ನ್ಯೂಸ್ ನಾಟೌಟ್: ಬೆಳ್ತಂಗಡಿಯಲ್ಲಿ ಕಬಡ್ಡಿ ಆಟಗಾರನೊಬ್ಬ ಜೀವವನ್ನೇ ಕಳೆದುಕೊಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲೋನ್ ಆಪ್ ನಿಂದ ಸಾಲ ಪಡೆದುಕೊಂಡ ಯುವಕನಿಗೆ ನಿರಂತರ ಬೆದ* ರಿಕೆ ಕರೆಯಿಂದಾಗಿ ಜೀವವನ್ನು ಕಳೆದುಕೊಳ್ಳುವ ನಿರ್ಧಾರ ಮಾಡಿದ ಅನ್ನುವ ಆಘಾತಕಾರಿ ವಿಚಾರ ಇದೀಗ ಹೊರ ಬಿದ್ದಿದೆ.
ಸ್ವರಾಜ್ ಎಂಬುವವರು ಆನ್ಲೈನ್ ಲೋನ್ ಆ್ಯಪ್ ಕಂಪನಿಯಿಂದ ಲೋನ್ ಪಡೆದಿದ್ದಾರೆ. ಹಂತಹಂತವಾಗಿ ಕಂಪನಿ ಹೆಚ್ಚುವರಿ ಹಣ ವಾಪಸ್ ಪಡೆಯಲು ಬೆದರಿಕೆಗಳನ್ನು ಹಾಕುತ್ತಿತ್ತು ಎನ್ನಲಾಗಿದೆ. ಸ್ವರಾಜ್ ವಾಟ್ಸಪ್ ನಲ್ಲಿ ಅಕ್ಕನ ಮಗಳ ಡಿಪಿ ಫೋಟೋ ಹಾಕಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಆಪ್ ಕಂಪನಿ ವಾಟ್ಸಪ್ ನಂಬರಿನಿಂದ ಸ್ನೇಹಿತರಿಗೆ ‘ಮಗು ಮಾರಾಟಕ್ಕಿದೆ’ (Baby for sale) ಎಂದು ಬರೆದು ಸ್ವರಾಜ್ ಸ್ನೇಹಿತರಿಗೆ ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಚಾರವನ್ನು ಸ್ವರಾಜ್ಗೆ ಸ್ನೇಹಿತರು ಮಾಹಿತಿ ನೀಡಿದ್ದರು. ಸ್ವರಾಜ್ ತನ್ನ ಬ್ಯಾಂಕ್ ಖಾತೆಯಿಂದ 30,000 ಸಾವಿರ ಹಣ ಡ್ರಾ ಮಾಡಿ ಆಪ್ ಕಂಪನಿಗೆ ಕಟ್ಟಿದ್ದು, ಹೆಚ್ಚುವರಿ ಹಣ ನೀಡಲು ಆ್ಯಪ್ ಕಂಪನಿ ಬೆದರಿಕೆ ಹಾಕುತ್ತಿತ್ತು ಎಂಬ ಮಾಹಿತಿಯಿದೆ.
ಅದಲ್ಲದೆ ಡೆಡ್ ಲೈನ್ ಕೂಡ ನೀಡಿದ್ದು ಆಗಸ್ಟ್ 31 ರ ಮಧ್ಯಾಹ್ನ 2 ಗಂಟೆಗೆ ಡೆಡ್ ಲೈನ್ ಇದ್ದು, ಅಷ್ಟರೊಳಗೆ ಹಣ ಪಾವತಿಸಬೇಕು ಎಂದು ಕಂಪನಿ ಸಂದೇಶ ಕಳುಹಿಸಿತ್ತು ಎನ್ನಲಾಗಿದೆ. ಈ ಒತ್ತಡವನ್ನು ತಾಳಲಾರದೆ ಸ್ವರಾಜ್ ಆತ್ಮಹ* ತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಹೇಳಲಾಗಿದೆ. ಸದ್ಯ ಪ್ರಕರಣದ ಕುರಿತಂತೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.