ನ್ಯೂಸ್ ನಾಟೌಟ್: ಚೈತ್ರಾ ಕುಂದಾಪುರ ಪ್ರಕರಣಕ್ಕೂ, ಹಿಂದೂಪರ ಸಂಘಟನೆ ಸದಸ್ಯರ ವಿರುದ್ಧ ಕೇಸು ಎನ್ನುವ ಆರೋಪಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಸದಾಶಿವನಗರದ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಗೃಹಸಚಿವರು, ಬಿಜೆಪಿಯಲ್ಲಿ (BJP) ಟಿಕೆಟ್ ಕೊಡಿಸೋದಾಗಿ ಹಣ ಪಡೆದಿದ್ದಾರೆ ಎಂಬುದು ನನಗೆ ಬಂದ ಮಾಹಿತಿ ಇದೆ. 3.5 ಕೋಟಿ ಹಣ ಪಡೆದಿರುವ ಕಂಪ್ಲೆಂಟ್ ಆಗಿದೆ. ಆ ಪ್ರಕರಣದಲ್ಲಿ ಕಂಪ್ಲೆಂಟ್ ಪಡೆದು ವಿಚಾರಣೆ ನಡೆಯುತ್ತಿದೆ.
ಉಳಿದ ವಿಚಾರ ತನಿಖೆ ಬಳಿಕ ಗೊತ್ತಾಗಲಿದೆ. ಅವರ ಹೇಳಿಕೆ ತೆಗೆದುಕೊಂಡು ಕೋರ್ಟ್ ಅನುಮತಿಯ ಮೇರೆಗೆ ಬಂಧನ ಆಗಿದೆ. ಸ್ವಾಮೀಜಿ ಇದ್ದಾರೆ ಎಂದರೆ ತನಿಖೆ ಆಗುತ್ತದೆ. ಸ್ವಾಮೀಜಿಯವರ ತಪ್ಪಿದ್ದರೆ, ಅವರ ಬಂಧನ ಕೂಡ ಆಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯವರು ಆರೋಪ ಮಾಡುತ್ತಾರೆ. ಪೊಲೀಸರು ಸುಮೋಟೊ ಕೇಸು ಹಾಕಿಕೊಂಡಿಲ್ಲ. ದೂರಿನ ಆಧಾರದ ಮೇಲೆ ಬಂಧನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಯಾರಿಂದ ತಪ್ಪು ಆಗಿದೆಯೋ ಅವರ ವಿರುದ್ಧ ಕ್ರಮ ಆಗಲಿದೆ. ಹಿಂದೂ ಪರವಾದ ಭಾಷಣ ಮಾಡಿದ್ದಾರೆ. ಅದನ್ನ ಇದಕ್ಕೆ ಮಿಕ್ಸಪ್ ಮಾಡುವುದು ಬೇಡ ಎಂದಿದ್ದಾರೆ.
ಇದನ್ನೂ ಓದಿ: MLA ticket cheating case:ಉದ್ಯಮಿಯನ್ನು ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ಚೈತ್ರಾ ಕುಂದಾಪುರ..!
ಸಚಿವ ಸುಧಾಕರ್ ಅವರಿಂದ ಅನ್ಯಾಯಕ್ಕೊಳಗಾದವರ ಮನೆಗೆ ಬಿಜೆಪಿ ನಿಯೋಗದ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲೇ ಹೋಗಬೇಕಿತ್ತು. ಈಗ ಯಾಕೆ ಹೋಗುತ್ತಿದ್ದಾರೆ? ಹತ್ತು ವರ್ಷದ ಹಳೆಯ ಪ್ರಕರಣ ಎಂದು ಸುಧಾಕರ್ ಹೇಳಿದ್ದಾರೆ. ಅದನ್ನ ಈಗ ಮತ್ತೆ ಕೆದಕುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.