ನ್ಯೂಸ್ ನಾಟೌಟ್ : ದೇಶದ ಮೂರನೇ ಚಂದ್ರಯಾನವಾದ ಚಂದ್ರಯಾನ-3 (Chandrayaan-3) ರಾಕೆಟ್ ಉಡಾವಣೆಯು ರೋಚಕ ಕ್ಷಣವಾಗಿತ್ತು.ಇಡೀ ದೇಶವೇ ಕಾತುರದ ಕಣ್ಣುಗಳಿಂದ ಕಾಯುತ್ತಿದ್ದ ಜನ ಆ ಒಂದು ಕ್ಷಣಕ್ಕೆ ಮೈಮರೆತು ಹೋದರು.ಈ ವೇಳೆ ರಾಕೆಟ್ ಉಡಾವಣೆಯ ಸಂದರ್ಭ ಕೌಂಟ್ಡೌನ್ಗೆ (Countdown) ಧ್ವನಿ ನೀಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿ (Scientist) ವಲರ್ಮತಿ (Valarmathi) ಅವರು ಹೃದಯಾಘಾತದಿಂದ (Heart Attack) ದುರಂತ ಅಂತ್ಯ ಕಂಡಿದ್ದಾರೆ.
ಶ್ರೀಹರಿಕೋಟಾದಲ್ಲಿ (Sriharikota) ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಇವರು ಕೌಂಟ್ಡೌನ್ಗೆ (Countdown) ಧ್ವನಿ ನೀಡಿದ್ದರು.
ಚಂದ್ರಯಾನ-3 (Chandrayaan-3) ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಕೌಂಟ್ಡೌನ್ಗೆ ಇವರು ಧ್ವನಿ ನೀಡಿದ್ದು, ಇಸ್ರೋದಲ್ಲಿ ಅದು ಅವರ ಕೊನೆಯ ಧ್ವನಿಯಾಗಿತ್ತು.ಇವರ ಈ ಸುದ್ದಿ ಕೇಳಿ ಇಸ್ರೋದ ಮಾಜಿ ನಿರ್ದೇಶಕರಾದ ಡಾ.ಪಿ.ವಿ.ವೆಂಕಟಕೃಷ್ಣನ್ ಟ್ವಿಟ್ಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ.
ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್ಗಳ ಕೌಂಟ್ಡೌನ್ಗಳಿಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಇದು ಮೇಡಂ ಅವರ ಅಂತಿಮ ಕೌಂಟ್ಡೌನ್ ಘೋಷಣೆಯಾಗಿದ್ದು, ಅವರು ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.