ನ್ಯೂಸ್ ನಾಟೌಟ್ : ಟಿಕ್ಸ್ಟಾರ್ ಲೀನಾ ಮುಖರ್ಜಿ (Lina Mukherjee) ಗೆ ಸಂಕಷ್ಟ ಎದುರಾಗಿದೆ. ಇಸ್ಲಾಮಿಕ್ ರಾಷ್ಟ್ರವಾದ ಇಂಡೋನೇಷ್ಯಾ (Indonesia) ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಬಾಲಿಯಲ್ಲಿ 33 ವರ್ಷದ ಲೀನಾ ಮುಖರ್ಜಿ ಅವರು ಕಳೆದ ಮಾರ್ಚ್ನಲ್ಲಿ ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿ ಮಾಂಸ ಸೇವಿಸಿದ್ದಾರೆ. ಅಷ್ಟು ಮಾತ್ರವಲ್ಲ ಸಾಲದು ಎಂಬಂತೆ ವಿಡಿಯೋವನ್ನು ಮಾಡಿದ್ದಾರೆ.ವಿಡಿಯೋವೇನೋ ವೈರಲ್ ಆಯ್ತು.. ಅಷ್ಟರಲ್ಲೇ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾದ್ರು. ಅದರಲ್ಲೂ, ಇಸ್ಲಾಂನಲ್ಲಿ ಹಂದಿ ಮಾಂಸವು ನಿಷಿದ್ಧವಾಗಿರುವ ಕಾರಣ ಲೀನಾ ಮುಖರ್ಜಿ ವಿರುದ್ಧ ಜನ ಆಕ್ರೋಶಿತರಾದ್ರು.ಧರ್ಮ ನಿಂದನೆಯ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಇದು ಜನರ ಧಾರ್ಮಿಕ ಆಚಾರ-ವಿಚಾರ.ಜನರು ಇದನ್ನು ನಂಬುತ್ತಾರೆ. ಒಂದು ನಿಗದಿತ ಸಮುದಾಯದ ಜನರ ವಿರುದ್ಧ ದ್ವೇಷವನ್ನು ಹರಡಿಸುವ ಉದ್ದೇಶದಿಂದ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಲೀನಾ ಮುಖರ್ಜಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ” ಎಂದು ಪಾಲೆಮ್ಬಾಂಗ್ ನ್ಯಾಯಾಲಯವು ತಿಳಿಸಿದೆ.
ಇಸ್ಲಾಮಿಕ್ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಕಾನೂನುಗಳು ಬಲಿಷ್ಠವಾಗಿವೆ.ಅದರಲ್ಲೂ ಧರ್ಮನಿಂದನೆಯ ಕಾನೂನುಗಳು ಬಲಿಷ್ಠವಾಗಿವೆ.ಹೀಗಾಗಿ ಲೀನಾ ಮುಖರ್ಜಿ 2 ವರ್ಷ ಜೈಲು ಹಾಗೂ ದಂಡವನ್ನೂ ಕೂಡ ವಿಧಿಸಲಾಗಿದೆ.