ನ್ಯೂಸ್ ನಾಟೌಟ್ : ಕರಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ಶುಕ್ರವಾರ ( ಸೆ .1) ದಂದು ನಾಮಪತ್ರ ಸಲ್ಲಿಸಿದರು.
ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಮತ್ತು ಕರಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಜೆ.ಶರಣ್ ಕುಮಾರ್ ನೇತತ್ವದಲ್ಲಿ ಚುನಾವಣಾಧಿಕಾರಿ ಸಂದೀಪ್, ಬ್ಯಾಂಕ್ ಸೆಕ್ರೆಟರಿ ಎನ್.ಫ್ಹೀ.ಗಂಗಾಧರ ಅಭ್ಯರ್ಥಿಗಳಿಂದ ನಾಮ ಪತ್ರ ಪರಿಶೀಲಿಸಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಗದೀಶ ಕುದಪಾಜೆ, ಸುಬ್ರಹ್ಮಣ್ಯ ಕಟ್ಟಕೋಡಿ, ದೇವರಾಜ ಬೇಕಲ್, ರೆಲ್ಸನ್ ಎಂ.ಎಂ, ಹಕ್ಕಿಮ್ ಎ. ಯು, ಪುರುಷೋತ್ತಮ ಬಿ ಕೆ, ವಿನೋದ್ ಪಿ.ಟಿ,ಶ್ರೀನಿವಾಸ ಟಿ.ಆರ್, ಎ.ಪಿ. ಜೀವನ್ ಕುಮಾರ್, ಸರಸ್ವತಿ ಕೆ.ಪಿ , ಧನ್ಯ ಶ್ರೀಕುಮಾರ್, ಸೋಣಂಗೇರಿ ಜಯಂತ , ಶ್ರೀನಿವಾಸ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.