ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯ ಕರಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಕಮಲ ಪಾಳಯವನ್ನು ಕ್ಲೀನ್ ಸ್ವೀಪ್ ಮಾಡಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 12ರಲ್ಲಿ 12 ಸೀಟು ಗೆದ್ದು ಭರ್ಜರಿ ಸಾಧನೆ ಮಾಡಿದ್ದಾರೆ.
ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಮತ್ತು ಕರಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಜೆ.ಶರಣ್ ಕುಮಾರ್ ನೇತೃತ್ವದಲ್ಲಿ ಚುನಾವಣಾಧಿಕಾರಿ ಸಂದೀಪ್ ಮತ್ತು ಕಾರ್ಯನಿರ್ವಹಣಾಧಿಕಾರಿ ಎಂ. ಸಿ ಗಂಗಾಧರ್ ವೀಕ್ಷಣೆಯಲ್ಲಿ ಚುನಾವಣೆ ನಡೆದಿತ್ತು.
ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆದಿತ್ತು. ಕರಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಾವಿರಾರು ಸದಸ್ಯರು ಮತದಾನ ಮಾಡಿದ್ದರು. ಬಳಿಕ ಮಡಿಕೇರಿ ಚುನಾವಣಾಧಿಕಾರಿ ಸಂದೀಪ್ ಮತ ಎಣಿಕೆ ಮಾಡಿ ಫಲಿತಾಂಶ ಘೋಷಿಸಿದರು. ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ನೇತೃತ್ವದ ಅಭ್ಯರ್ಥಿಗಳಾದ ಜಗದೀಶ ಕುದಪಾಜೆ, ಸುಬ್ರಹ್ಮಣ್ಯ ಕಟ್ಟಕೋಡಿ, ದೇವರಾಜ ಬೇಕಲ್, ರೆಲ್ಸನ್ ಎಂ.ಎಂ, ಹಕ್ಕೀಂ ಎ. ಯು, ಪುರುಷೋತ್ತಮ ಬಿ ಕೆ, ವಿನೋದ್ ಪಿ.ಟಿ, ಶ್ರೀನಿವಾಸ ಟಿ.ಆರ್, ಎ.ಪಿ. ಜೀವನ್ ಕುಮಾರ್, ಸರಸ್ವತಿ ಕೆ.ಪಿ, ಧನ್ಯ ಶ್ರೀಕುಮಾರ್, ಜಯಂತ, ಸೋಣಂಗೇರಿ ಗೆಲುವು ಸಾಧಿಸಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತು ಸದಸ್ಯರು ಬ್ಯಾಂಕ್ ಸೆಕ್ರೆಟರಿ ಎನ್.ಫೀ.ಗಂಗಾಧರ, ಮಡಿಕೇರಿ ವ್ಯಾಪ್ತಿ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಸಿಬ್ಬಂದಿ, ಭಾಗಮಂಡಲ – ಕರಿಕೆ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.