ನ್ಯೂಸ್ ನಾಟೌಟ್ : CM ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಮೂರು ಗ್ಯಾರಂಟಿಗಳ ಪೈಕಿ ಗೃಹ ಲಕ್ಷ್ಮೀ ಯೋಜನೆಯೂ ಒಂದಾಗಿದ್ದು ಇದಕ್ಕೆ ಚಾಲನೆ ನೀಡಿದ ಕೆಲವೇ ದಿನಗಳಲ್ಲಿ ಹಣ ಬಂದ ಖಾತೆಗಳೇ ನಿಷ್ಕ್ರಿಯವಾಗಿದೆ ಅನ್ನುವ ಆರೋಪ ಕೊಡಗು ಜಿಲ್ಲೆಯ ಮಡಿಕೇರಿಯಿಂದ ಕೇಳಿ ಬಂದಿದೆ.
ಹೌದು, ಬಹು ನಿರೀಕ್ಷಿತ ಯೋಜನೆ ಬಗ್ಗೆ ಎಲ್ಲರಿಗೂ ಸಾಕಷ್ಟು ಕುತೂಹಲವಿತ್ತು, ಅದರಲ್ಲೂ ಎಲ್ಲ ಮಹಿಳೆಯರಿಗೆ ಖಾತೆಗೆ ಹಣ ಬಂದಿದೆಯೇ..? ಅನ್ನುವ ಸಹಜ ಕುತೂಹಲವಿತ್ತು. ಈ ಹಿನ್ನೆಲೆಯಲ್ಲಿ ಚೆಕ್ ಮಾಡುವುದಕ್ಕೆಂದು ಬ್ಯಾಂಕ್ ಗೆ ಹೋದಾಗ ಮಡಿಕೇರಿಯಲ್ಲಿ ಕೆಲವು ಖಾತೆಗಳು ನಿಷ್ಕ್ರಿಯವಾಗಿದೆ ಅನ್ನುವ ವಿಚಾರ ಹೊರಬಿದ್ದಿದೆ.
ಮಡಿಕೇರಿಯ IDB1 ಬ್ಯಾಂಕ್ ಎದುರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹಣ ಚೆಕ್ ಮಾಡುವುದಕ್ಕಾಗಿ ಸುಮಾರು ಅರ್ಧ ಕಿ.ಮೀ. ಗೂ ಹೆಚ್ಚು ಮಹಿಳೆಯರ ಸಾಲು ಬೆಳೆದಿದೆ ಎಂದು ತಿಳಿದು ಬಂದಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಒಂದೊಂದಾಗಿ ಚಾಲನೆ ಸಿಕ್ಕಿತ್ತು. ಇತ್ತೀಚೆಗಷ್ಟೆ ಗೃಹ ಲಕ್ಷ್ಮೀ ಯೋಜನೆಗೂ ಚಾಲನೆ ನೀಡಲಾಗಿತ್ತು.