ನ್ಯೂಸ್ ನಾಟೌಟ್ : ಚಂದ್ರಯಾನ 3 (Chandrayaan 3) ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದು ಇಸ್ರೋ ವಿಜ್ಞಾನಿಗಳು ಭಾರತದ ಕೀರ್ತಿ ಪತಾಕೆಯನ್ನು ಇಡೀ ವಿಶ್ವದಲ್ಲೇ ಹಾರಾಡಿಸುವಂತೆ ಮಾಡಿದ್ದಾರೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ವಿಜ್ಞಾನಿಗಳು ಮಾಡಿದ್ದಾರೆ. ಈ ಖುಷಿಯನ್ನು ನಾವೆಲ್ಲ ಸಂಭ್ರಮ ಪಡುತ್ತಿದ್ದಂತೆಯೇ ಇಲ್ಲೊಂದೆಡೆ ಮತ್ತೊಂದು ಆಶ್ಚರ್ಯಕರ ಸಂಗತಿಯೊಂದು ಬೆಳಕಿಗೆ ಬಂದಿದೆ.
ಪ್ರಜ್ಞಾನ್ ರೋವರ್ ಈಗಾಗಲೇ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಂಧಕದ ಜತೆಗೆ ಅಲ್ಯೂಮಿನಿಯಂ (AI), ಕ್ಯಾಲ್ಶಿಯಂ (Ca), ಐರನ್ (Fe), ಟೈಟಾನಿಯಂ (Ti), ಮ್ಯಾಂಗನೀಸ್ (Mn), ಸಿಲಿಕಾನ್ (Si) ಹಾಗೂ ಆಮ್ಲಜನಕದ (O) ಅಂಶಗಳನ್ನೂ ಪ್ರಜ್ಞಾನ್ ರೋವರ್ ಪತ್ತೆಹಚ್ಚಿರುವ ಬೆನ್ನಲ್ಲೇ ಜಮ್ಮು ಉದ್ಯಮಿಯೊಬ್ಬರು ಚಂದ್ರನ ಅಂಗಳದಲ್ಲಿ ಒಂದು ಎಕರೆ ಜಾಗ ಖರೀದಿಸಿದ್ದಾರೆ..!
ಭಾರತ ಚಂದ್ರಯಾನ 3 ಕೈಗೊಂಡ ಬೆನ್ನಲ್ಲೇ ಎಲ್ಲರ ಚಿತ್ತ ಚಂದ್ರನ ಅಂಗಳದತ್ತ ನೆಟ್ಟಿದೆ.ಪ್ರತಿ ಕ್ಷಣವೂ ಅಲ್ಲಿನ ಅಪ್ಡೇಟ್ಸ್ ಸಿಕ್ತಾ ಇದ್ದು ಜನ ಈ ಬಗ್ಗೆ ಉತ್ಸಕರಾಗಿದ್ದಾರೆ. ಜಮ್ಮುವಿನ ಉದ್ಯಮಿ ರೂಪೇಶ್ ಮಸೋನ್ (Rupesh Masson) ಎಂಬುವರು ಆನ್ಲೈನ್ ಮೂಲಕ ಚಂದ್ರನ ಅಂಗಳದಲ್ಲಿ ಒಂದು ಎಕರೆ ಜಾಗ ಖರೀದಿಸಿದ್ದಾರೆ. ಇದು ಎಲ್ಲರ ಅಚ್ಚರಿಗೂ ಕಾರಣವಾಗಿದೆ.
ಈ ವ್ಯಕ್ತಿ ಜಾಗ ಖರೀಸುತ್ತಿದ್ದಂತೆಯೇ ಸುದ್ದಿ ಎಲ್ಲೆಡೆ ಹಬ್ಬಿದೆ.ಮಾಧ್ಯಮ ಸೇರಿದಂತೆ ಯುಟ್ಯೂಬ್ ಚಾನೆಲ್ಗಳಿಗೆ ರೂಪೇಶ್ ಮಸೋನ್ ಮಾಹಿತಿ ನೀಡಿದ್ದು, ಆನ್ಲೈನ್ ಮೂಲಕ ಜಾಗ ಖರೀದಿಸಿದ್ದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. “ಆನ್ಲೈನ್ನಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ದಿ ಲೂನಾರ್ ರಿಜಿಸ್ಟ್ರಿ ಮೂಲಕ ಜಾಗ ಖರೀದಿಸಿದ್ದೇನೆ ಎಂದಿದ್ದಾರೆ. ನನಗಿದು ಭಾರಿ ಸಂತೋಷ ನೀಡಿದೆ ಎಂದು ಅವರು ತಿಳಿಸಿದ್ದಾರೆ.ಲಸುಸ್ ಫೆಸಿಲಿಟೀಸ್ ಎಂಬಲ್ಲಿ ಇವರು ಒಂದು ಎಕರೆ ಜಾಗ ಖರೀದಿಸಿದ್ದಾರಂತೆ,ಹಾಗಾದರೆ ಅವರು ನೀಡಿರುವ ಅಮೌಂಟ್ ಎಷ್ಟು? ಅನ್ನೋದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಜುಲೈ 14ರಂದು ಇಸ್ರೋ ಚಂದ್ರಯಾನ 3 ಮಿಷನ್ ಉಡಾವಣೆ ಮಾಡಿತ್ತು.ಭಾರತದ ಕೊಟ್ಯಂತರ ಜನ ಯಶಸ್ವಿಯಾಗಲೆಂದು ದೇವರ ಮೊರೆ ಹೋಗಿದ್ದರು. ಮಿಷನ್ನ ನೌಕೆಯು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ಲ್ಯಾಂಡ್ ಆಗಿದೆ. ಇದರೊಂದಿಗೆ ಜಗತ್ತಿನಲ್ಲೇ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಭಾರಿ ಹೆಸರು ಗಳಿಸಿದ್ದರು.