ನ್ಯೂಸ್ ನಾಟೌಟ್ : ಸುಳ್ಯದ ಕಾಲೇಜೊಂದರಲ್ಲಿ ಓದುತ್ತಿದ್ದೇವೆ. ನಮ್ಮ ಬಳಿ ಫೀಸ್ ಕಟ್ಟುವುದಕ್ಕೂ ಹಣವಿಲ್ಲ. ದಯಮಾಡಿ ಸಹಾಯ ಮಾಡಿ. ನಮ್ಮ ಬಳಿ ಇರುವ 3 ಪವನ್ ಚಿನ್ನದ ಸರವನ್ನು ತೆಗೆದುಕೊಳ್ಳಿ ಎಂದು ನವರಂಗಿ ನಾಟಕವಾಡಿದ್ದ ಗಂಡ-ಹೆಂಡತಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಹೌದು, ಕೇರಳದಿಂದ 3 ಪವನ್ ಚಿನ್ನದ ಸರವನ್ನು ಕದ್ದು ಅದನ್ನು ಸುಳ್ಯದಲ್ಲಿ ಮಾರಾಟ ಮಾಡಲಾಗಿತ್ತು. ಕಳೆದ 22 ದಿನಗಳ ಹಿಂದೆ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೇರಳ ಪೊಲೀಸರು ಸರ್ಜಾನ್ ಅನ್ನುವ ವ್ಯಕ್ತಿಯನ್ನು ಕಾಸರಗೋಡಿನಲ್ಲಿ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಪ್ಟೆಂಬರ್ ೨ರಂದು ಶನಿವಾರದಂದು ಮಧ್ಯಾಹ್ನ 3.30ಕ್ಕೆ ಸುಳ್ಯದ ಖಾಸಗಿ ಬಸ್ ಸ್ಟ್ಯಾಂಡ್ ನಲ್ಲಿರುವ ಚಿನ್ನದಂಗಡಿಗೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಿದ್ದರು
22 ದಿನದ ಮುಂಚೆ ಅಂಗಡಿಗೆ ಸರ್ಜಾನ್ ಮತ್ತು ಅವನ ಹೆಂಡತಿ ಬಂದಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಲ್ ಎಲ್ ಬಿ ವಿದ್ಯಾಭ್ಯಾಸ ಮಾಡುತ್ತಿದ್ದೇವೆ. ಫೀಸ್ ಕಟ್ಟುವುದಕ್ಕೆ ಹಣದ ಅವಶ್ಯಕತೆ ಇದೆ. ಅದ್ದರಿಂದ ಮೂರು ಪವನ್ ಚಿನ್ನವನ್ನು ಅಂಗಡಿ ಮಾಲೀಕನಿಗೆ ಕೊಟ್ಟು ಹಣವನ್ನು ಕೇಳಿರುತ್ತಾರೆ. ಇದನ್ನು ತೂಗಿದ ಅಂಗಡಿ ಮಾಲೀಕರು 1 ಲಕ್ಷದ 43 ಸಾವಿರ ರೂ. ನೀಡಿರುತ್ತಾರೆ.
ಆ ಬಳಿಕ ಯಾವುದು ಮಾಹಿತಿ ಇರಲಿಲ್ಲ . ಇದೀಗ ಕೇರಳ ಪೊಲೀಸರು ಬಂದು ವಿಚಾರಿಸಿ ಚಿನ್ನವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಹಿಂದೆಯೂ ಆತ ಮೂರು ಕಡೆ ಹೀಗೆಯೇ ವಂಚಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಎಂದು ತಿಳಿದು ಬಂದಿದೆ. ಸ್ಥಳ ಮಹಜರಿಗೆ ಪೊಲೀಸರ ಜೊತೆ ಬಂದಿರುವ ಕಳ್ಳ ವಾಪಸ್ ನಾನು ಹಣ ನೀಡುವುದಾಗಿ ಜ್ಯುವೆಲರ್ಸ್ ಮಾಲೀಕರಿಗೆ ಭರವಸೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.