ನ್ಯೂಸ್ ನಾಟೌಟ್ : ಬಸ್ ನಿಲ್ದಾಣಕ್ಕಾಗಿ ಆಗ್ರಹಿಸಿ ಸಾರ್ವಜನಿಕರು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿದ್ದು,ಇದೀಗ ವಿನೂತನ ಪ್ರತಿಭಟನೆಗೆ ಮುಂದಾದ ಘಟನೆ ಚಿಕ್ಕಮಗಳೂರು (Chikkamagluru) ಜಿಲ್ಲೆಯಲ್ಲಿ ನಡೆದಿದೆ.ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡಬಗೆರೆ ಗ್ರಾಮದಲ್ಲಿ ಬಸ್ ನಿಲ್ದಾಣವಿಲ್ಲದೆ (Bus Stand) ಜನ ಪರದಾಡುತ್ತಿದ್ದರು.
ಈ ಪ್ರದೇಶದಲ್ಲಿ ಜನ ಸರಿಯಾದ ಬಸ್ ತಂಗುದಾಣವಿಲ್ಲದೇ ನಿತ್ಯ ಪರದಾಟ ನಡೆಸುತ್ತಿದ್ದಾರೆ.ಭಾರಿ ಮಳೆ ಬಂದಾಗ ಜನರು ಮಳೆಯಲ್ಲಿಯೇ ಒದ್ದೆಯಾಗಿಕೊಂಡು ಇರೋ ಪರಿಸ್ಥಿತಿ ಇಲ್ಲಿನ ಜನಗಳದ್ದು.ಶಾಲಾ ಮಕ್ಕಳ ಪಾಡಂತು ಹೇಳತೀರದಾಗಿದೆ.ಇನ್ನು ಪುಟ್ಟ ಪುಟ್ಟ ಮಕ್ಕಳಿರುವ ತಾಯಿಯರು ಬಸ್ ಬರೋ ವೇಳೆಗೆ ಸುಸ್ತಾಗಿ ಬಿಡ್ತಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಸ್ಥಳೀಯರು ಬಸ್ ನಿಲ್ದಾಣ ಮಾಡಿಸುವಂತೆ ಹತ್ತು ವರ್ಷಗಳಿಂದ ನೂರಾರು ಬಾರಿ ಮನವಿ ಮಾಡಿದ್ದಾರೆ . ಆದರೂ ಯಾವುದೇ ರೀತಿಯ ಉಪಯೋಗವಾಗಿಲ್ಲ.ಇದರಿಂದ ರೋಸಿಹೋದ ಅಲ್ಲಿನ ಸಾರ್ವಜನಿಕರು ಭಿಕ್ಷಾಟನೆ ಮಾಡಿ ಅದರಿಂದ ಬಂದ ಹಣದಿಂದ ಟಾರ್ಪಲ್ ಖರೀದಿಸಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿ ಸುದ್ದಿಯಾಗಿದ್ದಾರೆ.