ನ್ಯೂಸ್ ನಾಟೌಟ್: ಪ್ರತಿಯೊಬ್ಬರಿಗೂ ಶುಚಿ-ರುಚಿಯಾದ ಆಹಾರಗಳು ಒಂದಲ್ಲ ಒಂದು ಕಾರಣಗಳಿಂದ ಇಷ್ಟವಾಗುತ್ತದೆ. ನಮಗೆ ಯಾವ ತಿಂಡಿಗಳು ಇಷ್ಟವಾಗುತ್ತೆ ಅನ್ನುವುದು ನಮ್ಮ ಮನೆಯವರಿಗೆ ತಿಳಿದೇ ಇರುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವೆಲ್ಲ ತಿಂಡಿಗಳು Modi’s 10 Favourite Indian Dishes) ಇಷ್ಟವಾಗುತ್ತೆ ಅನ್ನುವ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ. ಈ ಬಗೆಗಿನ ಒಂದು ವರದಿ ಇಲ್ಲಿದೆ ಓದಿ.
ರವಾ ಮಸಾಲಾ ದೋಸೆ (Rawa Masala Dosa)
ದೋಸೆ ಅಂದ್ರೆ ಹೆಚ್ಚಿನವರಿಗೆ ಇಷ್ಟವಾಗುತ್ತೆ. ಅದರಲ್ಲೂ ರವಾ ದೋಸೆ ಅಂದ್ರೆ ಸುಮ್ಮನೆನಾ..ಅದು ಎಲ್ಲರಿಗೂ ಇಷ್ಟವಾಗುತ್ತದೆ. ಹಾಗೆಯೇ ನಮ್ಮ ಪ್ರಧಾನಿಗೂ ರವಾ ದೋಸೆ ಅಂದ್ರೆ ತುಂಬಾನೆ ಇಷ್ಟ. ದಕ್ಷಿಣ ಭಾರತದ ಈ ಫುಡ್ ಅನ್ನು ಆವಾಗಾವಾಗ ತಂದು ತಿನ್ನುತ್ತಿರುತ್ತಾರೆ.
ಅಜ್ವೈನ್ ಚಪಾತಿ (Ajwain Chapati)
ಗೋಧಿ ಹಿಟ್ಟಿನೊಂದಿಗೆ ಅಜ್ವೈನ್ ಹಿಟ್ಟನ್ನು ಸೇರಿಸಿ ಮಾಡುವ ಚಪಾತಿ ಮೋದಿ ಅವರಿಗೆ ಇಷ್ಟವಂತೆ. ಅಜ್ವೈನ್ ಬೀಜಗಳು ನಮ್ಮ ಜೀರ್ಣಕ್ರಿಯೆಯನ್ನು ಚೆನ್ನಾಗಿ ಮಾಡುತ್ತದೆ. ಮಾತ್ರವಲ್ಲ ದೇಹವನ್ನು ತಂಪಾಗಿಸುತ್ತದೆ. ಅದರಿಂದ ಮಾಡಲಾಗುವ ರೊಟ್ಟಿ ಅಥವಾ ಚಪಾತಿ ದೇಹಕ್ಕೆ ತುಂಬಾನೇ ಒಳ್ಳೆಯದು.
ಭಿಂಡಿ ಕಧಿ (Bhindi Kadhi)
ಮೋದಿಯವರು ಮೂಲತಃ ಗುಜರಾತ್ ನವರು. ಸಹಜವಾಗಿಯೇ ಅವರ ಊರಿನ ತಿಂಡಿ-ತಿನಿಸುಗಳು ಅವರಿಗೆ ಹೆಚ್ಚು ಪ್ರಿಯವಾಗಿರುತ್ತದೆ. ಅಂತಹ ಆಹಾರಗಳಲ್ಲಿ ಗುಜರಾತ್ನ ಪ್ರಮುಖ ಆಹಾರಗಳಲ್ಲಿ ಒಂದಾದ ಭಿಂಡಿ ಕಧಿ ಕೂಡ ಒಂದಾಗಿದೆ. ಸ್ವಲ್ಪ ಸಿಹಿಯಾಗಿರುವ ಈ ಖಾದ್ಯವನ್ನು ಹುರಿದ ಬೆಂಡೆಕಾಯಿಯಿಂದ ತಯಾರಿಸಲಾಗುತ್ತದೆ. ಇದನ್ನು ಅನ್ನದೊಂದಿಗೆ ಸೇವಿಸಲಾಗುತ್ತದೆ.
ವೆಜ್ ಥಾಲಿ (Veg Thali)
ಪ್ರಧಾನಿ ಮೋದಿಗೆ ವೆಜ್ ಥಾಲಿ ಅಂದ್ರೆ ತುಂಬಾನೆ ಇಷ್ಟ. ಅದರಲ್ಲೂ ಸಂಸತ್ ಭವನದಲ್ಲಿ ತಯಾರಿಸುವ ವೆಜ್ ಥಾಲಿ ಅಂದ್ರೆ ಅವರು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಾರೆ. ಈ ಥಾಲಿಯಲ್ಲಿ ಪಲ್ಯ, ಸಬ್ಜಿ, ದಾಲ್, ರೊಟ್ಟಿ, ಸಲಾಡ್ ಸೇರಿ ವಿವಿಧ ರೀತಿಯ ಖಾದ್ಯಗಳು ಇರುತ್ತವೆ.
ಖಿಚಡಿ (Khichdi)
ಗುಜರಾತ್ ಭಾಗದಲ್ಲಿ ಹೆಚ್ಚಾಗಿ ಮಾಡಲಾಗುವ ಖಿಚಡಿ ಮೋದಿ ಅವರಿಗೆ ಇಷ್ಟವಾದ ಆಹಾರವಂತೆ. ಹೆಸರು ಬೇಳೆ ಮತ್ತು ವಿವಿಧ ಸಣ್ಣ ಧಾನ್ಯಗಳಿಂದ ಮಾಡುವ ಖಿಚಡಿ ಹಾಗೂ ರಾಗಿಯಿಂದ ಮಾಡಿದ ಖಿಚಡಿ ಕೂಡ ಅವರಿಗೆ ಇಷ್ಟವಾಗುತ್ತದೆಯಂತೆ.
ಮಾರ್ವಾಡಿ ಪುಲಾವ್ (Marwari Pulao)
ಜೋಧ್ ಪುರ ಭಾಗದಲ್ಲಿ ಹೆಚ್ಚಾಗಿ ತಯಾರಿಸಲಾಗುವ ಈ ಮಾರ್ವಾಡಿ ಪಲಾವ್ನಲ್ಲಿ ಮೊಸರು, ಗೋಡಂಬಿ, ದಾಳಿಂಬೆ ಸೇರಿ ಹಲವು ರೀತಿಯ ಸಾಮಗ್ರಿಯನ್ನು ಹಾಕಲಾಗಿರುತ್ತದೆ. ಈ ಪಲಾವ್ ಮೋದಿ ಅವರ ಫೇವರಿಟ್ ಖಾದ್ಯಗಳಲ್ಲಿ ಒಂದು.
ಧೋಕ್ಲಾ (Dhokla)
ಗುಜರಾತ್ನ ಪ್ರಸಿದ್ಧ ಖಾದ್ಯವಾದ ಧೋಕ್ಲಾವೆಂದರೆ ತುಂಬಾನೇ ಇಷ್ಟವಂತೆ. ಸಾಮಾನ್ಯವಾಗಿ ಈ ಧೋಕ್ಲಾವನ್ನು ಹಿಟ್ಟಿನಿಂದ ಅಥವಾ ರವೆಯಿಂದ ತಯಾರಿಸಲಾಗುತ್ತದೆ. ನೋಡುವುದಕ್ಕೆ ನಮ್ಮ ಮೈಸೂರು ಪಾಕ್ನಂತೆಯೇ ಕಾಣುವ ಧೋಕ್ಲಾವನ್ನು ಗುಜರಾತ್ನಲ್ಲಿ ಸ್ನ್ಯಾಕ್ಸ್ ರೀತಿಯಲ್ಲಿ ತಿನ್ನಲಾಗುತ್ತದೆ.
ಹಣ್ಣಿನ ಸಲಾಡ್ (Fruit Salad)
ವಿಧ ವಿಧದ ಹಣ್ಣುಗಳನ್ನು ಹಾಕಿ ಮಾಡುವ ಫ್ರೂಟ್ ಸಲಾಡ್ ಪ್ರಧಾನಿ ಮೋದಿಗೆ ತುಂಬಾ ಇಷ್ಟವಾಗುತ್ತದೆ. ಹೆಚ್ಚು ಸರಳವಾದ ಆಹಾರ ಪದ್ಧತಿಯನ್ನೇ ಮೋದಿಯವರು ಅನುಸರಿಸುತ್ತಾರೆ. ಹಲವಾರು ಹಣ್ಣುಗಳನ್ನು ಕತ್ತರಿಸಿ ಹಾಕಿ ಅದಕ್ಕೆ ಚಾಟ್ ಮಸಾಲೆ ಸೇರಿಸಿಕೊಂಡು ಮೋದಿ ಅವರು ಸೇವಿಸುತ್ತಾರಂತೆ.
ಶ್ರೀಖಂಡ (Srikhand)
ಗುಜರಾತ್ನ ಪ್ರಸಿದ್ಧ ಸಿಹಿ ಖಾದ್ಯಗಳಲ್ಲಿ ಶ್ರೀಖಂಡ ಹೆಚ್ಚಿನವರಿಗೆ ಇಷ್ಟವಾಗುತ್ತದೆ. ಮೊಸರಿನಿಂದಲೇ ತಯಾರಿಸುವ ಈ ಖಾದ್ಯವನ್ನು ಪ್ರಧಾನಿ ಮೋದಿ ಅವರು ಖುಷಿಯಿಂದ ತಿನ್ನುತ್ತಾರೆ. ಕೆಲವೊಮ್ಮೆ ಅದಕ್ಕೆ ವಿವಿಧ ಹಣ್ಣಗಳನ್ನೂ ಸೇರಿಸಿಕೊಂಡು ತಿನ್ನುವ ಅಭ್ಯಾಸ ಅವರಿಗಿದೆ.
ಸೆವ್ ತಮೆಟಾ (Sev Tameta)
ಟೊಮೆಟೊ ಬಳಸಿಕೊಂಡು ಮಾಡುವ ಈ ಕರಿ ಗುಜರಾತ್ನಲ್ಲಿ ಹೆಚ್ಚು ಫೇಮಸ್ ಆಗಿರುವಂತಹ ಖಾದ್ಯ. ಇದೂ ಕೂಡ ಮೋದಿ ಅವರ ಇಷ್ಟದ ಖಾದ್ಯಗಳಲ್ಲಿ ಒಂದಾಗಿದೆ.