ನ್ಯೂಸ್ ನಾಟೌಟ್ : ಉದ್ಯಮಿಗೆ ಬಿಜೆಪಿಯಿಂದ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ 5 ಕೋಟಿ ಪಡೆದು ವಂಚನೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ.ಇದೀಗ ಅವರು ಇಷ್ಟೆಲ್ಲಾ ಪ್ರಖ್ಯಾತಿಯಾಗಲು ಕಾರಣವೇನು ಅನ್ನೋದಕ್ಕೆ ರೋಚಕ ಸಂಗತಿಗಳು ಬಯಲಾಗ್ತ ಇದೆ.ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆ ಒಂದು ಟ್ವೀಟೇ ಆಕೆಗೆ ಇನ್ನಷ್ಟು ಬಲ ನೀಡಿತ್ತು.
ಹೌದು, ಅಂದು ಚೈತ್ರಾ ಕುಂದಾಪುರ ಅವರ ವಿಡಿಯೋವೊಂದಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದರು.ಆ ಒಂದು ಟ್ವೀಟ್ ಚೈತ್ರಾ ಕುಂದಾಪುರ ಅವರಿಗೂ ಹೆಚ್ಚು ಶಕ್ತಿ ನೀಡಿತು.ಈ ಟ್ವೀಟ್ ಬಳಿಕ ಚೈತ್ರಾ ಕುಂದಾಪುರ ರಾಜ್ಯಾದ್ಯಂತ ತನ್ನ ಹವಾ ಕ್ರಿಯೇಟ್ ಮಾಡಿಕೊಂಡಿದ್ದರು.
ಚೈತ್ರಾ ಕುಂದಾಪುರ ಮಾತಿಗೆ ನಿಂತ್ರೆ ಬೆಂಕಿಯಂತಹ ಭಾಷಣ..ಅವರ ಭಾಷಣ ಕೇಳಿದ್ರೆ ಅಬ್ಬಾ..ಎಂತಹ ಡೇರಿಂಗ್ ಇರಬೇಕು ಇವರಿಗೆ ಅಂತ ಯಾರೂ ಅಂದುಕೊಳ್ಳದೇ ಇರಲು ಸಾಧ್ಯವೇ ಇಲ್ಲ.ಇವರ ವಿಡಿಯೋ ನೋಡಿ ಸ್ವತಃ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಶಾಕ್ ಆಗಿದ್ದರು. ಚೈತ್ರಾ ಕುಂದಾಪುರಳನ್ನು ‘ಡೇರಿಂಗ್ ಗರ್ಲ್’ ಎಂದಿದ್ದರು. 2018 ರಲ್ಲಿ ಚೈತ್ರಾ ಡೇರಿಂಗ್ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದರು.
ಚೈತ್ರಾ ಅಂದು ಕಾಂಗ್ರೆಸ್, ಎಡಪಕ್ಷಗಳ ಭಾರತ್ ಬಂದ್ ಅನ್ನು ವಿರೋಧಿಸಿ ಮಾಡಿದ ಭಾಷಣ ಹಲವು ಬಿಜೆಪಿ ನಾಯಕರ ಗಮನವನ್ನು ಸೆಳೆದಿತ್ತು.ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಚೈತ್ರಾ ಜಗಳಕ್ಕಿಳಿದಿದ್ದರು. ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದಳು. ಕಾಂಗ್ರೆಸ್ ವಿರುದ್ಧ ಒಬ್ಬಂಟಿಯಾಗಿ ಮಾಡಿದ ಹೋರಾಟದ ವಿಡಿಯೋ ಭಾರೀ ಸದ್ದು ಮಾಡಿತ್ತು. ಆ ಒಂದು ವೀಡಿಯೋ ಬಿಜೆಪಿ ವರಿಷ್ಠರ ಗಮನವನ್ನೂ ಸೆಳೆದಿತ್ತು.
ವಿಡಿಯೋ ನೋಡಿ ರೀಟ್ವೀಟ್ ಮಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೈತ್ರಾ ಕುಂದಾಪುರಳನ್ನ ಗುಣಗಾನ ಮಾಡಿದ್ದರು.ಆ ಮೂಲಕ ಚೈತ್ರಾ ಕುಂದಾಪುರ ತನ್ನ ಹವಾ ಸೃಷ್ಟಿಸಿದ್ದರು. ಮೋದಿ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಅಂದು ಅಬ್ಬರಿಸಿದ್ದು,ಚೈತ್ರಾಗೆ ಭಾರಿ ಡಿಮ್ಯಾಂಡ್ ಬರುವಂತಾಯಿತು.
ಒಟ್ಟಿನಲ್ಲಿ ನಿರ್ಮಲಾ ಸೀತರಾಮನ್ ಅವರ ಒಂದು ಒಂದು ಟ್ವೀಟ್ನಿಂದಾಗಿ ತನಗೆ ಕೇಂದ್ರದ ಜೊತೆಗೆ ಲಿಂಕ್ ಇರುವುದಾಗಿ ಬಿಂಬಿಸಿಕೊಂಡಿದ್ದ ಚೈತ್ರಾ ಗೋವಿಂದ ಪೂಜಾರಿಗೆ ಪಂಗನಾಮ ಹಾಕೋದಕ್ಕೆ ದಾರಿ ತುಂಬಾ ಸುಲಭವಾಯಿತು. ಇಂದಿಗೂ ಕೂಡ ತಾನು ನಿರ್ಮಲಾ ಸೀತಾರಾಮನ್ ಜೊತೆಗೆ ಸಂಪರ್ಕವಿರುವುದಾಗಿ ಚೈತ್ರಾ ಕುಂದಾಪುರ ಬಿಂಬಿಸಿ ನಂಬಿಸಿದ್ದಳು.