ನ್ಯೂಸ್ ನಾಟೌಟ್ : ಪಂಜಾಬ್ನ ಕಪುರ್ತಲಾ ಜಿಲ್ಲೆಯ ಕಬಡ್ಡಿ ಆಟಗಾರನನ್ನು ಯಾರೋ ದುಷ್ಕರ್ಮಿಗಳು ಆತನ ಜೀವನವನ್ನೇ ಕತ್ತಲಾಗಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ.
ಕಬಡ್ಡಿ ಆಟಗಾರನ ದೇಹ ಛಿದ್ರ ಛಿದ್ರವಾದ ಸ್ಥಿತಿಯಲ್ಲಿ ಕತ್ತರಿದ್ದಾರೆ ಎಂದು ವರದಿಯೊಂದು ತಿಳಿಸಿದೆ.ಮಾತ್ರವಲ್ಲ ಅವರ ಮನೆಯ ಮುಂದೆಯೇ ಬೀಸಾಡಿ ಹೋಗಿದ್ದರಿಂದ ಇದೀಗ ಈ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.ಇದನ್ನು ಹಲವು ಮಂದಿ ಖಂಡಿಸಿದ್ದಾರೆ. ನಿಜಕ್ಕೂ ಇದೊಂದು ಆಘಾತಕಾರಿ ವಿಷಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆಯನ್ನು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಕಠಿಣವಾದ ಪದಗಳಿಂದ ಖಂಡಿಸಿ, ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಪಂಜಾಬ್ನಲ್ಲಿಈಗ ಜಂಗಲ್ ರಾಜ್ಯದ ಆಡಳಿತ ಜಾರಿಯಲ್ಲಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವತ್ ಮನ್ ವಿರುದ್ದ ವಾಕ್ಪ್ರಹಾರ ನಡೆಸಿದ್ದಾರೆ. ಈ ಘಟನೆಯ ಸಂಬಂಧ, ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾದ ಮುಖ್ಯಮಂತ್ರಿ ಭಗವತ್ ಮನ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಪುರ್ತಲಾ ಜಿಲ್ಲೆಯ ಯುವ ಕಬಡ್ಡಿ ಆಟಗಾರ ಹರ್ದೀಪ್ ಸಿಂಗ್ ಅವರ ಈ ದುರಂತದ ಸುದ್ದಿ ಅರಗಿಸಿಕೊಳ್ಳಲಾಗದ್ದು,ಇನ್ನೂ ಬಾಳಿ ಬದುಕಬೇಕಾದ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಿಂಚಬೇಕಾದ ಸಂದರ್ಭದಲ್ಲಿ ಈ ರೀತಿಯ ದುರ್ಘಟನೆ ನಡೆಯಿತೆಂದರೆ ಮನೆಯವರಾದರೂ ಹೇಗೆ ಸಹಿಸಿಕೊಂಡಾರು ಎಂದು ಹಲವು ಮಂದಿ ಕಣ್ಣೀರಾಗಿದ್ದಾರೆ. ಈ ರೀತಿ ಕೃತ್ಯ ಮಾಡಲು ಜನರು ಎಷ್ಟು ನಿರ್ಭಯವಾಗಿದ್ದಾರೆ ಎನ್ನುವುದನ್ನು ಈ ಘಟನೆ ತೋರಿಸುತ್ತದೆ.ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದು ಮಾತ್ರವಲ್ಲದೇ ಮನೆಯ ಬಾಗಿಲು ಬಡಿದು ಎಚ್ಚರಿಕೆ ನೀಡಿದ್ದಾರೆ ಎಂದರೆ ಅವರಿಗೂ ಅಷ್ಟು ಧೈರ್ಯ ಹೇಗೆ ಬಂತು ಎಂದು ಜನ ಪ್ರಶ್ನಿಸಿದ್ದಾರೆ.
ಪಂಜಾಬ್ ಈಗ ಸಂಪೂರ್ಣ ಜಂಗಲ್ ರಾಜ್ ಆಗಿ ಬದಲಾಗಿದೆ. ಪ್ರತಿನಿತ್ಯ ಇಂತಹ ಕೃತ್ಯಗಳು, ಸುಲಿಗೆ, ಸರಗಳ್ಳತನ ಹಾಗೂ ಕಳ್ಳತನ ಇಲ್ಲಿ ಆಗುತ್ತಲೇ ಇದೆ ಎಂದು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ‘ಎಕ್ಸ್’ ಮಾಡಿದ್ದಾರೆ.ಇನ್ನು ಮುಂದುವರೆದು, ಈ ಪರಿಸ್ಥಿತಿಯನ್ನು ನಿಭಾಯಿಸಲು ಭಗವತ್ ಮನ್ ಸಂಪೂರ್ಣ ವಿಫಲವಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಹೀಗಾಗಿ ಯಾವುದೇ ತಡ ಮಾಡದೇ ಮನ್ ನೈತಿಕ ಹೊಣೆಹೊತ್ತು ತಮ್ಮ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಸುಖ್ಬೀರ್ ಸಿಂಗ್ ಆಗ್ರಹಿಸಿದ್ದಾರೆ.
ಇನ್ನು ಸ್ಥಳೀಯ ವರದಿಗಳ ಪ್ರಕಾರ ಯುವ ಕಬಡ್ಡಿ ಆಟಗಾರನ ದುರಂತ ಕೃತ್ಯಕ್ಕೆ ಸಂಬಂಧಿಸಿ, ಇದುವರೆಗೂ ಯಾವುದೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿಲ್ಲ ಎಂದು ವರದಿಯಾಗಿದೆ. ಸೆಪ್ಟೆಂಬರ್ 19ರ ರಾತ್ರಿ ಕಬಡ್ಡಿ ಆಟಗಾರನ ಈ ಕೃತ್ಯ ಮಾಡಿ ಆತನ ಜೀವನದ ಕಥೆಯನ್ನೇ ಮುಗಿಸಿದ್ದಾರೆ. ಕೆಲವು ವರದಿಗಳ ಪ್ರಕಾರ, ಕಬಡ್ಡಿ ಆಟಗಾರ ಹರ್ದೀಪ್ ಸಿಂಗ್ ಹಾಗೂ ಅದೇ ಏರಿಯಾದಲ್ಲಿ ವಾಸವಾಗಿದ್ದ ಹರ್ಪ್ರೀತ್ ಸಿಂಗ್ ನಡುವೆ ಸಾಕಷ್ಟು ಸಮಯದಿಂದ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಹೀಗಾಗಿ ಈ ಹಿಂದೆಯೇ ಹರ್ದೀಪ್ ಹಾಗೂ ಹರ್ಪ್ರೀತ್ ಅವರ ಮೇಲೆ ದಿಲ್ವಾನ್ ಪೊಲೀಸ್ ಠಾಣೆಯಲ್ಲಿ ಕೇಸ್ಗಳು ದಾಖಲಾಗಿದ್ದವು ಎಂದು ವರದಿಯಾಗಿದೆ.ಒಟ್ಟಿನಲ್ಲಿ ಈ ಪ್ರಕರಣ ಸುಖಾಂತ್ಯ ಕಾಣಬೇಕಾದರೆ ನೈಜ ಆರೋಪಿಗಳ ಬಂಧನವಾಗಬೇಕಿದೆ.