ನ್ಯೂಸ್ ನಾಟೌಟ್ : ತಾಯಿಗೆ ತನ್ನ ಮಗುವೇ ಸರ್ವಸ್ವ..ಪ್ರಪಂಚದಲ್ಲಿ ಏನು ಬೇಕಾದರೂ ಆಗಲಿ,ಎಷ್ಟೇ ಬ್ಯುಸಿಯಾಗರಲಿ ತಾಯಿ ಮಾತ್ರ ತನ್ನ ಮಗುವನ್ನು ಬಿಟ್ಟಿರಲಾರಳು.ಆದರೆ ಕೆಲವೊಮ್ಮೆ ಅಚಾನಕ್ ಆಗಿ, ಅದೃಷ್ಟ ಕೈ ಕೊಟ್ಟಾಗ ಅಥವಾ ಅಸಡ್ಡೆಯಿಂದಾಗಿಯೂ ಕೆಲವೊಂದು ದುರಂತಗಳು ಸಂಭವಿಸುತ್ತವೆ.ಅಂತಹ ದುರಂತಗಳಲ್ಲಿ ಇದು ಕೂಡ ಒಂದು.
ಹೌದು,ಅದ್ಯಾವ ಘಳಿಗೆಯಲ್ಲಿ ತಾಯಿಗೆ ಯಾರ ಫೋನ್ ಬಂತೋ ಏನೋ…ತಾಯಿ ಮೊಬೈಲ್ನಲ್ಲೇ ಬ್ಯುಸಿಯಾಗಿದ್ದಳು.ಈ ವೇಳೆ ಸುಯ್ಯೆಂದು ಬಂದ ಕಾರು ಮೂರು ವರ್ಷದ ಮಗುವಿನ ಮೇಲೆಯೆ ಹರಿದು ಹೋಗಿದೆ. ಪರಿಣಾಮ ಮಗು ಸ್ಥಳದಲ್ಲಿಯೇ ದುರಂತ ಅಂತ್ಯವನ್ನೇ ಕಂಡಿದೆ.
ಈ ದಾರುಣ ಘಟನೆ ವರದಿಯಾಗಿದ್ದು ಉತ್ತರ ಪ್ರದೇಶದ ಲಕ್ನೋದಲ್ಲಿ. ಲಕ್ನೋದಲ್ಲಿರುವ ಸಿಲ್ವರ್ ಹೈಟ್ ಅಪಾರ್ಟ್ಮೆಂಟ್ನ ಮುಖ್ಯದ್ವಾರದ ಬಳಿ ಮಹಿಳೆಯೊಬ್ಬರು ಫೋನಿನಲ್ಲಿ ಮಾತನಾಡುತ್ತ, ಮಗುವನ್ನು ಅಲ್ಲೇ ಕೆಳಗೆ ಕೂರಿಸಿದ್ದರು. ಮಗು ಆಡುತ್ತಾ ಆಡುತ್ತಾ ಗೇಟ್ ನ ಮುಂಭಾಗದಲ್ಲಿ ಕೂತಿದೆ. ತಾಯಿ ಅತ್ತ ಗಮನಿಸದೆ ಫೋನಿನಲ್ಲಿ ಮಾತನಾಡುವುದರಲ್ಲೇ ನಿರತರಾಗಿದ್ದಾರೆ.
ಇದೇ ವೇಳೆ ಕಾರೊಂದು ಗೇಟ್ ಒಳಗೆ ಬಂದಿದೆ. ವೇಗವಾಗಿ ಬಂದ ಕಾರು ಕೂತಿದ್ದ ಮಗುವಿನ ಮೇಲೆ ಹರಿದು ಸೀದಾ ಮುಂದೆ ಹೋಗಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸೆರೆಯಾಗಿದೆ. ಸದ್ಯ ಮಗುವಿನ ತಂದೆ ದುರ್ಗೇಶ್ ಗುಪ್ತ ಈ ಕುರಿತು ಪೊಲೀಸರಿಗ ದೂರು ನೀಡಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಸದ್ಯ ಕಾರು ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಸ್ತೆ ಬದಿಗಳಲ್ಲಿ ನಡೆದುಕೊಂಡು ಹೋಗುವಾಗ ಪಾದಾಚಾರಿಗಳು ತುಂಬಾ ಎಚ್ಚರದಿಂದ ಹೆಜ್ಜೆ ಹಾಕಬೇಕಾಗುತ್ತದೆ.ಕೆಲವೊಮ್ಮೆ ಅದೃಷ್ಟ ಕೈ ಕೊಟ್ಟಾಗ ನಾವು ಎಷ್ಟೇ ಜಾಗರೂಕರಾಗಿದ್ದರೂ ಕೂಡ ಅಪಾಯಗಳು ಸಂಭವಿಸುವುದಿದೆ.ಇಂತಹ ಸಂದರ್ಭಗಳಲ್ಲಿ ಫೋನಿಂದ ಆದಷ್ಟು ದೂರ ಇರೋದೇ ಒಳ್ಳೆಯದು.