಗ್ಯಾಂಗ್ ವಿರುದ್ಧವೇ ಇದೆ. ಆದರೆ, ಈಗ ಮೂಡುವ ಇನ್ನೊಂದು ಅನುಮಾನ ಎಂದರೆ ಚೈತ್ರ ಕುಂದಾಪುರ ಪಾಪ್ಯುಲರಿಟಿಗೆ ಬ್ರೇಕ್ ಹಾಕಲು ಯಾರದ್ದಾದರೂ ಪ್ಲ್ಯಾನ್ ಇದೆಯೇ ಎನ್ನುವ ಅನುಮಾನವೂ ಮೂಡಿದೆ.