ನ್ಯೂಸ್ ನಾಟೌಟ್: ನಮ್ಮ ಪ್ರಕೃತಿಯೇ ವಿಚಿತ್ರ ಮತ್ತು ಕುತೂಹಲಕಾರಿ ನಿಗೂಢತೆಗಳನ್ನು ಹೊಂದಿದೆ, ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಜಾತಿಯ ಮರ ತನ್ನ ಅಪಾಯಕಾರಿ ರೀತಿಯಿಂದಲೇ ಸುದ್ದಿಯಾಗಿದ್ದು, ಅನೇಕ ಕೌತುಕಗಳನ್ನು ಹೊತ್ತು ನಿಂತಿವೆ.
ಬಿಸಿಲಿಗೆ ದಣಿದಿದ್ದಾಗ, ತಂಪಾದ ಜಾಗದಲ್ಲಿ ನಿಲ್ಲಬೇಕೆಂಬ ಪರಿಸ್ಥಿತಿ ಬಂದಾಗ ಎಲ್ಲರೂ ಮರಗಳಡಿಯಲ್ಲಿ ಹೋಗಿ ನಿಲ್ಲುತ್ತಾರೆ. ಆದರೆ ಈ ಮರದಡಿ ನಿಂತರೆ ಅದು ಮಾರಣಾಂತಿಕ ಮತ್ತು ಈ ಮರದಡಿಯಲ್ಲಿ ಹೋಗಿ ನಿಂತರೆ ನಾನಾ ಬಗೆಯ ಕಾಯಿಲೆಗಳಿಗೆ ಜನರು ತುತ್ತಾಗುತ್ತಾರೆ ಎನ್ನುವುದು ಅಚ್ಚರಿಯ ವಿಚಾರ.
ಸಾ* ವಿನ ಮರ ಅಥವಾ ಅತ್ಯಂತ ಅಪಾಯಕಾರಿ ವೃಕ್ಷ ಎಂದು ಕುಖ್ಯಾತಿ ಗಳಿಸಿರುವ ಮರದ ಕಥೆ ವಿಶೇಷವಾಗಿದೆ. ವಿಶ್ವದ ಅತ್ಯಂತ ಅಪಾಯಕಾರಿ' ವೃಕ್ಷ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ವಿಷಕಾರಿ
ಮಂಚಿನೀಲ್’ ಎಂಬ ಮರ. ಈ ಮರದಡಿಯಲ್ಲಿ ಹೋಗಿ ನಿಂತರೆ ಅಂತಹ ಕಷ್ಟಗಳು ಕಾಣಲಾರಂಭಿಸುತ್ತವೆ. ಕೆಲವೊಬ್ಬರು ಜೀವ ಕಳೆದುಕೊಳ್ಳುವ ಸಂಭವವೂ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಫ್ಲೋರಿಡಾ ಎವರ್ಗ್ಲೇಡ್ಸ್ ಮತ್ತು ಕೆರಿಬಿಯನ್ ಕರಾವಳಿ ಪ್ರದೇಶದಲ್ಲಿ ಕಂಡು ಬರುವ ಈ ಮರದ ಮೇಲೆ ಅಪಾಯದ ಬೋರ್ಡ್ ಗಳನ್ನು ಹಾಕಿ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಜೌಗು ಪ್ರದೇಶದಲ್ಲಿ ಸುಮಾರು 50 ಅಡಿ ಎತ್ತರ ಬೆಳೆಯುವ ಈ ಮರದ ಬಳಿ ಹೋಗುವುದಕ್ಕೇ ಜನ ಹೆದರುತ್ತಾರೆ. ಅಷ್ಟರಮಟ್ಟಿಗೆ ಈ ಮರ ಭೀತಿ ಸೃಷ್ಟಿಸಿದೆ. `ಮಂಚಿನೀಲ್’ ಮರ ಅದೆಷ್ಟು ವಿಷಕಾರಿಯಾಗಿದೆ ಎಂದರೆ ಮಳೆಯ ಸಮಯದಲ್ಲಿ ಈ ವೃಕ್ಷದ ಕೆಳಗೆ ನಿಂತರೆ ಚರ್ಮವು ಸುಟ್ಟಂತಹ ಅನುಭವವಾಗುತ್ತದೆ, ಗುಳ್ಳೆಗಳು ಏಳುತ್ತವೆ. ಈ ಮರದ ಹಣ್ಣನ್ನು ತಿಂದರೆ ಆಂತರಿಕ ರಕ್ತಸ್ರಾವ ಉಂಟಾಗಿ ಕೊನೆಯುಸಿರೆಳೆಯುವ ಸಾಧ್ಯತೆಗಳಿವೆ.
ಈ ಮರದ ತೊಗಟೆ, ಎಲೆ ಮತ್ತು ಹಣ್ಣುಗಳಲ್ಲಿ ಹಾಲಿನಂತಹ ದಪ್ಪ ದ್ರವವನ್ನು ಬರುತ್ತದೆ. ಈ ದ್ರವ ಚರ್ಮದ ಸಂಪರ್ಕಕ್ಕೆ ಬಂದರೆ ತೀವ್ರವಾದ ಸುಟ್ಟಂತಹ ಗುಳ್ಳೆಗಳು ಉಂಟಾಗುತ್ತವೆ. ಬರೀ ಅಷ್ಟೇ ಅಲ್ಲ ಮಂಚಿನೀಲ್ ಮರದ ಕಟ್ಟಿಗೆ ಸುಟ್ಟಾಗ ಬರುವ ಹೊಗೆಯಿಂದ ಕಣ್ಣಿನ ಉರಿಯೂತ ಮತ್ತು ತಾತ್ಕಾಲಿಕ ಕುರುಡುತನ ಕಾಡಿದ್ದೂ ಇದೆ ಎಂದು ವರದಿ ತಿಳಿಸಿದೆ.
ಈ ಮರಗಳು ಇಲ್ಲಿನ ಪರಿಸರ ವ್ಯವಸ್ಥೆಗೆ ಬಹಳ ಅಗತ್ಯವೂ ಆಗಿದೆ. ಫ್ಲೋರಿಡಾ ಎವರ್ಗ್ಲೇಡ್ಸ್ ಮತ್ತು ಕೆರಿಬಿಯನ್ ಕರಾವಳಿ ಪ್ರದೇಶದಲ್ಲಿ ಸಮುದ್ರದ ಅಲೆಗಳಿಂದ ಉಂಟಾಗುವ ಮಣ್ಣಿನ ಸವೆತವನ್ನು ಇವುಗಳು ತಡೆಯಲು ಸಹಾಯ ಮಾಡುತ್ತವೆ.
ಆದರೆ, ಈ ಮರಗಳು ಜನರ ಪಾಲಿಗೆ ಮಾತ್ರ ಬಹಳ ಕಂಟಕವಾಗಿ ಪರಿಣಮಿಸಿವೆ. ಗಿನ್ನಿಸ್ ವಿಶ್ವ ದಾಖಲೆ ಕೂಡಾ ಇದನ್ನು ವಿಶ್ವದ ಅತ್ಯಂತ ಅಪಾಯಕಾರಿ ಮರ ಎಂದು ದಾಖಲಿಸಿದೆ.