ನ್ಯೂಸ್ ನಾಟೌಟ್ : 8 ವರ್ಷದ ಬಾಲಕರು ಇನ್ನಷ್ಟೇ ಪ್ರಪಂಚದ ಬಗ್ಗೆ ತಿಳಿದುಕೊಳ್ಳುವ ಸಮಯ.ತಂದೆ ಏನಾದರೂ ಬೈದ್ರೆ ತುಂಬಾನೇ ಭಯಪಡ್ತಾರೆ.ಆದರೆ ಇಲ್ಲೊಬ್ಬ ಬಾಲಕ ತಂದೆಗೆ ಬೆ*ದರಿಕೆ ಪತ್ರ ಬರೆದು ಭಾರಿ ವೈರಲ್ ಆಗಿದ್ದಾನೆ. ಈತನ ಈ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಈ ಪತ್ರದಲ್ಲಿರುವ ಬರವಣಿಗೆಯನ್ನು ನೋಡಿದ ತಕ್ಷಣವೇ ಪುಟ್ಟ ಬಾಲಕನಿಂದಲೇ ಬರೆದ ಪತ್ರವಿದು ಅನ್ನೋದು ತಿಳಿಯುತ್ತೆ.
ಬಾಲಕ ಬರೆದಿರುವ ಪತ್ರವನ್ನು ಕಂಡಾಗ ಒಂದು ಕಡೆಯಿಂದ ನಗು ಬರುತ್ತೆ..ಇನ್ನೊಂದು ಕಡೆಯಿಂದ ಆಶ್ಚರ್ಯನೂ ಆಗುತ್ತೆ. ಮೊದಲಿಗೆ ತನ್ನ ತಂದೆಯ ಹೆಸರನ್ನು ಬರೆದಿದ್ದಾನೆ. ಆತ್ಮೀಯ ಜೋಯಲ್ ಬೆರ್ರಿ, ನಿಮ್ಮ ಮಕ್ಕಳಿಗಾಗಿ ನೀವು ಇಂದು ರಾತ್ರಿ ‘ಐರನ್ ಮ್ಯಾನ್’ ಅನ್ನು ವೀಕ್ಷಿಸಲು ಅವರಿಗೆ ಅವಕಾಶ ನೀಡಬೇಕು. ಅನುಮತಿ ನೀಡದೇ ಹೋದಲ್ಲಿ ನೀವು ಕಣ್ಣು ಮುಚ್ಚೋದು ಖಚಿತ. ಅದರ ಕೆಳಗೆ From, government ಅಂತ ಬರೆದಿದ್ದಾನೆ ಪುಟ್ಟ ಬಾಲಕ..!
ಅಂದ್ರೆ ಇಷ್ಟು ಸಣ್ಣ ಬಾಲಕ ಹೇಗೆ ಬರೆದಿದ್ದಾನೆ ನೋಡಿ, ಅಂದ್ರೆ ಸರ್ಕಾರವೇ ನಿಮಗೆ ಬರೆಯುತ್ತಿರುವ ಪತ್ರ ಇದನ್ನ ಕಡೆಗಣಿಸಬೇಡಿ ಮಕ್ಕಳಿಗೆ ಸಿನಿಮಾ ನೋಡಲು ಅನುಮತಿ ನೀಡಬೇಕು ಅನ್ನೋದು ಪತ್ರ ಬರೆದಿರುವುದರ ಪ್ರಮುಖ ಉದ್ದೇಶವಾಗಿದೆ.ಮಗ ಬರೆದ ಪತ್ರವನ್ನ ಬೆರ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಟ್ವಿಟ್ಟರ್ನಲ್ಲಿ ಶೇರ್ ಮಾಡಲಾದ ಪೋಸ್ಟ್ 80 ಸಾವಿರಕ್ಕೂ ಹೆಚ್ಚಿನ ಲೈಕ್ ಪಡೆದುಕೊಂಡಿದೆ.
ಈ ಬಾಲಕ ತುಂಬಾ ಮುದ್ದಾಗಿ ಪತ್ರವನ್ನ ಬರೆದಿದ್ದಾನೆ. ಈ ಪತ್ರವನ್ನ ನೋಡಿದ್ರೆ ನಾನು ಒಂದು ದಿನ ತಂದೆಯಾಗಬೇಕು ಅನಿಸುತ್ತದೆ ಎಂದು ಓರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.ಅಂತಿಮವಾಗಿ ಮಗನಿಗೆ ಐರನ್ ಮ್ಯಾನ್ ಅನ್ನು ವೀಕ್ಷಿಸಿಯೇ ಬಿಟ್ಟರು ತಂದೆ. ಅನುಮತಿ ನೀಡಿರುವ ಪೋಸ್ಟ್ ಒಂದನ್ನೂ ಜೋಯಲ್ ಬೆರ್ರಿ, ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮಗ ಟಿವಿಯಲ್ಲಿ ಐರನ್ ಮ್ಯಾನ್ ಸಿನಿಮಾ ನೋಡುತ್ತಿರುವ ಚಿತ್ರವನ್ನ ಹಂಚಿಕೊಂಡ ಬೆರ್ರಿ, ಸರ್ಕಾರವು ಈ ಸುತ್ತನ್ನು ಗೆದ್ದಿದೆ ಎಂದು ಬರೆದಿದ್ದಾರೆ.ಬಾಲಕ ಬರೆದಿರುವ ಈ ಪತ್ರವನ್ನ ಫ್ರೇಮ್ ಮಾಡಿಸಿ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.