ನ್ಯೂಸ್ ನಾಟೌಟ್ : ದಟ್ಟ ಕಾಡಿನಲ್ಲಿ ಕಾಡು ಪ್ರಾಣಿಗಳಿರುವ ಕಾಡಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿ ಒಂದು ವಾರದ ಬಳಿಕ ಅಚ್ಚರಿಯ ರೀತಿಯಲ್ಲಿ ಮನೆಗೆ ವಾಪಸ್ ಆದ ಯುವಕನ ಬಗ್ಗೆ ಇದೀಗ ಭಾರಿ ಚರ್ಚೆಗಳು ನಡಿತಿವೆ.ಈ ಒಂದು ಪವಾಡದ ಬಗ್ಗೆ ಜನ ಅಚ್ಚರಿಯಿಂದ ಮಾತನಾಡಿಕೊಳುತ್ತಿದ್ದಾರೆ.ಸದ್ಯ ಅಲ್ಲಿನ ಗ್ರಾಮಸ್ಥರು ಸೇರಿ ಯುವಕ ಹಾಗೂ ಮನೆ ಶ್ವಾನವನ್ನು ಸೇರಿಸಿಕೊಂಡು ಮೆರವಣಿಗೆ ಮಾಡಿದ್ದಾರೆ..!
ಹೌದು,ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಮಚ್ಚೆಟ್ಟು ವ್ಯಾಪ್ತಿಯ ವಿವೇಕಾನಂದ (Vivekananda Rescued By Dog) ಎಂಬ ಯುವಕ ವಾರದ ಹಿಂದೆ ಕಣ್ಮರೆಯಾಗಿದ್ದ.ಊರಿಗೆ ಊರೇ ಇವನ ಹುಡುಕಾಟದಲ್ಲಿ ತೊಡಗಿತ್ತು. ಪೊಲೀಸರು ಅರಣ್ಯ ಇಲಾಖೆ ಕುಟುಂಬಸ್ಥರು ಎಷ್ಟೇ ಹುಡುಕಾಡಿದರೂ ಯುವಕನ ಪತ್ತೆ ಆಗಿರಲಿಲ್ಲ. ಮನೆಯ ಸಾಕು ನಾಯಿ ಯುವಕನನ್ನ 7 ದಿನದ ಬಳಿಕ ಕರೆದುಕೊಂಡು ಬಂದಿದೆ.ಇದರಿಂದ ಇಡೀ ಗ್ರಾಮಕ್ಕೆ ಅಚ್ಚರಿ ಮತ್ತು ಸಂತಸವಾಗಿದೆ.ಗಾಬರಿಯಿಂದಿದ್ದ ಮನೆ ಮಂದಿ ನಿರಾಳರಾದರು.ದೈವ ದೇವರುಗಳ ಆಶೀರ್ವಾದದಿಂದ ಈತ ಮರಳಿ ಬಂದಿದ್ದಾನೆ ಎಂದು ಖುಷಿ ಪಟ್ಟರು. ಇದೀಗ ಮೆರವಣಿಗೆ ಮಾಡಲಾಗಿದ್ದು, 50ಕ್ಕಿಂತ ಹೆಚ್ಚು ಬೈಕ್ ಟೆಂಪೋ ಆಟೋರಿಕ್ಷಾಗಳ ಮೆರವಣಿಗೆ ಮಾಡಲಾಯ್ತು.
ತೆರೆದ ವಾಹನದಲ್ಲಿ ಶ್ವಾನ ಚಿಂಟು ಮತ್ತು ವಿವೇಕಾನಂದ ಕುಟುಂಬಸ್ಥರು ಆಪ್ತರನ್ನು ಗೆಳೆಯರ ಬಳಗ ಮೆರವಣಿಗೆ ಮಾಡಿದೆ. ನಂತರ ಮನೆಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ರೀತಿಯಲ್ಲೇ ಖುಷಿಯನ್ನು ಆಚರಿಸಲಾಯ್ತು. ಸುತ್ತಮುತ್ತಲ ಮನೆಯವರಿಗೆ ಗೆಳೆಯರ ಬಳಗಕ್ಕೆ ಹುಡುಕಾಡಲು ಸಹಾಯ ಮಾಡಿದ ಎಲ್ಲರಿಗೆ ಶೀನಾ ನಾಯ್ಕ ಕುಟುಂಬ ಸಿಹಿಯೂಟ ಹಾಕಿಸಿ ಸಂಭ್ರಮ ವ್ಯಕ್ತ ಪಡಿಸಿದೆ.
ಯುವಕ ವಿವೇಕಾನಂದ ಕಣ್ಮರೆಯಾದ ಸುದ್ದಿ ಯಾವಾಗ ತಿಳಿಯಿತೋ ಇದು ಕಾಡ್ಗಿಚ್ಚಿನಂತೆ ಹಬ್ಬಿತ್ತು. ನಂತರ ಹಲವರು ಹಲವು ಅಭಿಪ್ರಾಯಗಳನ್ನು ಕೊಟ್ಟರು.ಮನೆ ಮಂದಿ ದೈವ ದೇವರುಗಳ ಮೊರೆ ಹೋದರು.ಕೊರಗಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಲಾಯಿತು.ಬಳಿಕ ಜ್ಯೋತಿಷಿಗಳಲ್ಲಿ ಪ್ರಶ್ನಾ ಚಿಂತನೆ ಮಾಡಲಾಗಿತ್ತು. ತಮ್ಮ ಜಮೀನಿನಲ್ಲಿದ್ದ ಒಂದು ವಿಶೇಷ ಕಲ್ಲಿಗೆ ಪೂಜೆ ಪುನಸ್ಕಾರವನ್ನು ಕೂಡ ಕುಟುಂಬಸ್ಥರು ನೆರವೇರಿಸಿದ್ದಾರೆ. ಕಣ್ಮರೆಯಾಗುವ ಮೊದಲು ಆ ಯುವಕ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದು, ಆ ಕಲ್ಲಿನಲ್ಲಿ ದೈವೀಶಕ್ತಿ ಇರಬಹುದು ಎಂದು ಪೋಷಕರು ನಂಬಿದ್ದಾರೆ. ಈ ಘಟನೆಯ ಸತ್ಯಾಸತ್ಯತೆ ಕುರಿತಂತೆ ಚರ್ಚೆ ಕೂಡಾ ನಡೆಯುತ್ತಿದೆ.