ನ್ಯೂಸ್ ನಾಟೌಟ್ : ಕರಿಕೆ ವಿವಿಧೋದ್ದೇಶ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಕರಿಕೆ ಚುನಾವಣಾಧಿಕಾರಿ ಸಂದೀಪ್, ಬ್ಯಾಂಕ್ ಸೆಕ್ರೆಟರಿ ಎನ್ . ಫ್ಹೀ ಗಂಗಾಧರ, ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಿದರು. ಈ ಸಂದರ್ಭ ಬಿ.ಜೆ.ಪಿ ಶಕ್ತಿ ಕೇಂದ್ರದ ಅಧ್ಯಕ್ಷ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಹೊಸಮನೆ ಚಂಗಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕವಿತಾ ಪ್ರಭಾಕರ್ , ಗ್ರಾಮ ಪಂಚಾಯತ್ ಸದಸ್ಯ ಕೆ.ಎ. ನಾರಾಯಣ, ಪಿ.ಟಿ ಐಸಾಕ್ , ಬೂತ್ ಅಧ್ಯಕ್ಷ ಪಾಂಡಿ , ಎಂ. ನಂಜುಂಡ , ಎಂ.ಟಿ. ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.