ನ್ಯೂಸ್ ನಾಟೌಟ್: ಒಂದು ವರ್ಷದ ಹಿಂದೆ ಮಹಿಳೆ ಆತನೊಮದಿಗೆ ವಿವಾಹವಾಗಿದ್ದರು. ಆದರೆ ಮಹಿಳೆ ಬಿಹಾರ ಮೂಲದ ಆಕಾಶ್ ಶಾ ಎನ್ನುವರನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ಮಹಿಳೆಯ ಗಂಡನಿಗೆ ಮದುವೆಯ ಸಂದರ್ಭ ತಿಳಿದಿರಲಿಲ್ಲ. ಮಹಿಳೆ ವಿವಾಹದ ಬಳಿಕವೂ ಪ್ರಿಯಕರ ಆಕಾಶ್ ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ (ಸೆ.22 ರಂದು) ಆಕಾಶ್ ಬಿಹಾರದ ಗೋಪಾಲಗಂಜ್ ನಿಂದ ಉತ್ತರ ಪ್ರದೇಶದಲ್ಲಿರುವ ಮಹಿಳೆಯ ಪತಿಯ ಮನೆ ಬಳಿ ಭೇಟಿ ಆಗಲೆಂದು ಬಂದಿದ್ದಾನೆ. ಭೇಟಿಯ ವೇಳೆ ಸ್ಥಳೀಯರು ನೋಡಿದ್ದು, ಆಕಾಶ್ ನನ್ನು ಅಲ್ಲೇ ಹಿಡಿದು ಥಳಿಸಿದ್ದಾರೆ.
ಮಹಿಳೆಯೊಂದಿಗೆ ತಾನು ಎರಡು ವರ್ಷದಿಂದ ಸಂಬಂಧದಲ್ಲಿದ್ದೇನೆ. ಆಕೆಯ ಮದುವೆಯ ಬಳಿಕವೂ ಆಕೆಯನ್ನು ನಾನು ಮರೆಯಲು ಆಗುತ್ತಿಲ್ಲ. ಹಾಗಾಗಿ ನಾನು ಭೇಟಿಗೆಂದು ಬಂದೆ ಎಂದು ಆಕಾಶ್ ಈ ವೇಳೆ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ಇನ್ನೇನು ಆಕಾಶ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ ಅಂದುಕೊಂಡಿದ್ದ ಎಲ್ಲರಿಗೂ ಮಹಿಳೆಯ ಪತಿಯ ಪ್ರತಿಕ್ರಿಯೆ ನೋಡಿ ಶಾಕ್ ಆಗಿದೆ.
ಪ್ರಿಯಕರನೊಂದಿಗೆ ಹೋಗಲು ಬಿಡುವಂತೆ ಪತ್ನಿ ತನ್ನ ಪತಿಗೆ ಮನವಿ ಮಾಡಿದ್ದು, ಇದಕ್ಕೆ ಪತಿ ಒಪ್ಪಿದ್ದಾನೆ. ಆ ಬಳಿಕ ಇಬ್ಬರನ್ನು ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಎರಡೂ ಕುಟುಂಬಗಳ ಒಪ್ಪಿಗೆ ಪಡೆದ ನಂತರ ವ್ಯಕ್ತಿ, ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ದೇವಸ್ಥಾನಕ್ಕೆ ಕರೆದೊಯ್ದು ಮದುವೆ ಮಾಡಿಸಿದ್ದಾರೆ. ಆ ಬಳಿಕ ಪ್ರೇಮಿ ಬಂದಿದ್ದ ಮೋಟಾರ್ ಸೈಕಲ್ ನಲ್ಲಿಯೇ ಇಬ್ಬರನ್ನೂ ಕಳುಹಿಸಿದ್ದಾರೆ. ಇದು ಸಿನಿಮೀಯ ರೀತಿಯಲ್ಲಿ ಘಟನೆ ನಡೆದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.