ನ್ಯೂಸ್ ನಾಟೌಟ್ : ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ , ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಎಂ.ಬಿ. ಫೌಂಡೇಶನ್ ಸುಳ್ಯ ಮತ್ತು ಲಯನ್ಸ್ ಕ್ಲಬ್ ಸುಳ್ಯ ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡು ವಿಶೇಷ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದರು.
ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಾರಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಶಿಖರೋಪನ್ಯಾಸವನ್ನುಫಾರ್ಮೆಡ್ ಗ್ರೂಪ್ ಆಫ್ ಕಂಪೆನಿ ಬೆಂಗಳೂರು ಇಲ್ಲಿಯ ಹಿರಿಯ ಉಪಾಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಮಾಡಿದರು. ಎಂ.ಬಿ.ಫೌಂಡೇಶನ್ ಹಾಗೂ ಸಾಂದೀಪ್ ವಿಶೇಷ ಮಕ್ಕಳ ಶಾಲೆ ಅಧ್ಯಕ್ಷರಾದ ಎಂ.ಬಿ. ಸದಾಶಿವ ಅವರು ಸಭಾದ್ಯಕ್ಷತೆ ವಹಿಸಿದ್ದರು.
ಸುಳ್ಯ ಶಿಕ್ಷಣಾಧಿಕಾರಿ ಶ್ರೀ ರಮೇಶ್ ಬಿ. ,ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿ , ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ , ಸುಳ್ಯ ಸಿಡಿಪಿಓ ಶ್ರೀಮತಿ ಶೈಲಜಾ , ಜಿಲ್ಲಾ ಲಯನ್ಸ್ ಸಂಯೋಜಕ ಸಂಜೀವ ಕತ್ಲಡ್ಕ , ಜೀಲ್ಲಾ ಲಯನ್ಸ್ ಸಂಯೋಜಕರಾದ ದೇವಿ ಪ್ರಸಾದ್ ಕುದ್ಪಾಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭ ಸಾಂದೀಪ್ ವಿಶೇಷ ಶಾಲೆ ಸಂಚಾಲಕಿ ಶ್ರೀಮತಿ ಹರಿಣಿ ಸದಾಶಿವ,ರೇಷ್ಮಾ ಮಾರ್ಟಿನ್ , ಸಾಂದೀಪ್ ಶಾಲೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ಡ್ಯಾನ್ಸ್, ಹಾಡುಗಳ ಮೂಲಕ ನೆರದವರನ್ನು ಮನರಂಜಿಸಿದರು.ಇದೇ ವೇಳೆ ವಿಶೇಷ ಚೇತನ ಶಾಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇
https://www.facebook.com/NewsNotOut2023/videos/746971337194551/