ನ್ಯೂಸ್ ನಾಟೌಟ್ : ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ೫ ಕೋಟಿ ವಂಚನೆ ಆರೋಪ ಹಿನ್ನೆಲೆ ಹಿಂದೂ ಕಾರ್ಯಕರ್ತೆ ಆಗಿದ್ದ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.ಇದೀಗ ವಿಚಾರಣೆ ವೇಳೆ ಒಂದೊಂದೇ ವಿಚಾರಗಳು ಬಯಲಿಗೆ ಬರುತ್ತಿದ್ದು, ಈಗ ಮತ್ತೊಂದು ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ..!
ಈ ಹಿಂದೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮೋಸ್ಟ್ ಕಾಂಟ್ಯಾಕ್ಟ್ ಇದ್ದಿದ್ದು ಮುಸ್ಲಿಂ ಲೀಗ್ ಮಹಿಳಾ ಮುಖಂಡರಾದ ಅಜುಂ ಜೊತೆಗೆ ಎನ್ನುವ ಅಂಶ ಫೋನ್ ಕರೆಗಳ ಪರಿಶೀಲನೆ ಮಾಡಿದಾಗ ತಿಳಿದು ಬಂದಿದೆ.ಇದೀಗ ಚೈತ್ರಾ ಕುಂದಾಪುರ ಅಸಲಿಯತ್ತು ಸಿಸಿಬಿಗೆ ಬಯಲಾಗಿದ್ದು, ಮತ್ತಷ್ಟು ತನಿಖೆಗಳನ್ನು ಮುಂದುವರಿಸಿದ್ದಾರೆ.
ಆಶ್ಚರ್ಯದ ಸಂಗತಿಯೆಂದರೆ ತಮ್ಮ ಪ್ರಖರ ಭಾಷಣಗಳಲ್ಲಿ ಮುಸ್ಲಿಂ ವಿರೋಧಿಯಾಗಿ ಹಾಗೂ ಹಿಂದೂಗಳ ಪರವಾಗಿ ಭಾಷಣ ಮಾಡಿ ಶಿಳ್ಳೆ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದ ಮಿಸ್ ಚೈತ್ರಾ ಕುಂದಾಪುರ ವಾಸ್ತವದಲ್ಲಿ ಮುಸ್ಲಿಂ ಯುವತಿ ಜೊತೆಗೆ ಅತ್ಯಂತ ಹೆಚ್ಚು ಸಂಪರ್ಕ ಹೊಂದಿದ್ದಳು ಎನ್ನುವ ಅಂಶವೂ ಹೊರಬಂದಿದೆ. ಹಣದ ವ್ಯವಹಾರ, ಆಶ್ರಯ ಪಡೆದಿರುವುದು ಸೇರಿ ಹಲವಾರು ವಿಚಾರಗಳಲ್ಲಿ ಚೈತ್ರಾಗೆ ಮುಸ್ಲಿಂ ಯುವತಿ ಸಹಾಯ ಮಾಡಿದ್ದಾಳೆ ಎನ್ನಲಾಗಿದೆ.
ತಮ್ಮ ಪ್ರಖರ ಮಾತುಗಳಿಂದಲೇ ಜನರನ್ನು ಸೆಳೆಯುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉದ್ಯಮಿಯೊಬ್ಬರಿಗೆ ಬರೋಬ್ಬರಿ 7 ಕೋಟಿ ರೂಪಾಯಿ ವಂಚಿಸಿರೋ ಆರೋಪ ಚೈತ್ರಾ ಮೇಲೆ ಕೇಳಿ ಬಂದಿದೆ!ಉದ್ಯಮಿಯೊಬ್ಬರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಚೈತ್ರಾ ಕುಂದಾಪುರ ಮೇಲೆ ಕೇಳಿ ಬಂದಿದೆ. ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸು, ಸಿನಿಮಿಯ ಶೈಲಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿಗೆ ಸುಮಾರು ಏಳು ಕೋಟಿ ರೂಪಾಯಿ ವಂಚನೆ ಮಾಡಿರೋ ಆರೋಪ ಚೈತ್ರಾ ಮೇಲೆ ಕೇಳಿ ಬಂದಿದೆ. ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವರು ದೂರು ನೀಡಿದ್ದರು.ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕ ಗೋವಿಂದ ಬಾಬು ಚೈತ್ರಾ ವಿರುದ್ಧ ಆರೋಪಿಸಿದ್ದಾರೆ. ಉದ್ಯಮಿಯ ಮುಗ್ಧತೆಯನ್ನು ಬಳಸಿಕೊಂಡು ಮಹಾವಂಚನೆ ಮಾಡಿದ್ದಾರೆ ಎನ್ನಲಾಗಿದೆ.ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ನಾಲ್ಕೈದು ಜನರ ತಂಡದಿಂದ ಬೃಹನ್ನಾಟಕ ಮಾಡಲಾಗಿತ್ತಂತೆ. ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರಿನಲ್ಲಿ ಪಂಗನಾಮ ಹಾಕಲಾಗಿದೆ ಎನ್ನಲಾಗಿದೆ.