ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೂ ಬರುವ ಮುನ್ನ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು.ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ಮೊಟ್ಟ ಮೊದಲನೆಯದಾಗಿ ಜಾರಿಗೆ ತಂದಿದ್ದೇ ಶಕ್ತಿ ಯೋಜನೆ (ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ).ಇದೀಗ ಈ ಸಂಭ್ರಮವು100 ದಿನಗಳನ್ನು ಪೂರೈಸಿದೆ.
ಶಕ್ತಿ ಯೋಜನೆ ಬಂದಾಗಿನಿಂದ ಮಹಿಳೆಯರು ಖುಷಿಯಲ್ಲಿ ತೇಲಾಡಿದ್ರು.ಫ್ರೀಯಾಗಿ ಎಲ್ಲಿ ಬೇಕಂದರಲ್ಲಿ ಪ್ರಯಾಣಿಸಬಹುದು ಎಂದು ತಮಗಿಷ್ಟವಾದ ಸ್ಥಳಗಳಿಗೆ ಭೇಟಿ ನೀಡಿ ಸಂಭ್ರಮಿಸಿದ್ರು.ಇನ್ನೂ ಕೆಲವರು ಇದನ್ನು ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ರು.ಅದೇನೇ ಇರಲಿ ಇದೀಗ ಈ ಯೋಜನೆ 100 ದಿನಗಳನ್ನು ಪೂರೈಸಿ ಹೊಸ ಹೆಜ್ಜೆಯನ್ನಿರಿಸಿದೆ.
ಅಂದ ಹಾಗೆ 100 ದಿನದಲ್ಲಿ 62,55,39,727 ಕೋಟಿ ಮಹಿಳೆಯರು ಬಸ್ನಲ್ಲಿ ಪ್ರಯಾಣ ಮಾಡಿದ್ದಾರೆ..!. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 1,456 ಕೋಟಿ ರೂ.ಗೆ ತಲುಪಿದೆ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಗ್ಯಾರಂಟಿ ಯೋಜನೆಯಾಗಿ ಜೂನ್ 11ರಂದು ‘ಶಕ್ತಿ ಯೋಜನೆ’ ಜಾರಿಗೆ ತರಲಾಗಿತ್ತು. ಈಗ ಶಕ್ತಿ ಯೋಜನೆ 100 ದಿನಗಳ ಸಂಭ್ರಮವನ್ನು ಆಚರಣೆ ಮಾಡುತ್ತಿದೆ. ಮೊದಲೆರಡು ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಆಗಸ್ಟ್ನಲ್ಲಿ ಕೊಂಚ ಕಡಿಮೆಯಾಗಿದೆ.
ಹೆಚ್ಚಿನ ಮಹಿಳೆಯರಿಗೆ ಈ ಯೋಜನೆ ವರದಾನವಾಗಿ ಪರಿಣಮಿಸಿದೆ.ಡೈಲಿ ಕೂಲಿ ಕೆಲಸಕ್ಕೆ ಹೋಗುವ ಮಹಿಳೆಯಿರಿಗೆ ಈ ಯೋಜನೆಯಿಂದ ಶಕ್ತಿ ಬಂದಂತಾಗಿದೆ.ಇನ್ನು ವಿದ್ಯಾರ್ಥಿನಿಯರು ಕೂಡ ಈ ಯೋಜನೆಯಿಂದ ತುಂಬಾ ಲಾಭದಾಯಕವಾಗಿದೆ.ಆದರೆ ಇನ್ನೂ ಕೆಲವರು ಇದನ್ನು ದುರುಪಯೋಗ ಪಡಿಸಿಕೊಂಡಿದ್ದು ಇದೆ.ಕೆಲವರು ಈ ಯೋಜನೆ ಬೇಡವಾಗಿತ್ತು.ಇದರಿಂದ ಸರ್ಕಾರಕ್ಕೆ ತುಂಬಾ ನಷ್ಟ ಎಂಬ ಮಾತುಗಳನ್ನು ಆಡಿದ್ದರು.ಆದರೂ ಕಾಂಗ್ರೆಸ್ ಸರ್ಕಾರ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಈ ಯೋಜನೆಯನ್ನು ಕಂಟಿನ್ಯೂ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 11 ರಂದು ಶಕ್ತಿ ಯೋಜನೆಗೆ ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿದ್ದರು. ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ,ಎನ್ಡಬ್ಲ್ಯೂಕೆಆರ್ಟಿಸಿಯ ಎಲ್ಲ ವೇಗದೂತ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿತ್ತು.ಜೂನ್ 11 ರಿಂದ ಸೆಪ್ಟೆಂಬರ್ 19 ರವರೆಗೆ ಓಡಾಟ ನಡೆಸಿದ ಮಹಿಳೆಯರ ಸಂಖ್ಯೆ62,55,39,727,ಮಹಿಳಾ ಪ್ರಯಾಣಿಕರ ಟಿಕೆಟ್ ದರ- 1456,09,64,867 ಒಳಗೊಂಡಿದೆ.