ನ್ಯೂಸ್ ನಾಟೌಟ್: ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ದೇಶದ ಅತ್ಯಂತ ಕಿರಿಯ ಮೇಯರ್ ಎಂದು ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ಕಚೇರಿಯಲ್ಲಿ ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದಿರುವ ಫೋಟೋ ವೈರಲ್ ಆಗಿದೆ.
ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ತಮ್ಮ ಒಂದು ತಿಂಗಳ ಮಗು (Baby)ವಿನೊಂದಿಗೆ ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರ್ಯ ತಮ್ಮ ಚೇರ್ನಲ್ಲಿ ಕುಳಿತುಕೊಂಡು, ಒಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಫೈಲ್ ಪರಿಶೀಲಿಸುತ್ತಿರುವುದು ಕಾಣಿಸುತ್ತದೆ. ಆಗಸ್ಟ್ 10ರಂದು ಆರ್ಯ ರಾಜೇಂದ್ರನ್ ಮತ್ತು ಬಲುಸ್ಸೆರಿಯ ಶಾಸಕ ಸಚಿನ್ ದೇವ್ ಅವರು ಹೆಣ್ಣು ಮಗುವನ್ನು ಸ್ವಾಗತಿಸಿದರು.
ತಿರುವನಂತಪುರಂನ ಎಸ್ಎಟಿ ಆಸ್ಪತ್ರೆಯಲ್ಲಿ ಆರ್ಯ ತಮ್ಮ ಮಗಳಿಗೆ ಜನ್ಮ (Birth) ನೀಡಿದ್ದಾರೆ. ದಂಪತಿಗಳು ತಮ್ಮ ನವಜಾತ ಮಗಳಿಗೆ ದುವಾ ದೇವ್ ಎಂದು ಹೆಸರಿಟ್ಟಿದ್ದಾರೆ.
ಇವರ ಪತಿ ಆರ್ಯ ರಾಜೇಂದ್ರನ್, ಸೆಪ್ಟೆಂಬರ್ 2022ರಲ್ಲಿ ಕೇರಳ ಅಸೆಂಬ್ಲಿಯ ಕಿರಿಯ ಶಾಸಕ ಸಚಿನ್ ದೇವ್ ಅವರೊಂದಿಗೆ ವಿವಾಹವಾದರು. ಕಳೆದ ತಿಂಗಳು ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.
ಆರ್ಯ ಮತ್ತು ಕೆ.ಎಂ ಸಚಿಂದೇವ್ ಅವರು ಸೆಪ್ಟೆಂಬರ್ 4, 2022ರಂದು ವಿವಾಹವಾದರು. ಈ ಕಾರ್ಯಕ್ರಮವು ತಿರುವನಂತಪುರಂನ ಎಕೆಜಿ ಹಾಲ್ನಲ್ಲಿ ನಡೆಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್, ಸಚಿವರಾದ ಮೊಹಮ್ಮದ್ ರಿಯಾಸ್ ಮತ್ತು ವಿ ಶಿವನ್ಕುಟ್ಟಿ ಸೇರಿದಂತೆ ಹಲವಾರು ಪ್ರಭಾವಿ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆರ್ಯ ಅವರು ದೇಶದ ಅತ್ಯಂತ ಕಿರಿಯ ಮೇಯರ್ ಆಗಿದ್ದರೆ, ಸಚಿನ್ ದೇವ್ ಅವರು 15 ನೇ ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಅವರು ಎಸ್ಎಫ್ಐನಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಮೊದಲ ಬಾರಿಗೆ ಭೇಟಿಯಾದರು. ಪರಸ್ಪರ ಸ್ನೇಹ ಪ್ರೀತಿಗೆ ಪರಿವರ್ತನೆಯಾದ ನಂತರ ಮದುವೆಯಾಗಲು ನಿರ್ಧರಿಸಿದರು ಎನ್ನಲಾಗಿದೆ. ಈಗ ಮಗು ಹಿಡಿದುಕೊಂಡು ಕೆಲಸ ಮಾಡುತ್ತಿರುವ ಫೋಟೋ ಎಲ್ಲಡೆ ವೈರಲ್ ಆಗಿದೆ.