ನ್ಯೂಸ್ ನಾಟೌಟ್ : ಸೆ. 6 ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ.ಈ ವಿಶೇಷ ದಿನದಂದೇ ಪ್ರಸಿದ್ಧ ಗುರುವಾಯೂರು ದೇವರಿಗೆ ಚಿನ್ನದ ಕಿರೀಟವನ್ನು ಧರಿಸಲಾಗುತ್ತದೆ. ಕೇರಳದ ಚಿನ್ನದ ಉದ್ಯಮಿರೊಬ್ಬರು ಕಿರೀಟವನ್ನು ಉಡುಗೊರೆ ನೀಡಿದ್ದಾರೆ..!
ಸೆ. 6 ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಇದೆ. ಅದೇ ದಿನ ಚಿನ್ನದ ಕಿರೀಟವನ್ನು ಗುರುವಾಯೂರಪ್ಪನಿಗೆ ಅರ್ಪಿಸಲಾಗುತ್ತದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುವ ಕೇರಳದ ತ್ರಿಸ್ಸೂರು ಜಿಲ್ಲೆಯ ಕೈನೂರು ತರವಾಡು ಮೂಲದ ಕೆ.ವಿ. ರಾಜೇಶ್ ಆಚಾರ್ಯ ಅವರು ಈ ಉಡುಗೊರೆ ನೀಡುತ್ತಿದ್ದಾರೆ.ಚಿನ್ನದ ಕಿರೀಟ 38 ಸವರನ್ ತೂಕವಿರಲಿದೆ.
ಇದೊಂದು ಸ್ಮರಣೀಯವಾಗಲಿದೆ.ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಗುರುವಾಯೂರಪ್ಪನವರಿಗೆ 32 ಸವರನ್ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದರು. ಇದರ ಬೆನ್ನಲ್ಲೇ ಇದೀಗ ಕೇರಳದ ಚಿನ್ನದ ಉದ್ಯಮಿರೊಬ್ಬರು ಕಿರೀಟವನ್ನು ಉಡುಗೊರೆ ನೀಡಿದ್ದು,ಸಂಭ್ರಮದ ಕ್ಷಣವಾಗಲಿದೆ.
ಜನ್ಮಾಷ್ಟಮಿ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತಿದ್ದು, ಮತ್ತು ನಂತರ ದೇವಸ್ವಂನ ರಿಜಿಸ್ಟರ್ನಲ್ಲಿ ದಾಖಲಿಸಲಾಗುತ್ತದೆ ಮತ್ತು ಸುರಕ್ಷಿತ ಲಾಕರ್ಗೆ ವರ್ಗಾಯಿಸಲಾಗುತ್ತದೆ.ಚಥಯಂ ದಿನದಂದು ಗುರುವಾಯೂರಪ್ಪನವರಿಗೆ ಸುಮಾರು ನೂರು ಸವರನ್ ತೂಕದ ಚಿನ್ನದ ಕಿಂಡಿಯನ್ನು ಕಾಣಿಕೆಯಾಗಿ ಸ್ವೀಕರಿಸಲಾಯಿತು. ಉದ್ಯಮಿ ಡಾ. ರವಿ ಪಿಳ್ಳೈ ಅವರು 2021ರ ಸೆಪ್ಟೆಂಬರ್ನಲ್ಲಿ 725 ಗ್ರಾಂ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.