ನ್ಯೂಸ್ ನಾಟೌಟ್ : ಹಳೆಯ ನಾಣ್ಯಗಳು ಅಥವಾ ನೋಟುಗಳನ್ನು ಚಲಾವಣೆಯಲ್ಲಿ ಇಲ್ಲದ ನಿಷ್ಪ್ರಯೋಜಕವೆಂದು ಪರಿಗಣಿಸುತ್ತೇವೆ. ಆದರೆ, ಆ ನಾಣ್ಯಗಳು ಮತ್ತು ನೋಟುಗಳ ಸಹಾಯದಿಂದ ಲಕ್ಷಾಧಿಪತಿಯಾಗುವ ನಿಮ್ಮ ಕನಸು ನನಸಾಗಬಹುದು.
ಅನೇಕರಿಗೆ ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಇರುತ್ತದೆ. ಇದಕ್ಕಾಗಿ ಅವರು ದುಬಾರಿ ಹಣ ನೀಡಿ ಹಳೆಯ ನೋಟು ಮತ್ತು ನಾಣ್ಯಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಾರೆ.
ಹಳೆಯ ನಾಣ್ಯಗಳು ಮತ್ತು ನೋಟುಗಳು ಖರೀದಿಸಲು ಮತ್ತು ಮಾರಾಟ ಮಾಡಲು ಅನೇಕ ಆನ್ ಲೈನ್ ಮತ್ತು ಆಫ್ ಲೈನ್ ವೇದಿಕೆಗಳಿವೆ. ಅಲ್ಲಿ ನೀವು ಹಳೆಯ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ, ಲಕ್ಷ ಹಣ ಗಳಿಸಬಹುದು.
quikr:
ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡಲು, ನೀವು Quikr ಅಪ್ಲಿಕೇಶನ್ ಅಥವಾ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ನೀವು ಈ ಅಪ್ಲಿಕೇಶನ್ ಅನ್ನು ಪಡೆಯಬಹುದು. ನೋಂದಣಿ ಪೂರ್ಣಗೊಂಡ ನಂತರ, ಮಾರಾಟ ಮಾಡಲು ಬಯಸುವ ನಾಣ್ಯ ಅಥವಾ ನೋಟಿನ (Old Coins Note Busines) ಫೋಟೋವನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಇದರ ನಂತರ, ಆ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸಲು ಸಿದ್ಧರಿರುವ ಖರೀದಿದಾರರು, ನಿಮ್ಮ ಇಮೇಲ್ ಅಥವಾ ಫೋನ್ ಸಂಖ್ಯೆಯ ಮೂಲಕ ತಮ್ಮನ್ನು ಸಂಪರ್ಕಿಸುತ್ತಾರೆ.
Coinbazzar.com :
ನೀವು ಬಯಸಿದರೆ Coinbazzar.comವೆಬ್ಸೈಟ್ಗೆ ಭೇಟಿ ನೀಡುವ ಮೂಲಕವೂ ನಿಮ್ಮ ಹಳೆಯ ನಾಣ್ಯಗಳು ಅಥವಾ ನೋಟುಗಳನ್ನು ((Old Coins Note Busines)ಮಾರಾಟ ಮಾಡಬಹುದು. ನೀವು ಈ ಸೈಟ್ನಿಂದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು. ಅವುಗಳನ್ನು ನೋಂದಾಯಿಸುವ ವಿಧಾನವು Quikrನಂತೆಯೇ ಇರುತ್ತದೆ.
‘ಒಲ್ಡ್ ಈಸ್ ಗೋಲ್ಡ್’ ಎಂಬಂತೆ ಹಳೆಯ ಮತ್ತು ಪುರಾತನ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು, ಹಳೆಯದಾದಂತೆ ತಮ್ಮ ಪಾರಂಪರಿಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತವೆ.